ಶ್ರೀಕೃಷ್ಣ ಮಠದ ಸುವರ್ಣ ಗೋಪುರಕ್ಕೆ 1008 ಕಲಶಗಳ ಅಭಿಷೇಕ

1:29 PM, Friday, June 7th, 2019
Share
1 Star2 Stars3 Stars4 Stars5 Stars
(No Ratings Yet)
Loading...

Udupi-math gopur ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಗುರುವಾರ ಮೂರು ಸ್ವರ್ಣ ಶಿಖರಗಳ ಪ್ರತಿಷ್ಠೆ, 1008 ಕಲಶಗಳ ಅಭಿಷೇಕ ನಡೆಯಿತು.

ಸ್ವರ್ಣ ಗೋಪುರಕ್ಕೆ ಅಟ್ಟಳಿಗೆ ಕಟ್ಟಿ ಅಲ್ಲಿ ನಿಂತು ವಿವಿಧ ಮಠಾಧೀಶರು ಮೂರೂ ಶಿಖರಗಳಿಗೆ ಅಭಿಷೇಕ ಮಾಡಿದರು. ಪರ್ಯಾಯ ಶ್ರೀ ಪಲಿಮಾರು ಮಠದ ಹಿರಿಯ, ಕಿರಿಯ, ಶ್ರೀ ಪೇಜಾವರ ಮಠದ ಹಿರಿಯ, ಕಿರಿಯ, ಶ್ರೀ ಅದಮಾರು ಮಠದ ಹಿರಿಯ, ಕಿರಿಯ, ಶ್ರೀ ಕೃಷ್ಣಾಪುರ, ಶ್ರೀ ಕಾಣಿಯೂರು, ಶ್ರೀ ಸೋದೆ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Udupi-math gopur ಗೋಶಾಲೆ ಎದುರು 1008 ಕಲಶಗಳ ಪೂಜೆಯನ್ನು ಪರ್ಯಾಯ ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿಗಳು ನಡೆಸಿದರು. ಎಲ್ಲರಿಗೂ ನೇರ ನೋಡಲು ಅವಕಾಶವಿಲ್ಲದ ಕಾರಣ ಟಿವಿ ಪರದೆ ಮೇಲೆ ವಿವಿಧೆಡೆ ಬಿತ್ತರಿಸಲಾಯಿತು. ಬೆಳಗ್ಗೆ ಸುಮಾರು 5.30ರಿಂದ ಆರಂಭಗೊಂಡ ಕಲಶಾಭಿಷೇಕ ಸುಮಾರು 9 ಗಂಟೆ ವರೆಗೆ ನಡೆಯಿತು. ಶಾಸಕ ಕೆ. ರಘುಪತಿ ಭಟ್‌ ಮೊದಲಾದವರು ಪಾಲ್ಗೊಂಡಿದ್ದರು.

ಶ್ರೀಕೃಷ್ಣ ಮಠದ ಹೊರಗೆ ಜಿಲ್ಲಾ ಭಜನ ಮಂಡಳಿ ಗಳ ಒಕ್ಕೂಟದಿಂದ ಭಜನೆ ನಡೆಯಿತು. ಭಜನ ಕಾರ್ಯಕ್ರಮವನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಅವರು ಉದ್ಘಾಟಿಸಿದರು.

ಶಿಖರ ಅಭಿಷೇಕದಲ್ಲಿ 88 ವರ್ಷ ಪ್ರಾಯದ ಪೇಜಾವರ ಶ್ರೀಗಳು ಪಾಲ್ಗೊಂಡ ಹಿರಿಯ ರಾದರೆ ಇತ್ತೀಚೆಗೆ ಸನ್ಯಾಸಾಶ್ರಮ ಸ್ವೀಕರಿಸಿದ ಪಲಿಮಾರು ಮಠದ ಕಿರಿಯ ಯತಿಗಳು ಅತಿ ಕಿರಿಯರಾಗಿದ್ದರು.
ವರುಣಾಗಮನಬುಧವಾರ ರಾತ್ರಿಯೇ ಉಡುಪಿ ನಗರದಲ್ಲಿ ಮಳೆ ಬಂದಿತ್ತು. ಗುರುವಾರ ಬೆಳಗ್ಗೆ ಕಲಶಾಭಿಷೇಕ ನಡೆಯುವಾಗ ತುಂತುರು ವೃಷ್ಟಿ ಯಾಯಿತು.

Udupi-math gopur

Udupi-math gopur

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English