ಮಂದಾರ ಪ್ರದೇಶಕ್ಕೆ ರಾಜ್ಯದ ವಿಶೇಷ ಅಧ್ಯಯನ ತಂಡ ಭೇಟಿ

10:05 AM, Friday, September 20th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

pacchanadyಮಂಗಳೂರು : ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಜರಿದು ಮಂದಾರ ಪ್ರದೇಶಕ್ಕೆ ವ್ಯಾಪಿಸಿದ ಪರಿಣಾಮ ಉಂಟಾಗಿರುವ ಅನಾ ಹುತಗಳ ಬಗ್ಗೆ ಸರಕಾರಕ್ಕೆ ವರದಿ ನೀಡುವ ನೆಲೆಯಲ್ಲಿ ರಾಜ್ಯದ ವಿಶೇಷ ಅಧ್ಯಯನ ತಂಡ ಗುರುವಾರ ಮಂಗಳೂರಿಗೆ ಆಗಮಿಸಿ ಮಂದಾರ ಪ್ರದೇಶಕ್ಕೆ ಭೇಟಿ ನೀಡಿತು.

ವಿವಿಧ ಕ್ಷೇತ್ರದ ತಜ್ಞರಾಗಿರುವ ಚೆನ್ನೈಯ ಎಸ್‌. ಪಟ್ಟಾಭಿರಾಮಣ್‌, ಮೈಸೂರಿನ ಡಾ| ಪಿ.ಎಂ. ಕುಲಕರ್ಣಿ, ಬೆಂಗಳೂರಿನ ರಮೇಶ್‌, ತಮಿಳುನಾಡಿನ ನಾಗೇಶ್‌ ಪ್ರಭು ಅವರನ್ನು ಒಳಗೊಂಡಿರುವ ತಂಡವು ಮಂದಾರ ಪ್ರದೇಶದಲ್ಲಿ ಪರಿ ಶೀಲನೆ ನಡೆಸಿತು. ಬಳಿಕ ಮಂದಾರ ಪ್ರದೇ ಶದ ನಿರ್ವಸಿತರು ತಾತ್ಕಾಲಿಕ ಪುನರ್ವಸತಿ ಪಡೆದಿರುವ ಕುಲಶೇಖರದ ಬೈತುರ್ಲಿಗೆ ತಂಡ ಭೇಟಿ ನೀಡಿ ಮಾತುಕತೆ ನಡೆಸಿತು. ನಿರ್ವಸಿತರು ಮನವಿಯನ್ನು ತಂಡಕ್ಕೆ ಸಲ್ಲಿಸಿದರು. ಪಾಲಿಕೆಯ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಅಧ್ಯಯನ ತಂಡವು ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿತು. ರಾತ್ರಿ ವೇಳೆ ಅಧ್ಯಯನ ತಂಡವು ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಲಿದೆ.

ಮಂದಾರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯದ ಪ್ರಮಾಣದ ಲೆಕ್ಕಾಚಾರ, ಪರಿಹಾರ ಉಪಾಯಗಳ ಬಗ್ಗೆ ವರದಿ, ಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ಹಾಗೂ ಸದ್ಯ ಪರಿಸರದ ಮೇಲೆ ಬೀಳುವ ಪರಿಣಾಮ ಹಾಗೂ ಪರಿಹಾರ ಇತ್ಯಾದಿಯಾಗಿ ಅಧ್ಯಯನ ತಂಡವು 15 ದಿನಗಳ ಒಳಗೆ ಸರಕಾರಕ್ಕೆ ಸಲ್ಲಿಸಲಿದೆ ಎಂದು ಪಾಲಿಕೆ ಆಯುಕ್ತರು ಅವರು ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English