ವಿಶಾಖಪಟ್ಟಣಂ : ನವರಾತ್ರಿ ಸಂಭ್ರಮದಲ್ಲಿ ನವ ದುರ್ಗೆಯರ ಆರಾಧನೆ ದೇಶದೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತದೆ. ಆದ್ದರಿಂದ ಈ ಬಾರಿ ನವರಾತ್ರಿ ಆಚರಣೆ ವಿಶಾಖಪಟ್ಟಣದಲ್ಲಿ ಜೋರಾಗಿಯೇ ನಡೆಯುತ್ತಿದ್ದು, ಶ್ರೀ ಕನ್ಯಕ ಪರಮೇಶ್ವರಿ ದೇವಿಗೆ ಬರೋಬ್ಬರಿ 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟಿನಿಂದ ಸಿಂಗರಿಸಿ ಆರಾಧಿಸಲಾಯಿತು.
ಭಾನುವಾರ ದುರ್ಗಾಷ್ಠಮಿ ದಿನದ ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಜೊತೆಗೆ ಕನ್ಯಕ ಪರಮೇಶ್ವರಿ ದೇವಿಗೆ 4 ಕೆಜಿ ಚಿನ್ನ ಹಾಕಿ, ದೇವಿಯ ಸುತ್ತಲು ನೋಟುಗಳಿಂದ ಅಲಂಕರಿಸಲಾಗಿತ್ತು. ಈ ವಿಶೇಷ ಅಲಂಕಾರಕ್ಕೆ ಬರೋಬ್ಬರಿ ಎರಡು ಕೋಟಿ ರೂಪಾಯಿ ನೋಟುಗಳನ್ನು ಬಳಸಲಾಗಿತ್ತು. ಈ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.
ಈ ವಿಶೇಷ ಅಲಂಕಾರಕ್ಕೆ ವಿದೇಶಿ ನೋಟುಗಳನ್ನು ಕೂಡ ಬಳಸಲಾಗಿತ್ತು. ಅಲ್ಲದೆ ದೇವಿಗೆ ಸುಮಾರು 200 ಭಕ್ತಾದಿಗಳು ಹಣ ಹಾಗೂ ಚಿನ್ನವನ್ನು ದೇಣಿಗೆ ಕೊಟ್ಟಿದ್ದರು. ಅದರಿಂದಲೇ ದುರ್ಗಾಷ್ಠಮಿಗೆ ದೇವಿಯ ಅಲಂಕಾರ ಮಾಡಿದ್ದೇವೆ. ಹಾಗೆಯೇ ಈ ಅಲಂಕಾರಕ್ಕೆ 1 ರೂ. ಮುಖಬೆಲೆಯ ನೋಟುಗಳಿಂದ ಹಿಡಿದು 2,000 ರೂ. ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
Click this button or press Ctrl+G to toggle between Kannada and English