- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಡಿಕೇರಿ ದಸರಾದ ದಶಮಂಟಪಗಳ ಪ್ರದರ್ಶನ

dashamantapa [1]ಮಡಿಕೇರಿ : ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವುದೇ ದಶಮಂಟಪಗಳು. ಒಂದೊಂದು ಪೌರಾಣಿಕ ಕಥಾವಸ್ತುಗಳನ್ನು ಆಯ್ದುಕೊಂಡು, ಅದಕ್ಕೆ ನೂತನ ತಂತ್ರಜ್ಞಾನ ಅಳವಡಿಸಿ ಚಲನೆ, ಬೆಳಕಿನ ವಿನ್ಯಾಸ, ಶಬ್ದದ ಚಮತ್ಕಾರದೊಂದಿಗೆ ನೂರಾರು ಮಂದಿಯ ಕೈಚಳಕದಲ್ಲಿ ಅದ್ಭುತವಾಗಿ ಮಂಟಪ ಮೂಡಿಬರುತ್ತದೆ. ದಶಮಂಟಪಗಳ ಪ್ರದರ್ಶನ ನಡೆಯುವುದೇ ದಾನಿಗಳ ಹಣದಲ್ಲಿ ಮತ್ತು ಸರ್ಕಾರ ನೀಡಿದ ಹಣದಲ್ಲಿ. ಇದಕ್ಕೆ ಒಂದೊಂದು ಮಂಟಪ ಸಮಿತಿಯವರು ತಲಾ 20 ರಿಂದ 30 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚ ಮಾಡುತ್ತಾರೆ. ಈ ಅದ್ಭುತ ಪ್ರದರ್ಶನ ವೀಕ್ಷಿಸಲು ಜನಸಾಗರವೇ ಹರಿದುಬರುತ್ತದೆ.

ದಸರಾ ಮಂಟಪಗಳಿಗೆ ಮೂರು ಬಹುಮಾನಗಳನ್ನು ನಿಗದಿ ಮಾಡಲಾಗಿರುತ್ತದೆ. ಬಹುಮಾನ ಪಡೆಯಲು ಮಂಟಪಗಳ ಪೂರ್ವತಯಾರಿ ಯೋಜನೆಗಳು ಹಲವಾರು ತಿಂಗಳಿನಿಂದ ನಡೆಯುತ್ತದೆ. ವಿಜಯದಶಮಿಯ ರಾತ್ರಿ ಪೂಜಾ ವಿಧಿವಿಧಾನಗಳನ್ನು ಮುಗಿಸಿ 11 ಗಂಟೆಯಿಂದ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ನಗರದ ಹಲವೆಡೆ ಮುಂಜಾನೆವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನ ಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿ ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರದರ್ಶನ ನೀಡುತ್ತವೆ. ಪೌರಾಣಿಕವಾಗಿ ಶ್ರೀರಾಮಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವಭಂಗ, ಮತ್ಸ್ಯಅವತಾರ, ಗಜೇಂದ್ರಮೋಕ್ಷ, ಮಹಿಷಾಸುರಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣಕಥೆಗಳನ್ನು ಅಳವಡಿಸಿಕೊಂಡು ದಶಮಂಟಪಗಳು ಜನರನ್ನು ಆಕರ್ಷಿಸುತ್ತದೆ.

ಶ್ರೀ ಪೇಟೆ ರಾಮಮಂದಿರ ದಸರಾ ಸಮಿತಿ. ದೇಚೂರು ಶ್ರೀರಾಮ ಮಂದಿರ ದಸರಾ ಸಮಿತಿ, ಶ್ರೀ ದಂಡಿನ ಮಾರಿಯಮ್ಮ ದಸರಾ ಸಮಿತಿ. ಶ್ರೀ ಚೌಡೇಶ್ವರಿ ಬಾಲಕ ಭಕ್ತಮಂಡಳಿ ದಸರಾ ಸಮಿತಿ, ಶ್ರೀ ಕಂಚಿಕಾಮಾಕ್ಷಿ ಮತ್ತು ಮುತ್ತು ಮಾರಿಯಮ್ಮ ಬಾಲಕ ಮಂಡಳಿ ದಸರಾ ಸಮಿತಿ, ಶ್ರೀಕುಂದುರುಮೊಟ್ಟೆ ಚೌಟಿಮಾರಿಯಮ್ಮ ದಸರಾ ಸಮಿತಿ. ಶ್ರೀ ಕೋದಂಡ ರಾಮ ದಸರಾ ಸಮಿತಿ. ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರಮಂಡಳಿ ದಸರಾ ಸಮಿತಿ. ಶ್ರೀ ಕೋಟೆ ಗಣಪತಿ ದಸರಾ ಸಮಿತಿ ಹಾಗೂ ಶ್ರೀ ಕರವಲೆ ಭಗವತಿ ದಸರಾ ಉತ್ಸವ ಸಮಿತಿ.

ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ. ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ.