ಮೂಡುಬಿದಿರೆ : ಸರಕಾರದ ಸವಲತ್ತುಗಳು ಜನರಿಗೆ ಸಿಗಬೇಕಾದರೆ ನಿಮ್ಮ ಕೈಕಾಲು ಇಡಿಯಬೇಕಾ?, ನಾಡ ಕಛೇರಿಯಲ್ಲಿ ಏನುಬೇಕೋ ಅದನ್ನು ಪಡಕೊಳ್ಳುವುದು ಜನರ ಹಕ್ಕು, ಮಗುವಿನ ಜನನ ಸರ್ಟಿಫಿಕೇಟು ಕೊಡಲು ಒಂದು ತಿಂಗಳು ಬೇಕಾ?, ನಿಮಗೆ ಊಟ ಅನ್ನಾ ಬೇಕಾದರೆ ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ಮೂಡಬಿದಿರಿ ನಾಡಕಛೇರಿ ಸಿಬ್ಬಂದಿಗಳಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಎಚ್ಚರಿಸಿದರು.
ಮೂಡುಬಿದಿರೆ ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಶಾಸಕ ಉಮಾನಾಥ್ ಕೋಟ್ಯಾನ್ ಆಕ್ರೋಶಗೊಂಡಿದ್ದಾರೆ. ಕಛೇರಿ ವೇಳೆ ಫೋನ್ ತಂದರೆ ಎಚ್ಚರಿಗೆ ಎಂದು ಅವಾಜ್ ಹಾಕಿದ್ದಾರೆ.
ನಾಗರಿಕರ ಸಮಸ್ಯೆಗಳಿಗೆ , ಅರ್ಜಿಗಳಿಗೆ ಸ್ಪಂದಿಸದೆ ಮೊಬೈಲ್ ನಲ್ಲೇ ಸಮಯ ಕಳೆಯುವ ಸಿಬ್ಬಂದಿಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಬ್ಬಂದಿಗಳ ವರ್ತನೆಯಿಂದ ಅಸಮಾಧಾನಗೊಂಡಿದ್ದ ಸಾರ್ವಜನಿಕರು ಈ ಬಗ್ಗೆ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಸಾರ್ವಜನಿಕರೊಂದಿಗೆ ತೆರಳಿ ಧಿಡೀರ್ ಭೇಟಿ ನೀಡಿ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಸ್ಯೆ ಹೇಳಿಕೊಂಡು ಬರುವ ಜನಸಾಮಾನ್ಯರಿಗೆ ಸ್ಪಂದಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದ ಅವರು ಕೆಲಸದ ಅವಧಿಯಲ್ಲಿ ಮೊಬೈಲ್ ನಲ್ಲಿ ಕಾಲಕಳೆಯದಂತೆ ತಾಕೀತು ಮಾಡಿದ್ದಾರೆ.
Click this button or press Ctrl+G to toggle between Kannada and English