- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿ : ಯುವ‌ಮೋರ್ಚಾ ಕಾರ್ಯಕರ್ತರಿಂದ ರಸ್ತೆ ತಡೆ

kasaragod [1]ಕಾಸರಗೋಡು : ತಲಪಾಡಿ ಯಿಂದ ಕಾಸರಗೋಡು ತನಕ ಸಂಪೂರ್ಣ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ನಡೆಸದೆ ಜನತೆಯನ್ನು ಸಂಕಷ್ಟಕ್ಕೆ ತಳ್ಳಿರುವ ಕೇರಳದ ಎಡರಂಗ ಸರಕಾರದ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ – 66 ದುರಸ್ತಿ ಕಾಮಗಾರಿಗೆ ಶೀಘ್ರ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿ ಯುವ‌ಮೋರ್ಚಾ ಕಾರ್ಯಕರ್ತರು ಕಾಸರಗೋಡಿನ ಅಶ್ವಿ‌ನಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ  ನಡೆಸಿದರು.

ರಸ್ತೆ ತಡೆ ಚಳವಳಿಯನ್ನು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿಜಯ ಕುಮಾರ್‌ ರೈ ಅವರು ಉದ್ಘಾಟಿಸಿದರು.

ಕೇಂದ್ರ ಸರಕಾರ ಈಗಾಗಲೇ ತಲಪಾಡಿ ಕಾಸರಗೋಡು ರಸ್ತೆ ದುರಸ್ತಿಗೆ 14 ಕೋಟಿ ರೂ. ಬಿಡುಗಡೆ ಮಾಡಿದರೂ ಪಿಣರಾಯಿ ಸರಕಾರ ದುರಸ್ತಿ ಕಾರ್ಯ ಆರಂಭಿಸಿಲ್ಲ. ದುರಸ್ತಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರದ ಹೊಣೆ. ಕೆಎಸ್‌ಆರ್‌ಟಿಸಿ ಬಸ್‌ ಮೊಟಕುಗೊಳಿಸಿ ಜನರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಈ ಹೋರಾಟ ಎಂದು ಹೇಳಿದರು.

ರಸ್ತೆ ದುರಸ್ತಿ ಕಾರ್ಯ ಅಗದಿದ್ದಲ್ಲಿ ಪ್ರತಿಭಟನೆಯ ನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಮುನ್ನೆಚ್ಚರಿಕೆ ನೀಡಿದರು.

ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೇಶ್‌ ಕೈಂದಾರ್‌ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲೀಪ್‌ ಪಳ್ಳಂಜಿ, ಮಂಡಲ ಅದ್ಯಕ್ಷ ಹರೀಶ್‌ ಗೋಸಾಡ, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್‌ ಬದಿರ, ನಿದೀಶ್‌, ಪ್ರಿಯಾಂಕ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.