ದಲಿತರನ್ನು ತುಳುವಿನಲ್ಲಿ`ದಿಕ್ಕ’ ಎಂದು ನಿಂದಿಸಿ ಮಂಗಳೂರಿನ ಅಲ್ಲಲ್ಲಿ ಯಕ್ಷಗಾನದ ಬ್ಯಾನರ್; ಖಂಡನೆ

4:15 PM, Friday, July 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

dssಮಂಗಳೂರು  : ಕಟೀಲು ಶ್ರೀ ಯಕ್ಷಕಲಾ ತಂಡದ ಶ್ರೀ ಅನಂತರಾಮ ಬಂಗಾಡಿ ವಿರಚಿತ ಬ್ರಹ್ಮ ಬಲಾಂಡಿ ಎಂಬ ತುಳು ಯಕ್ಷಗಾನದ ಸಂಯೋಜಕರಾದ ಪೂರ್ಣೇಶ್ ಆಚಾರ್ಯ ಹಾಗೂ ವೇಷದಾರಿ ಮಿಜಾರು ತಿಮ್ಮಪ್ಪ ಎಂಬವರು ಪರಿಶಿಷ್ಟ ಜಾತಿ/ಪಂಗಡದ ನಿಷೇದಿತ ಪದ (ಮುಂಡಾಲ ದಿಕ್ಕ)ಬಳಸಿ ಯಕ್ಷಗಾನದ ಬ್ಯಾನರ್‌ನಲ್ಲಿ ಅಳವಡಿಸಿರುವುದರಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕೆಂದು  ದಲಿತ ಸಂಘರ್ಷ ಸಮಿತಿ ಶುಕ್ರವಾರ ಪೊಲೀಸ್ ಕಮಿಷನರನ್ನು ಭೇಟಿ ಮಾಡಿ  ಆಗ್ರಹಿಸಿದೆ.

ಮಂಗಳೂರು ತಾಲೂಕಿನ ಕಟೀಲು ಶ್ರೀ ಯಕ್ಷಕಲಾ ತಂಡದ ಶ್ರೀ ಅನಂತರಾಮ ಬಂಗಾಡಿ ವಿರಚಿತ ’ಬ್ರಹ್ಮ ಬಲಾಂಡಿ’ ಎಂಬ ತುಳು ಯಕ್ಷಗಾನವು ನಗರದ ಪುರಭವನದಲ್ಲಿ ದಿನಾಂಕ 20-07-2019 ರಂದು ಶನಿವಾರ ರಾತ್ರಿ 9.30 ಗಂಟೆಗೆ ಪ್ರದರ್ಶನಗೊಳ್ಳಲಿದ್ದು, ಈ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಯಕ್ಷಕಲಾ ಕಟೀಲು ಪೂರ್ಣೇಶ್ ಆಚಾರ್ಯ ಹಾಗೂ ವೇಷದಾರಿ ಮಿಜಾರು ತಿಮ್ಮಪ್ಪ ಎಂಬವರು ನಗರದ ವಿವಿದೆಡೆ ಬ್ಯಾನರ್‌ಗಳನ್ನು ಅಳವಡಿಸಿ ಅದರಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿಷೇದಿತ ಪದ ಜಾತಿ ನಿಂದನೆ (ಮುಂಡಾಲ ದಿಕ್ಕ) ಬಳಕೆ ಮಾಡಿ ಸಮಸ್ತ ದಲಿತ ಸಮುದಾಯಕ್ಕೆ ಅವಮಾನಿಸಿರುತ್ತಾರೆ. ಆದುದರಿಂದ ನಿಷೇಧಿತ ಪದಬಳಸಿ ಅವಮಾನಿಸಿದ ಪೂರ್ಣೇಶ್ ಆಚಾರ್ಯ ಹಾಗೂ ವೇಷದಾರಿ ಮಿಜಾರು ತಿಮ್ಮಪ್ಪ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜಿಲ್ಲೆಯಿಂದ ಗಡಿಪಾರು ಮಾಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು  ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

dssಹಾಗೂ ಪುರಭವನದಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಮದ ದಿನ  ದ.ಸಂ.ಸ. (ಅಂಬೆಡ್ಕರ್ ವಾದ) ಜಿಲ್ಲಾ ಸಮಿತಿ ಹಾಗೂ ವಿವಿಧ ತಾಲೂಕು ಸಮಿತಿ ತೀವೃ ಪ್ರತಿಭಟನೆಯನ್ನು ನಡೆಸಲಿದೆ ಎಂದು ತಿಳಿಸಿದೆ.

ನಿಯೋಗದಲ್ಲಿ ಜಗದೀಶ್ ಪಾಂಡೇಶ್ವರ, ಜಿಲ್ಲಾ ಪ್ರಧಾನ ಸಂಚಾಲಕರು ದಸಂಸ (ಅಂಬೇಡ್ಕರ್ ವಾದ), ಸದಾಶಿವ ಉರ್ವಸ್ಟೋರ್ ಜಿಲ್ಲಾ ಸಂಘಟನಾ ಸಂಚಾಲಕರು ದಸಂಸ (ಅಂಬೇಡ್ಕರ್ ವಾದ), ಸೂರ್ಯಪ್ರಕಾಶ್ ಮುಲ್ಕಿ, ಮಂಗಳೂರು ತಾಲೂಕು, ಸಂಚಾಲಕರು ದಸಂಸ (ಅಂಬೇಡ್ಕರ್ ವಾದ), ಕೆ. ಚಂದ್ರ, ಮಂಗಳೂರು ತಾಲೂಕು ಸಂಘಟನಾ ಸಂಚಾಲಕರು ದಸಂಸ (ಅಂಬೇಡ್ಕರ್ ವಾದ), ಸುನೀಲ್ ಅದ್ಯಪಾಡಿ, ಖಜಾಂಜಿ, ಮಂಗಳೂರು ತಾಲೂಕು, ದಸಂಸ (ಅಂಬೇಡ್ಕರ್ ವಾದ), ಸೀತಾರಾಮ ಅದ್ಯಪಾಡಿ, ಮಂಗಳೂರು ತಾಲೂಕು ನಿರ್ವಾಹಕ ಸಮಿತಿ ಸದಸ್ಯರು ದಸಂಸ (ಅಂಬೇಡ್ಕರ್ ವಾದ), ಸುಂದರ ಬಳ್ಳಾಲ್‌ಭಾಗ್, ಮಂಗಳೂರು ತಾಲೂಕು ನಿರ್ವಾಹಕ ಸಮಿತಿ ಸದಸ್ಯರು ದಸಂಸ (ಅಂಬೇಡ್ಕರ್ ವಾದ), ಸುರೇಂದ್ರ ಕೋಟಿಮುರ, ಸದಸ್ಯರು ದಸಂಸ (ಅಂಬೇಡ್ಕರ್ ವಾದ), ಜಯ ಕುಮಾರ್ ಹಾದಿಗೆ ಸದಸ್ಯರು ದಸಂಸ (ಅಂಬೇಡ್ಕರ್ ವಾದ) ಉಪಸ್ಥಿತರಿದ್ದರು.

image description

1 ಪ್ರತಿಕ್ರಿಯೆ - ಶೀರ್ಷಿಕೆ - ದಲಿತರನ್ನು ತುಳುವಿನಲ್ಲಿ`ದಿಕ್ಕ’ ಎಂದು ನಿಂದಿಸಿ ಮಂಗಳೂರಿನ ಅಲ್ಲಲ್ಲಿ ಯಕ್ಷಗಾನದ ಬ್ಯಾನರ್; ಖಂಡನೆ

  1. Manjunatha a k, hospet

    Jai bheem

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English