ತೊಕ್ಕೊಟ್ಟು ಪ್ಲೈಓವರ್ ಉದ್ಘಾಟನೆ

12:57 PM, Thursday, June 13th, 2019
Share
1 Star2 Stars3 Stars4 Stars5 Stars
(No Ratings Yet)
Loading...

Thokkottu-bridgeಮಂಗಳೂರು  :  ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಕಾಸರಗೋಡು ನಡುವಿನ ತೊಕ್ಕೊಟ್ಟು ಬಳಿ ನಿರ್ಮಾಣಗೊಂಡ ಚತುಷ್ಪಥ ರಸ್ತೆ ಮೇಲ್ಸೇತುವೆ (ಫ್ಲೈ ಓವರ್) ,ಗುರುವಾರ  ಬೆಳಗ್ಗೆ ಲೋಕಾರ್ಪಣೆಗೊಂಡಿತು.

ನೂತನ ಫ್ಲೈಓವರ್ ಅನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಹಲವಾರು ವರ್ಷ ಗಳ ಮೇಲ್ಸೇತುವೆಯ ಕನಸು ಇದೀಗ ಉದ್ಘಾಟನೆಯ ಮೂಲಕ ನನಸಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಪ್ಲೈ ಓವರ್ ಗೆ ಆರ್ಥಿಕ ಸಂಕಷ್ಟ ಎದುರಾಗಿದ್ದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಪಂಪುವೆಲ್ ಮೇಲ್ಸೇತುವೆ ಕಾಮಗಾರಿಯೂ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ತೊಕ್ಕೊಟ್ಟು‌ ಬೈಪಾಸ್ ಹಾಗೂ ಸರ್ವಿಸ್ ರಸ್ತೆಯ ನಿರ್ಮಾಣದ ಬಗ್ಗೆ ಸಚಿವ ಯು.ಟಿ.ಖಾದರ್ ಅವರ ಜೊತೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಳಿನ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ಮಾಜಿ ಶಾಸಕ‌ ಜಯರಾಮ ಶೆಟ್ಟಿ, ಮುಖಂಡರಾದ ಚಂದ್ರಹಾಸ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಮನೋಜ್ ಆಚಾರ್ಯ, ಹರಿಯಪ್ಪ ಸಾಲಿಯಾನ್, ಸತೀಶ್ ಕುಂಪಲ, ರವೀಂದ್ರ ಶೆಟ್ಟಿ ಹರೇಕಳ  ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ಎಂಟು ವರ್ಷಗಳ ಹಿಂದೆ ಆರಂಭಗೊಂಡ ಈ ಫ್ಲೈಓವರ್ ಕಾಮಗಾರಿ ಎಂಟು ವರ್ಷ ಗಳ ಕಾಲ ಕುಂಟುತ್ತಾ ಸಾಗಿ ಇಂದು ಸಂಚಾರಕ್ಕೆ ಮುಕ್ತಗೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English