ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, 5ನೇ ಬಾರಿ ಬಡ್ಡಿದರವನ್ನು ಕಡಿತಗೊಳಿಸುವ ಮೂಲಕ ಆರ್ಥಿಕ ಚೇತರಿಕೆಗೆ ಆದ್ಯತೆ ನೀಡಿದೆ.
25 ಬೇಸಿಸ್ ಅಂಶಗಳಷ್ಟು ಇಳಿಕೆ ಮಾಡಲು ಆರ್ ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಆರು ಸದಸ್ಯರು ಸಮ್ಮತಿ ನೀಡುವ ಮೂಲಕ ರೆಪೋ ದರ ಶೇ.5.15ಕ್ಕೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ರಿವರ್ಸ್ ರೆಪೋ ದರ ಶೇ.4.9ಕ್ಕೆ ಇಳಿಕೆ ಮಾಡಿದೆ.
ಪ್ರಸ್ತುತ ಹಣದುಬ್ಬರ ನಿಯಂತ್ರಿಸಿ ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಲು ಆರ್ ಬಿಐ ಕೂಡಾ ಮುಂದಾಗಿದ್ದು ಇದೀಗ ಸತತ 5ನೇ ಬಾರಿ ಶೇ.5.40ರಿಂದ ಶೇ.5,15ಕ್ಕೆ ಇಳಿಕೆ ಮಾಡಿ 25 ಅಂಶಗಳನ್ನು ರೆಪೋದರವನ್ನು ಕಡಿತ ಮಾಡಿದೆ.
Click this button or press Ctrl+G to toggle between Kannada and English