ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾತೃ ಶ್ರೀ ನಿಧನ

3:54 PM, Sunday, September 1st, 2019
Share
1 Star2 Stars3 Stars4 Stars5 Stars
(No Ratings Yet)
Loading...

kamalaವಿಟ್ಲ:  ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ ತಾಯಿ ಕಮಲಾ (91 ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಆ.29ರಂದು ಅಶೋಕ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮಂಗಳೂರು ಡೊಂಗರಕೇರಿ ದಿ. ಪರಮೇಶ್ವರ್‌ರವರ ಪತ್ನಿ ಕಮಲಾ (91 ವ.) ಪುತ್ರರಾದ ಚಂದ್ರಶೇಖರ, ಹರೀಶ್ಚಂದ್ರ ಹಾಗೂ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯಯವರನ್ನು ಅಗಲಿದ್ದಾರೆ.

ಇತ್ತೀಚೆಗೆ ಮಾಣಿಲದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಕಮಲಾ ಅವರು ಭಾಗವಹಿಸಿದ್ದರು. ಸಾಮೀಜಿಯವರು ಮಾತೃಶ್ರೀಯವನ್ನು ವೇದಿಕೆಯಲ್ಲಿ ಸನ್ಮಾನಿಸಿ ಮಾತೃ ಪ್ರೇಮವನ್ನು ತೋರಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English