ಜಮ್ಮು ಮತ್ತು ಕಾಶ್ಮೀರ ಇನ್ನು ಕೇಂದ್ರಾಡಳಿತ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಘೋಷಣೆ

8:53 PM, Thursday, August 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Modi ನವದೆಹಲಿ  : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

“ನಾನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇಡೀ ರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ. ಕೆಲವು ವಿಷಯಗಳು ಜೀವಂತವಿರುವವರೆಗೂ ಅವು ಎಂದಿಗೂ ಬದಲಾಗುವುದಿಲ್ಲ ಅಥವಾ ದೂರ ಹೋಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. 370 ನೇ ವಿಧಿ ಇದೇ ರೀತಿಯದಾಗಿತ್ತು.” ಎಂದು ಪ್ರಧಾನಿ ಹೇಳಿದರು.

“ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಜೀ ಮತ್ತು ಕೋಟ್ಯಂತರ ದೇಶಭಕ್ತರ ಕನಸು ಈಡೇರಿದೆ.

“ನಾವು ಒಂದು ರಾಷ್ಟ್ರವಾಗಿ, ಒಂದು ಕುಟುಂಬವಾಗಿ, ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಸಹೋದರರು ಮತ್ತು ಸಹೋದರಿಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಮತ್ತು ಅವರ ಅಭಿವೃದ್ಧಿಗೆ ಇದು ಒಂದು ದೊಡ್ಡ ಅಡಚಣೆ ಇದ್ದಿತ್ತು, ಇದೀಗ ವಿಶೇಷ ಸ್ಥಾನಮಾನ ರದ್ದು ಆಗಿರುವುದರಿಂದ ಅವರೂ ದೇಶದ ಉಳಿದ ರಾಜ್ಯಗಳ ನಾಗರಿಕರಂತೆ ಅಭಿವೃದ್ದಿಯ ಹಾದಿಯಲ್ಲಿ ಮುಂದುವರಿಯಬಹುದು.” “ಮೋದಿ ಹೇಳಿದರು.

“ವಿಶೇಷ ಸ್ಥಾನಮಾನದ ಕಾರಣ, ಜಮ್ಮು ಮತ್ತು ಕಾಶ್ಮೀರಕ್ಕೆ ನಿಜವಾಗಿ ಸಿಗಬೇಕಿದ್ದ ಅಭಿವೃದ್ಧಿ ಅವಕಾಶವನ್ನು ಪಡೆಯಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.

“ಈಗ, ಜಮ್ಮು ಮತ್ತು ಕಾಶ್ಮೀರಕ್ಕೂ ಭಾರತದ ಉಳಿದ ಭಾಗಗಳಂತೆ ಅಭಿವೃದ್ಧಿಯ ಫಲ ಸಿಗಲಿದೆ” ಎಂದು ಪ್ರಧಾನಿ ಹೇಳಿದರು.

ಜಮ್ಮು ಕಾಶ್ಮೀರ ಜನರು ಇತರ ರಾಜ್ಯಗಳಿಗೆ ಅನ್ವಯಿಸುವ ಕಾನೂನುಗಳು ಮತ್ತು ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿದ್ದರು. ಈಗ ಅವರು ಇತರ ರಾಜ್ಯಗಳ ಜನರಂತೆ ಆರೋಗ್ಯ ಮತ್ತು ಶಿಕ್ಷಣದ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ” ಎಂದು ಪ್ರಧಾನಿ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English