ದೇವಸ್ಥಾನ ಸರಕಾರಿಕರಣದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ’ ನಡೆಸುವೆವು !

2:26 PM, Tuesday, June 4th, 2019
Share
1 Star2 Stars3 Stars4 Stars5 Stars
(No Ratings Yet)
Loading...

HJJಪಣಜಿ (ಗೋವಾ) : ‘ಮೇ 27 ರಿಂದ ಜೂನ್ 4 ರ ವರೆಗೆ ಗೋವಾದಲ್ಲಿ ನಡೆದ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕೆ ಭಾರತದ 25 ರಾಜ್ಯ ಹಾಗೂ ಬಾಂಗ್ಲಾದೇಶದಿಂದ ಒಟ್ಟು174  ಹಿಂದುತ್ವನಿಷ್ಠ ಸಂಘಟನೆಗಳ 520 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಅಧಿವೇಶನದಲ್ಲಿ ಹಿಂದೂಗಳ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಸ್ಯೆಗಳೊಂದಿಗೆ ದೇವಸ್ಥಾನಗಳ ಸರಕಾರಿಕರಣದ ಬಗ್ಗೆ ವ್ಯಾಪಕ ಚರ್ಚೆ ಮಾಡಲಾಯಿತು. ಭಾರತದ ಸಂವಿಧಾನವು ‘ಜಾತ್ಯತೀತ’ವಾಗಿದ್ದರೂ ಸರಕಾರ ಹಿಂದೂಗಳ ವ್ಯವಸ್ಥಾಪನೆಯನ್ನು ಹೇಗೆ ನೋಡಿಕೊಳ್ಳಲು ಸಾಧ್ಯ ?’, ಎಂದು ಸರ್ವೋಚ್ಚ ನ್ಯಾಯಾಲಯವು 2 ಸಲ ವಿಚಾರಿಸಿದೆ. ಭಾರತದಲ್ಲಿ ಕೇವಲ ಹಿಂದೂಗಳ ದೇವಸ್ಥಾನವನ್ನು ಸರಕಾರಿಕರಣ ಮಾಡುವ ಸರಕಾರ ಮಸೀದಿ, ಚರ್ಚ್ ಇತ್ಯಾದಿ ಸರಕಾರಿಕರಣ ಮಾಡಲು ಏಕೆ ಹಿಂಜರಿಯುತ್ತದೆ ? ಸರಕಾರಿಕರಣ ಮಾಡಿದ ದೇವಸ್ಥಾನಗಳ ಸ್ಥಿತಿ ಭಯಾನಕವಾಗಿದೆ. ಅನೇಕ ದೇವಸ್ಥಾನಗಳ ಸಮಿತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಶಪಡಿಸಿಕೊಂಡಿರುವ ದೇವಸ್ಥಾನಗಳ ಪರಂಪರೆ, ವ್ಯವಸ್ಥೆ ಇತ್ಯಾದಿಗಳಲ್ಲಿ ಹಸ್ತಕ್ಷೇಪ ಮಾಡಿ ಅದರಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಭಕ್ತರು ಎಂದೂ ಸಹಿಸುವುದಿಲ್ಲ. ದೇವಸ್ಥಾನಕ್ಕಾಗಿ ಹಿಂದೂಗಳ ಒಂದು ವ್ಯವಸ್ಥಾಪನಾ ಸಮಿತಿಯನ್ನು ಸ್ಥಾಪಿಸಿರಿ. ಈ ಸಮಿತಿಯಲ್ಲಿ ಶಂಕರಾಚಾರ್ಯರು, ಧರ್ಮಾಚಾರ್ಯರು, ಧರ್ಮನಿಷ್ಠ ನ್ಯಾಯವಾದಿಗಳು, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ನೇಮಿಸಿ. ದೇವಸ್ಥಾನಗಳ ಬಗ್ಗೆ ನಿರ್ಣಯವನ್ನು ‘ಸೆಕ್ಯುಲರ್’ ಸರಕಾರ ತೆಗೆದುಕೊಳ್ಳದೇ, ಆ ಅಧಿಕಾರವನ್ನು ಸಮಿತಿಯವರಿಗೆ ನೀಡಬೇಕು”, ಎಂದೂ ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸುತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಆಗ್ರಹಿಸಿದರು. ಅವರು ಜೂನ್ ೩ ರಂದು ಇಲ್ಲಿಯ ಹೋಟೆಲ್ ಮನೋಶಾಂತಿಯಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ‘ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಒಡಿಶಾದ ಶ್ರೀ. ಅನೀಲ ಧೀರ, ‘ಹಿಂದೂ ಚಾರ್ಟರ್’ನ ದೆಹಲಿಯಲ್ಲಿನ ಸೌ. ರಿತು ರಾಠೊಡ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಉಪಸ್ಥಿತರಿದ್ದರು.

ಪತ್ರಕರ್ತರನ್ನು ಸಂಬೋಧಿಸಿ ಮಾತನಾಡಿದ ಸದ್ಗುರು (ಡಾ.) ಪಿಂಗಳೆಯವರು, “ಕಾನೂನಿನ ಮೂಲಕ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಅಧಿಕಾರವು ಸರಕಾರಕ್ಕೆ ಸಿಕ್ಕಿಲ್ಲ. ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ನಟರಾಜ ದೇವಸ್ಥಾನ ಸಂದರ್ಭದಲ್ಲಿ ತೀರ್ಪನ್ನು ನೀಡುವಾಗ ಸ್ಪಷ್ಟ ಪಡಿಸಿತೇನೆಂದರೆ, ಯಾವುದೇ ಸೆಕ್ಯುಲರ್ ಸರಕಾರಕ್ಕೆ ದೇವಸ್ಥಾನವನ್ನು ಸರಕಾರಿಕರಣ ಮಾಡಿ ಅದನ್ನು ಶಾಶ್ವತವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವ ಅಧಿಕಾರವಿಲ್ಲ. ಅದೇ ರೀತಿ ದೇವಸ್ಥಾನದ ಜಮೀನನ್ನು ‘ಸರಕಾರದ ಭೂಮಿ’ ಎಂದು ಸರಕಾರ ಅದನ್ನು ಉಪಯೋಗಿಸುವಂತಿಲ್ಲ. ಒಂದು ವೇಳೆ ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದ್ದಲ್ಲಿ, ಅಲ್ಲಿ ಸರ್ಕಾರಿ ಅಧಿಕಾರಿಯನ್ನು ನೇಮಿಸಿ ಅಲ್ಲಿಯ ಹಗರಣವನ್ನು ದೂರಮಾಡಲು ಉಪಾಯೋಜನೆಯನ್ನು ಮಾಡಿ ಅದನ್ನು ಪುನಃ ಸಮಾಜಕ್ಕೆ ಕೊಡಬೇಕು. ಪ್ರತ್ಯಕ್ಷದಲ್ಲಿ ಮಾತ್ರ ಸರ್ಕಾರವು ಈ ದೇವಸ್ಥಾನಗಳನ್ನು ಹಾಲು ಕೊಡುವ ಹಸು ಎಂದು ತಿಳಿದು ದೇವಸ್ಥಾನ ಗಳನ್ನು ಕಬಳಿಸಿ ಕುಳಿತಿದೆ, ಸೆಕ್ಯುಲರ್‌ನ ತೆರೆಮರೆಯಲ್ಲಿ ಆಧುನಿಕ ಗಝನಿಯಾಗಿರುವ ಈ ಸರಕಾರಿ ಪ್ರತಿನಿಧಿಗಳನ್ನು ದೇವಸ್ಥಾನದಿಂದ ಹೊರಹಾಕಿ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಕೊಡುವುದು ಅವಶ್ಯಕವಿದೆ. ಅದಕ್ಕಾಗಿ ಮುಂಬರುವ ವರ್ಷದಲ್ಲಿ ಭಾರತದಾದ್ಯಂತ ಹಿಂದುತ್ವನಿಷ್ಠ ಸಂಘಟನೆಗಳು ಸಂಘಟಿತರಾಗಿ ‘ದೇವಸ್ಥಾನ-ಸಂಸ್ಕೃತಿ ರಕ್ಷಣ ಅಭಿಯಾನ’ ಹೆಸರಿನ ರಾಷ್ಟ್ರವ್ಯಾಪಿ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.

ಈ ಸಮಯದಲ್ಲಿ ಒಡಿಶಾದಲ್ಲಿಯ ಶ್ರೀ. ಅನೀಲ ಧೀರ ಅವರು ಮಾತನಾಡುತ್ತಾ, “ಸರಕಾರಿ ಪುರಾತತ್ವ ಇಲಾಖೆಗೆ ದೇವಸ್ಥಾನದ್ದಲ್ಲ, ಬದಲಾಗಿ ತಾಜಮಹಲಿನ ಕಾಳಜಿ ಇದೆ. ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಮತ್ತು ಕೋನಾರ್ಕನ ಸೂರ್ಯಮಂದಿರ ಸರಕಾರದ ವಶದಲ್ಲಿದೆ. ಯೋಗ್ಯ ಪದ್ದತಿಯಲ್ಲಿ ಅದನ್ನು ನೋಡಿಕೊಳ್ಳುತ್ತಿಲ್ಲ. ಈ ದೇವಸ್ಥಾನಕ್ಕೆ ೫೦೦ ವರ್ಷಗಳಾಗಿರದೇ ಇರುವಂತಹ ದುರ್ದೆಶೆ ಕಳೆದ ೫೦ ವರ್ಷಗಳಲ್ಲಿ ಆಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English