- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಟೈಲರಿಂಗ್ ಕೆಲಸಕ್ಕೆ ಹೋದ ಯುವತಿ ನಾಪತ್ತೆ

Divya [1]ಮಂಗಳೂರು : ಟೈಲರಿಂಗ್ ಕೆಲಸಕ್ಕೆ ಹೋದಾಕೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವ್ಯಾ(20) ಎಂಬಾಕೆ ಕಡಬ ತಾಲೂಕು 102 ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ಎಂಬಲ್ಲಿಂದ ಜುಲೈ 3 ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕಡಬಕ್ಕೆ ಟೈಲರಿಂಗ್ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ರಾತ್ರಿ ವಾಪಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ: ಪ್ರಾಯ 20 ವರ್ಷ, ಎತ್ತರ 135, ಕಪ್ಪು ಗುಂಗೂರು ಕೂದಲು, ಬಿಳಿ ಮೈಬಣ್ಣ, ಉದ್ದ ಮುಖ, ತೆಳ್ಳಗೆ ಮೈಕಟ್ಟು, ನೀಲಿ ಬಣ್ಣದ ಉದ್ದ ಟಾಪ್ ಧರಿಸಿರುತ್ತಾರೆ, ಮಾತನಾಡುವ ಭಾಷೆ ಕನ್ನಡ, ತುಳು.

ಈ ಚಹರೆಯುಳ್ಳ ಯುವತಿಯ ಬಗ್ಗೆ ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ: 08254260044, 08251251055, 8251230500, 8242220500, 8242220501 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಕಡಬ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.