ಸೊಳ್ಳೆ ಕಡಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 352 ಜನರಿಗೆ ಜ್ವರ

3:15 PM, Wednesday, July 17th, 2019
Share
1 Star2 Stars3 Stars4 Stars5 Stars
(No Ratings Yet)
Loading...

Dengue ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 352 ಡೆಂಗ್ ಜ್ವರದ ಪ್ರಕರಣ ಗಳು ಪತ್ತೆಯಾಗಿವೆ. ಈ ಪೈಕಿ 200 ಪ್ರಕರಣಗಳಲ್ಲಿ ಜ್ವರ ಪೀಡಿತರಾಗಿದ್ದವರು ಗುಣಮುಖರಾಗುತ್ತಿದ್ದಾರೆ. ಜುಲೈ ತಿಂಗಳಲ್ಲಿ ಮಂಗಳೂರು ನಗರದ ಜೆಪ್ಪು ಗುಜ್ಜರ ಕೆರೆ ಮತ್ತು ಕಡಬ ಮೊದಲಾದ ಕಡೆ ಡೆಂಗ್ ಜ್ವರದ ಪ್ರಕರಣ ಗಳು ಕಂಡು ಬಂದಿವೆ. ಸೊಳ್ಳೆ ಗಳ ಕಡಿತದಿಂದ ಕಂಡು ಬರುವ ಈ ರೋಗ ಬಾರದಂತೆ ತಡೆಯಲು ಮಳೆ ನೀರು ಹೆಚ್ಚು ಕಾಲ ನಿಲ್ಲದಂತೆ ನೋಡಿಕೊಳ್ಳಬೇಕು. ಈ ರೀತಿಯ ಕ್ರಮ ಕೈಗೊಂಡರೆ ಶೇ 85ರಷ್ಟು ಡೆಂಗ್ ಜ್ವರದ ಪ್ರಕರಣ ಗಳನ್ನು ತಡೆಯಬಹುದಾಗಿದೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ನಗರದಲ್ಲಿ 200 ತಂಡಗಳನ್ನು ರಚಿಸಲಾಗಿದೆ. ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಜೂನ್ ತಿಂಗಳ ಲ್ಲಿ 75ರಷ್ಟಿದ್ದ ಡೆಂಗ್ ಪ್ರಕರಣಗಳು ಜುಲೈ ತಿಂಗಳಲ್ಲಿ ಹೆಚ್ಚುವರಿಯಾಗಿ 300 ಸೇರ್ಪಡೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 200 ಪ್ರಕರಣಗಳು ಪತ್ತೆಯಾಗಿತ್ತು. ಈ ಬಾರಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವುದು ಡೆಂಗ್ ಜ್ವರ ಹೆಚ್ಚಳಕ್ಕೆ ಕಾರಣವಾಗಿದೆ. ಸಾರ್ವಜನಿಕರು ಸೊಳ್ಳೆ ನಿಯಂತ್ರಣ ಕ್ಕೆ ಸಹಕಾರ ನೀಡಿದರೆ ಡೆಂಗ್ ಜ್ವರವನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೊಳ್ಳೆ ಯ ಕಡಿತದಿಂದ ಬರುವ ಡೆಂಗ್ ಜ್ವರ ಬಾರದಂತೆ ತಡೆಯಲು ಸೊಳ್ಳೆ ಗಳ ಕಡಿತದಿಂದ ಪಾರಾಗುವುದು ಒಂದು ದಾರಿ. ಸೊಳ್ಳೆ ಪರದೆ, ತೆಂಗಿನ ಎಣ್ಣೆ, ಸೊಳ್ಳೆ ಕಡಿತ ತಡೆಯುವ ಮುಲಾಮು ಗಳನ್ನು ಬಳಸಬಹುದು. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆ ಗಳು ಕೆಳಮಟ್ಟದಲ್ಲಿ ನಿಧಾನವಾಗಿ ಹಾರುತ್ತವೆ. ಇತರ ಸಾಂಕ್ರಾಮಿಕ ಜ್ವರದ ರೀತಿಯಲ್ಲಿ ಡೆಂಗ್ ಜ್ವರವೂ ಹರಡುತ್ತದೆ. ಈ ಬಗ್ಗೆ ಭಯ ಪಡಬೇಕಾಗಿಲ್ಲ ಎಂದು ಸಸಿಕಾಂತ ಸೆಂಥಿಲ್ ತಿಳಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English