ದೆಹಲಿ : ಸಮ-ಬೆಸ ಸಂಚಾರ ಪದ್ದತಿ ಮತ್ತೆ ಜಾರಿ : ಅರವಿಂದ್‌ ಕೇಜ್ರಿವಾಲ್‌

5:47 PM, Friday, September 13th, 2019
Share
1 Star2 Stars3 Stars4 Stars5 Stars
(No Ratings Yet)
Loading...

dehaliಹೊಸದಿಲ್ಲಿ : ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಈ ಹಿಂದೆ ಜಾರಿಗೆ ತರಲಾಗಿದ್ದ ಸಮ-ಬೆಸ ಸಂಚಾರ ಪದ್ದತಿಯನ್ನು ಮತ್ತೆ ಜಾರಿಗೊಳಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಚಳಿಗಾಲದಲ್ಲಿ ವಾಯು ಮಾಲಿನ್ಯ ಪ್ರಮಾಣ ಏರಿಕೆಯಾಗುವ ಹಿನ್ನಲೆಯಲ್ಲಿ ನವೆಂಬರ್‌ 4ರಿಂದ 15ರವರೆಗೆ ಅಂದರೆ ಒಟ್ಟು 12 ದಿನಗಳ ಕಾಲ ಸಮ-ಬೆಸ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಇದರ ಪ್ರಕಾರ ನವೆಂಬರ್‌ 4, 6, 8, 10, 12, 14ರಂದು ಸಮ ಸಂಖ್ಯೆ ನೋಂದಣಿಯ ವಾಹನಗಳು ರಸ್ತೆಗಿಳಿಯಬಹುದು. ಪರ್ಯಾಯ ದಿನಗಳಲ್ಲಿ ಬೆಸ ಸಂಖ್ಯೆ ನೋಂದಣಿ ಹೊಂದಿದ ವಾಹನಗಳಿಗೆ ರಸ್ತೆಗಿಳಿಯಲು ಅವಕಾಶವಿದೆ.

2016ರಲ್ಲಿ ಮೊದಲ ಬಾರಿಗೆ ಈ ಸಮ ಬೆಸ ನಿಯಮವನ್ನು ಅರವಿಂದ್‌ ಕೇಜ್ರಿವಾಲ್‌ ಜಾರಿಗೆ ತಂದಿದ್ದರು. ಈಗ ಮೂರನೇ ಬಾರಿಗೆ ದೆಹಲಿಯಲ್ಲಿ ಈ ನಿಯಮ ಜಾರಿಯಾಗುತ್ತಿದೆ. ವಾಹನ ದಟ್ಟಣೆಯಿಂದ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಈ ನಿಯಮ ಜಾರಿಗೆ ತಂದಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English