ಮಂಗಳೂರು : ಸೈಂಟ್ ಜಾನ್ಸ್’ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಬೆಂಚ್’ಪ್ರೆಸ್ ಪವರ್’ಲಿಫ್ಟಿಂಗ್ ಚಾಂಪಿಯನ್’ಶಿಪ್ – 2019 ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ 83 ಕೆಜಿ ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಮಂಗಳವಾರ ಸೆ. ರಂದು 17 ನಡೆದ ಕಾಮನ್ ವೆಲ್ತ್ ಬೆಂಚ್’ಪ್ರೆಸ್ ಪವರ್’ಲಿಫ್ಟಿಂಗ್ ಚಾಂಪಿಯನ್’ಶಿಪ್ – 2019 ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ ಆಚಾರ್ಯ 83 ಕೆಜಿ ಸೀನಿಯರ್ ವಿಭಾಗದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 200ಕೆಜಿ ಭಾರವನ್ನು ಎತ್ತಿ, ಚಿನ್ನದ ಪದಕವನ್ನು ಪಡೆದುಕೊಂಡರು. ಉಳಿದಂತೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕೆನಡಾದ ಸ್ಪರ್ಧಿಗಳು ಪಡೆದುಕೊಂಡಿದ್ದಾರೆ.
ಇಂದು (ಸೆ.18) ಮತ್ತೊಂದು ಸ್ಪರ್ಧೆಯಲ್ಲಿ ಪ್ರದೀಪ್ ಆಚಾರ್ಯ ಭಾಗವಹಿಸಲಿದ್ದಾರೆ. ಪ್ರದೀಪ್ ಕುಮಾರ್ ಆಚಾರ್ಯ ಪ್ರಸ್ತುತ ಮಂಗಳೂರಿನಲ್ಲಿ ಸದ್ಗುರು ಫಿಟ್ನೆಸ್ ಅಂಡ್ ಸ್ಫೋರ್ಟ್ಸ್ ನಡೆಸುತ್ತಿದ್ದಾರೆ. ನಗರದ ಬಾಲಾಂಜನೇಯ ಜಿಮ್ನಾಷಿಯಂನಲ್ಲಿ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Click this button or press Ctrl+G to toggle between Kannada and English