- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಳ್ತಂಗಡಿ : ಮನೆ ಕಟ್ಟಲು ಐದು ಲಕ್ಷ, ಮನೆಯಿಲ್ಲದವರಿಗೆ ಐದು ಸಾವಿರ ಬಾಡಿಗೆ , ತಕ್ಷಣದ ಪರಿಹಾರ ಹತ್ತು ಸಾವಿರ ಘೋಷಿಸಿದ ಸಿಎಂ

Kakkavu bridge [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಮರೋಪಾದಿ ಯಲ್ಲಿ ಪರಿಹಾರ ಘೋಷಿಸಿದ್ದಾರೆ. ವಿಮಾನದ ಮೂಲಕ ಮಂಗಳೂರಿಗೆ 11.20 ಕ್ಕೆ ಬಂದಿಳಿದ ಸಿಎಂ ಬೆಳ್ತಂಗಡಿ ಗೆ ತೆರಳಿ ನೆರೆಯಿಂದ ಕೊಚ್ಚಿ ಹೋದ ಕುಕ್ಕಾವು ಸೇತುವೆಗೆ ಭೇಟಿ ನೀಡಿದ ಬಳಿಕ ಕುಕ್ಕಾವು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣದ ತನಕ 5 ಸಾವಿರ ತಿಂಗಳಿಗೆ ಬಾಡಿಗೆ ಹಣ ಮತ್ತು 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

Kakkavu bridge [2]ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಪೀಡಿತ ಪ್ರದೇಶ ಕುಕ್ಕಾವುನಲ್ಲಿ ಪ್ರವಾಹ ವೀಕ್ಷಣೆ ಮಾಡಿ ನೆರೆ ಸಂತ್ರಸ್ತರೊಂದಿಗೆ ಗಂಜಿ ಕೇಂದ್ರದಲ್ಲಿ ಮಾತುಕತೆ ನಡೆಸಿದ ಬಳಿಕ ಅವರು ಈ ಘೋಷಣೆ ಮಾಡಿದರು.

ಮಳೆಯಲ್ಲಿ ದ.ಕ ಜಿಲ್ಲೆಯ 285 ಮಂದಿ ಮನೆ ಕಳೆದುಕೊಂಡಿದ್ದು, ಅವರಿಗೆ ನಿವೇಶನದ ಜೊತೆ ಐದು ಲಕ್ಷ, ಭಾಗಶಃ ಮನೆ ಹಾನಿಯಾದವರಿಗೆ 1 ಲಕ್ಷ ಮತ್ತು ತಕ್ಷಣದ ಪರಿಹಾರವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 10 ಸಾವಿರ ನೀಡಲಾಗುವುದು ಎಂದರು.

ಕುಕ್ಕಾವು ಪ್ರದೇಶದಲ್ಲಿ ಸೇತುವೆ ಕುಸಿದು ಬಿದ್ದಿರುವುದನ್ನು ವೀಕ್ಷಿಸಿದ ಬಳಿಕ ಅವರು ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಜೊತೆಗೆ ಮಾತುಕತೆ ನಡೆಸಿದರು.

Kakkavu bridge [3]

Kakkavu bridge [4]