- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಿಯುಸಿ ಫಲಿತಾಂಶಃ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ

PUC Result [1]

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು,ಶೇ. 86.1 ಫಲಿತಾಂಶ ಲಭಿಸಿದೆ. ಉಡುಪಿ ದ್ವಿತೀಯ (ಶೇ.85.32) ಸ್ಥಾನ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಶೇ.32.21ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ.

ರಾಜ್ಯದಲ್ಲಿ ಈ ಬಾರಿ ಪಿಯುಸಿಯಲ್ಲಿ ಒಟ್ಟು ಶೇ.57.03ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.8.01ರಷ್ಟು ಹೆಚ್ಚಳವಾಗಿದೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಎಂ.ದೀಪಾ ಮಲ್ಲೇಶ್ವರದ ಎಂಇಎಸ್ ಕಿಶೋರ ವಿದ್ಯಾಲಯದ ವಿದ್ಯಾರ್ಥಿನಿ 593 (ಶೇ 98.83) , ವಾಣಿಜ್ಯ ವಿಭಾಗದಲ್ಲಿ ರವೀನಾ ಬಿ ಜೈನ್ ಮಹಾವೀರ್ ಜೈನ್ ಕಾಲೇಜು ಬೆಂಗಳೂರು 591 (ಶೇ 98.57), ಮತ್ತು ಕಲಾ ವಿಭಾಗದಲ್ಲಿ ಶಶಿಕಲಾ ಹುಬ್ಬಳಿ ಕುಂದಗೋಳ 569 (ಶೇ 94.83) ಅಂಕಗಳನ್ನು ಪಡೆದಿದ್ದಾರೆ, ಇವರು ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿದ್ದರೆ. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ 554(ಶೇ 92.33), ವಾಣಿಜ್ಯ ವಿಭಾಗದಲ್ಲಿ 582 (ಶೇ 97.00), ವಿಜ್ಞಾನ ವಿಭಾಗದಲ್ಲಿ 584(97.33). ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ 554 (ಶೇ 92.33), ವಾಣಿಜ್ಯ-579 (ಶೇ 96.50) ಹಾಗೂ ವಿಜ್ಞಾನ ವಿಭಾಗದಲ್ಲಿ 575 (ಶೇ 95.83) ಅಂಕಗಳನ್ನು ಪಡೆದಿದ್ದಾರೆ.

ಮಂಗಳೂರಿನ ಎಕ್ಸ್‌ಪರ್ಟ್‌ ಪ,ಪೂ. ಕಾಲೇಜಿನ‌ ಸುಮಂತ್‌ ಮತ್ತು ಅಳಿಕೆ ಸತ್ಯಸಾಯಿ ಲೋಕ ಸೇವಾ ಪ,ಪೂ. ಕಾಲೇಜಿನ ಚಿದಾನಂದ ಅವರು ವಿಜ್ಞಾನ ವಿಭಾಗದಲ್ಲಿ ತಲಾ 589 ಅಂಕಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ. ಪುತ್ತೂರು ಅಂಬಿಕಾ ಪ.ಪೂ. ಕಾಲೇಜಿನ ಶ್ವೇತಾ ಕೆ.ಎಸ್‌. 588 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.

ರಾಜ್ಯ ಮಟ್ಟದ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಹಿಂದೆ 2006-07 ಮತ್ತು 2008-09ರಲ್ಲಿ ಪ್ರಥಮ ಸ್ಥಾನ ಲಭಿಸಿತ್ತು. 2010-11ರಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಪದವಿ ಪೂರ್ವ ಶಿಕ್ಷಣ ಒದಗಿಸುವ ಒಟ್ಟು 170 ಕಾಲೇಜುಗಳಿವೆ. ಮಂಗಳೂರು ತಾಲೂಕಿನಲ್ಲಿ 85, ಬಂಟ್ವಾಳ 25, ಪುತ್ತೂರು 27, ಸುಳ್ಯ 13ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 20 ಕಾಲೇಜುಗಳಿವೆ.

ಫಲಿತಾಂಶವನ್ನು ಬೆಂಗಳೂರಿನಲ್ಲಿ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಕಾಲೇಜುಗಳಲ್ಲಿ ಗುರುವಾರ ಪ್ರಕಟವಾಗಲಿದೆ. ಬುಧವಾರ ಇಂಟರ್‌ನೆಟ್‌ ಫಲಿತಾಂಶ ಲಭ್ಯವಿತ್ತು.

ಜಿಲ್ಲೆಯ 2004ರಿಂದ 2012ರ ವರೆಗಿನ ಅವಧಿಯ ಪ.ಪೂ. ಪರೀಕ್ಷಾ ಫಲಿತಾಂಶ ವಿವರ: 2004- 05ರಲ್ಲಿ ಶೇ. 76.16, 2005 – 06ರಲ್ಲಿ ಶೇ. 79.21, 2006 – 07ರಲ್ಲಿ ಶೇ. 80.33, 2007 – 08ರಲ್ಲಿ ಶೇ. 76.72, 2008 – 09ರಲ್ಲಿ ಶೇ. 80.92, 2009 – 10ರಲ್ಲಿ ಶೇ. 88.93 ಹಾಗೂ 2010 – 11ರಲ್ಲಿ ಶೇ. 86.59. ಪಡೆದಿತ್ತು.