- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿದ್ದರಾಮಯ್ಯ ಮತ್ತು ಎಚ್. ಡಿ.ಕುಮಾರಸ್ವಾಮಿ ಪರಸ್ಪರ ಆರೋಪ ಮಾಡುದನ್ನು ನಿಲ್ಲಿಸಬೇಕು : ಬಸವರಾಜ ಹೊರಟ್ಟಿ

kumarswamy [1]ಹುಬ್ಬಳ್ಳಿ : ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್. ಡಿ.ಕುಮಾರಸ್ವಾಮಿ ಅವರು ಪರಸ್ಪರ ಆರೋಪ ಮಾಡುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರಾದ ಇಬ್ಬರು ನಾಯಕರು ಇದೀಗ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಆರೋಪಗಳನ್ನು ಮಾಡುತ್ತಿರುವುದು ಎರಡೂ ಪಕ್ಷಗಳಿಗೂ ಒಳ್ಳೆಯದಲ್ಲ ಎಂಬುದನ್ನು ಇಬ್ಬರು ನಾಯಕರು ಅರಿಯಬೇಕು ಎಂದರು.

ಲೋಕಸಭಾ ಚುನಾವಣೆ ಫಲಿತಾಂಶ, ಸಮ್ಮಿಶ್ರ ಸರ್ಕಾರದ ಪತನ ಆಗಿ ಹೋಗಿರುವ ವಿಚಾರ. ಮ್ತತೆ ಅದನ್ನೇ ಕೆದಕಿ ಆರೋಪ ಮಾಡುವುದು ಸರಿಯಲ್ಲ. ನಿಖಿಲ್ ಕುಮಾರಸ್ವಾಮಿ ಡೈನಾಮಿಕ್ ನಾಯಕತ್ವ ಗುಣ ಹೊಂದಿದ್ದಾನೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಕೆಲ ನಾಯಕರ ಹೇಳಿಕೆಗಳೇ ಸುಮಲತಾ ಪರ ಅನುಕಂಪ ಹೆಚ್ಚೆಸುವಂತೆ ಮಾಡಿತು. ಮತದಾನ ವೇಳೆ ಬೂತ್ ಗಳಿಗೆ ಏಜೆಂಟ್ ಗಳು ಸರಿಯಾಗಿ ಸಿಗದಿದ್ದರು ಸುಮಲತಾ ಗೆಲ್ಲುವಂತಾಗಲು ನಮ್ಮ ಪಕ್ಷದ ಕೆಲ ನಾಯಕರ ಹೇಳಿಕೆಗಳೇ ಕಾರಣವಾಯಿತು ಎಂದರು.

ನೆರೆ ಪರಿಹಾರದಲ್ಲಿ ರಾಜ್ಯ-ಕೇಂದ್ರ ಸರಕಾರಗಳ ವೈಫಲ್ಯ, ಆಪರೇಷನ್ ಕಮಲ ಹೀಗೆ ಅನೇಕ ವಿಷಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ, ಟೀಕೆ ಬಿಟ್ಟು ವಿಪಕ್ಷ ನಾಯಕರಿಬ್ಬರು ಪರಸ್ಪರ ಆರೋಪಕ್ಕಿಳಿದರೆ ಬಿಜೆಪಿಗೆ ಲಾಭ ಮಾಡಿ ಕೊಟ್ಟಂತಾಗಲಿದೆ ಎಂದರು.

ಮಾಜಿ ಸಚಿವರಾದ ಎಚ್. ವಿಶ್ವನಾಥ, ಸಾ.ರಾ.ಮಹೇಶ ವೈಯಕ್ತಿಕ ಆರೋಪಗಳಿಗೆ ಮುಂದಾಗಿರುವುದು ಇಬ್ಬರಿಗೂ ಶೋಭೆ ತರದು ಎಂದರು.]

ಶಿಕ್ಷಕರಿಗೆ ದಸರಾ ಬೇಸಿಗೆ ರಜೆ ಇಲ್ಲವಾಗಿಸಿ ರಜೆ ರಹಿತವಾಗಿಸುವುದು ಸರಿಯಲ್ಲ. ಈ ಬಗ್ಗೆ ಸೆ.27ರಂದು ಶಿಕ್ಷಣ ಸೇವೆಯೊಂದಿಗೆ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸುವೆ ಎಂದರು.