ಮೈಸೂರು : ರೈಲ್ವೆ ಇಲಾಖೆ ಬೆಂಗಳೂರು – ಮೈಸೂರು ನಡುವೆ ಬೆಳಗ್ಗೆ, ಮಧ್ಯಾಹ್ನ ಸಂಚರಿಸುತ್ತಿದ್ದ ಪುಷ್ಪುಲ್ ರೈಲನ್ನು ರದ್ದುಗೊಳಿಸಿ ಮೆಮು ರೈಲನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರಲ್ಲಿ ಸಂತಸ ವ್ಯಕ್ತವಾಗಿದೆ.
ಈ ಹಿಂದೆ ಇದ್ದ ಪುಷ್ಪುಲ್ ರೈಲುಗಳಲ್ಲಿ ಇದ್ದ 16 ಬೋಗಿಗಳಲ್ಲಿ 1700ರಷ್ಟು ಪ್ರಯಾಣಿಕರು ಸಂಚರಿಸಬಹುದಾಗಿತ್ತು. ಅಲ್ಲದೇ ಈ ರೈಲಿನಲ್ಲಿ ಬೆಂಗಳೂರು ಸಮೀಪಿಸಿದಂತೆ ಮಂಡ್ಯ, ರಾಮನಗರ, ಚನ್ನಪಟ್ಟಣ ರೈಲ್ವೆ ನಿಲ್ದಾಣಗಳಲ್ಲಿ ರೈಲು ಹತ್ತಲೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಜನಸಂದಣಿಯಿಂದ ರೈಲು ತುಂಬಿರುತ್ತಿತ್ತು. ಆದರೆ ಮೆಮು ರೈಲಿನಲ್ಲಿ ವಿಶೇಷ ವಿನ್ಯಾಸದ ಬೋಗಿಗಳಿಂದಾಗಿ ಏಕಕಾಲಕ್ಕೆ 6 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಬಹುದಾಗಿದೆ.
ಬೆಳಿಗ್ಗೆ 6.10ಕ್ಕೆ ಮೈಸೂರಿನಿಂದ ಹೊರಡುವ, ಸಂಜೆ 7.30ಕ್ಕೆ ಬೆಂಗಳೂರಿನಿಂದ ಇಲ್ಲಿಗೆ ಬರುವ ಮೆಮೊ ರೈಲು ಉದ್ಯೋಗಿಗಳಿಗೆ, ಕಾರ್ಮಿಕರಿಗೆ ವರದಾನವಾಗಿದೆ. ಅದರೊಟ್ಟಿಗೆ ಬೆಳಿಗ್ಗೆ 9.15ಕ್ಕೆ ಬೆಂಗಳೂರು ಬಿಡುವ, ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ರಾಜಧಾನಿಗೆ ತೆರಳುವ ಮೆಮು ರೈಲು ಪ್ರಯಾಣಿಕಸ್ನೇಹಿಯಾಗಿದೆ. ಕೇವಲ 30 ರೂಪಾಯಿಯಲ್ಲಿ ಬೆಂಗಳೂರು-ಮೈಸೂರಿಗೆ ಸಂಚರಿಸಬಹುದಾಗಿದೆ.
Click this button or press Ctrl+G to toggle between Kannada and English