ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಾಲ್ಬೈ ಸೌಂಡ್ ಬಾಕ್ಸ್ ಮೇಲಿಂದ ಬಿದ್ದು ಯುವಕನೋರ್ವ ಮೃತ್ಯು

5:04 PM, Friday, September 13th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

rahulಬೆಳಗಾವಿ : ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡಾಲ್ಬೈ ಸೌಂಡ್ ಬಾಕ್ಸ್ ಮೇಲಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ನಗರದ ಕಾಮತ್ ಗಲ್ಲಿಯ ರಾಹುಲ್ ಸದಾವರ (38) ಎಂಬ ಯುವಕ ಮೃತಪಟ್ಟಿದ್ದು, ಗಲ್ಲಿ ಗಣೇಶ ಮಂಡಳಿಯವರು ಡಾಲ್ಬಿ ಸೌಂಡ್ ಬಾಕ್ಸ್ ಬಂದ್ ಮಾಡಿ ತಕ್ಷಣ ಗಣೇಶ ವಿಸರ್ಜನೆ ಮಾಡಿದರು.

ಬೆಳಗ್ಗೆ 8 ಗಂಟೆ ಸುಮಾರಿಗೆ ರಾಹುಲ್ ಡಾಲ್ಬೈ ಮೇಲೆ ನಿಂತುಕೊಂಡಿದ್ದನು.‌ ನಗರದ ಹುತಾತ್ಮಾ ಚೌಕ್ ಬಳಿ ಬಂದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಕಾಮತ್ ಗಲ್ಲಿಯ ಗಣಪತಿ ವಿಸರ್ಜನಾ ಮೆರವಣಿಗೆ ಗುರುವಾರ ರಾತ್ರಿಯಿಂದ ಆರಂಭಗೊಂಡಿದೆ. ಬೆಳಗ್ಗೆ ಹುತಾತ್ಮಾ ಚೌಕ್ ಗೆ ಬಂದಾಗ ಈ ಅವಘಡ ಸಂಭವಿಸಿದೆ‌. ವಿವಾಹಿತ ಯುವಕ ರಾಹುಲ್ ನಿಗೆ ಎರಡು ಹೆಣ್ಣು ಮಕ್ಕಳಿದ್ದು, ಈತನ ಸಾವಿನಿಂದ ಗಲ್ಲಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English