- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾವಪೂರ್ಣ ‘ಗುರುಪೂರ್ಣಿಮಾ’ ಮಹೋತ್ಸವ

sanathana [1]ಮಂಗಳೂರು : ಗುರುಗಳ ಸ್ಥೂಲ ದೇಹ ಅಂದರೆ ವ್ಯಷ್ಟಿ ರೂಪ ಹಾಗೂ ಸಂಪೂರ್ಣ ರಾಷ್ಟ್ರವೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ. ಗುರುಕಾರ್ಯದ ಕಕ್ಷೆಯು ವ್ಯಕ್ತಿಯ ಆಧ್ಯಾತ್ಮಿಕ ಉದ್ಧಾರದಿಂದ ಸಮಾಜ, ರಾಷ್ಟ್ರ ಹಾಗೂ ಧರ್ಮದ ಉತ್ಥಾನದ ತನಕ ವ್ಯಾಪಿಸಿರುತ್ತದೆ.  ವೈಯಕ್ತಿಕ ಉದ್ಧಾರಕ್ಕಿಂತ ಸಮಷ್ಟಿ ಉತ್ಕರ್ಷಕ್ಕಾಗಿ ಕಾರ್ಯವನ್ನು ಮಾಡುವವರ ಮೇಲೆ ಗುರುಕೃಪೆ ಹೆಚ್ಚಾಗುತ್ತದೆ. ಧರ್ಮಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವು ವ್ಯಕ್ತಿ, ಸಮಾಜ, ರಾಷ್ಟ್ರ ಹಾಗೂ ಧರ್ಮ ಇವೆಲ್ಲದರ ಉತ್ಕರ್ಷವನ್ನು ಸಾಧಿಸುವ ಹಾಗೂ ಕಾಲಾನುಸಾರ ಆವಶ್ಯಕ ಗುರುಕಾರ್ಯವೇ ಆಗಿದೆ. ಈ ಕಾರ್ಯಕ್ಕಾಗಿ ಸ್ವಕ್ಷಮತೆಯಂತೆ ತನು-ಮನ-ಧನದಿಂದ ಸಹಭಾಗಿಯಾಗುವುದೇ ಕಾಲಾನುಸಾರ ನಿಜವಾದ ಗುರುದಕ್ಷಿಣೆಯಾಗಿದೆ, ಎಂದು ಸೌ.ಮಂಜುಳಾ ಗೌಡ ಇವರು ಮಾರ್ಗದರ್ಶನವನ್ನು ಮಾಡಿದರು. ಅವರು ‘ಧರ್ಮಾಧಿಷ್ಠಿತ ‘ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ ಹಾಗೂ ಹಿಂದೂಗಳ ಯೋಗದಾನ’ ಈ ವಿಷಯದ ಬಗ್ಗೆ ಜುಲೈ 16 ರಂದು ಎಸ್. ಡಿ. ಎಮ್. ಲಾ ಕಾಲೇಜ್,ಕೊಡಿಯಾಲ್ ಬೈಲ್ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮಹೋತ್ಸವದಲ್ಲಿ ಮಾರ್ಗದರ್ಶನವನ್ನು ಮಾಡುತ್ತ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಎಸ್. ಡಿ. ಎಮ್. ಲಾ ಕಾಲೇಜ್, ಕೊಡಿಯಾಲ್ ಬೈಲ್, ಮಂಗಳೂರಿನಲ್ಲಿ ಗುರುಪೂರ್ಣಿಮ ಮಹೋತ್ಸವ ನೆರವೇರಿತು. ಇದರೊಂದಿಗೆ ಇತರ ಸಮವಿಚಾರಿ ಸಂಘಟನೆಗಳೊಂದಿಗೆ ದೇಶದಾದ್ಯಂತ ೧೧೨ ಸ್ಥಳಗಳಲ್ಲಿ ಭಾವಪೂರ್ಣ ವಾತಾವರಣದಲ್ಲಿ ಇಂತಹ ‘ಗುರುಪೂರ್ಣಿಮಾ ಮಹೋತ್ಸವವನ್ನು’ ಆಚರಿಸಲಾಯಿತು.

Manjula [2]ಸಮಾರಂಭದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಸನಾತನ ಸಂಸ್ಥೆಯ ಗುರುಪರಂಪರೆಯಲ್ಲಿನ ಶ್ರೀಮತ್ಪರಮಹಂಸ ಚಂದ್ರಶೇಖರಾನಂದ, ಶ್ರೀ ಅನಂತಾನಂದ ಸಾಯಿಶ, ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಸಂತ ಭಕ್ತರಾಜ ಮಹಾರಾಜ, ಪ.ಪೂ. ರಾಮಾನಂದ ಮಹಾರಾಜ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ತದನಂತರ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ’ ಹಾಗೂ ‘ಪರಾತ್ಪರ ಗುರು (ಡಾ.) ಜಯಂತ ಬಾಳಾಜಿ ಆಠವಲೆ ಇವರ ಅಲೌಕಿಕ ಕಾರ್ಯ’ ಈ ವಿಷಯದಲ್ಲಿ ವಿಡಿಯೋ ತೋರಿಸಲಾಯಿತು. ಈ ಸಮಯದಲ್ಲಿ ಆಪತ್ಕಾಲದಲ್ಲಿ ಸಮಾಜಸಹಾಯಕ್ಕಾಗಿ ಆವಶ್ಯಕವಿರುವ ‘ಪ್ರಥಮೋಪಚಾರ ಪ್ರಾತ್ಯಕ್ಷಿಕೆಯ ವಿಡಿಯೋ’ ಹಾಗೂ ‘ಸ್ವಸಂರಕ್ಷಣೆ ಪ್ರಾತ್ಯಕ್ಷಿಕೆ’ಯನ್ನು ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸನಾತನದ ಸಂತರಾದ ಪೂ. ವಿನಾಯಕ ಕರ್ವೆ ಇವರು ಉಪಸ್ಥಿತರಿದ್ದರು.

ವಿಶೇಷ ಅತಿಥಿಗಳಾದ ಶ್ರೀ. ಕೃಷ್ಣ ಉಪಾಧ್ಯಾಯ ಇವರು ಹಲವಾರು ವರ್ಷಗಳಿಂದ ಸನಾತನ ಪ್ರಭಾತ ವಿತರಣೆ ಮಾಡುವ ಸನಾತನದ ಸಾಧಕರಾದ ಸೌ. ಸರಸ್ವತಿ ನಾಯ್ಕ್ ಇವರ ಸತ್ಕಾರ ಮಾಡಿದರು. ಆನಂತರ ಪ್ರತಿಭಾವಂತ ವಿದ್ಯಾರ್ಥಿನಿಯಾದ ಕು. ಮಂಜೂಷ ಪೈ ಇವರ ಸತ್ಕಾರ ಮಾಡಲಾಯಿತು.

ಇದರ ನಂತರ ಶ್ರೀ. ಕೃಷ್ಣ ಉಪಾಧ್ಯಾಯ ಇವರು ತಮ್ಮ ಗುರುಗಳಾದ ಶ್ರೀ ಗೌತಮಾನಂದ ಸ್ವಾಮೀಜಿ ಇವರನ್ನು ಸ್ಮರಿಸುತ್ತಾ ತಮ್ಮ ವಿಷಯವನ್ನು ಮಂಡಿಸಿದ್ದರು. ಆಯ ತಪ್ಪಿ ಸಂಸಾರಾರೂಪಿ ಗುಂಡಿಯಲ್ಲಿ ಬಿದ್ದ ಮನುಷ್ಯನನ್ನು ಮುಕ್ತಿ ನೀಡುತ್ತಾರೆ ಎಂದು ಹೇಳಿದರು. ನಮ್ಮೆಲ್ಲರಲ್ಲೂ ಸುಪ್ತವಾಗಿ ಆಧ್ಯಾತ್ಮದ ಬೀಜ ಇರುತ್ತದೆ, ಅದನ್ನು ಗುರುತಿಸುವ ಕಾರ್ಯವು ಗುರುಗಳು ಮಾಡುತ್ತಾರೆ. ಗುರುಗಳು ಕರುಣೆಯ ಕಡಲಾಗಿದ್ದಾರೆ. ಗೂರುಗಳೊಬ್ಬರೇ ಇರುತ್ತಾರೆ ಕೇವಲ ಅನೇಕ ರೂಪಗಳಿರುತ್ತಾರೆ. ದೇವರೇ ಗುರುಗಳ ರೂಪದಲ್ಲಿ ಧರೆಗೆ ಬಂದಿದ್ದಾರೆ ಎಂದು ಹೇಳಿ ತನ್ನ ಮಾತನ್ನು ಮುಕ್ತಾಯಗೊಳಿಸಿದರು.

ಕೊನೆಗೆ ಸಮಾರೋಪ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು..