‘ಕುದ್ಕನ ಮದ್ಮೆ’ ತುಳುಚಿತ್ರದ ಹಾಡಿನ ಧ್ವನಿ ಸುರುಳಿ ಬಿಡುಗಡೆ

5:30 PM, Tuesday, October 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kukdana-madmeಮಂಗಳೂರು : ಜಿ‌ಆರ್‌ಕೆ ನಿರ್ಮಾಣದ, ಎ.ವಿ ಜಯರಾಜ್ ನಿರ್ದೆಶನದ `ಕುದ್ಕನ ಮದ್ಮೆ’ ತುಳು ಚಿತ್ರದ ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಸೋಮವಾರ ನಗರದ ಮಂಗಳಾ ಕ್ರೀಡಾಂಗಣ ಸಮೀಪದ ವಾಲಿಬಾಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಾಗಿದ್ದ ಪಿಲಿನಲಿಕೆ ವೆಡಿಕೆಯಲ್ಲಿ ನಡೆಯಿತು.

ಮಾಜೀ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ ಹಾಗೂ ಚಿತ್ರ ನಿರ್ಮಾಪಕರಾದ ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್ `ಕುದ್ಕನ ಮದ್ಮೆ’ ಸಿನಿಮಾದ ಆಡಿಯೋವನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ತುಳು ಸಿನಿಮಾ ರಂಗದಲ್ಲೀಗ `ಗಿರಿಗಿಟ್’ ನದ್ದೇ ಹವಾ. ಗಿರಿಗಿಟ್ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ತುಳು ಸಿನಿಮಾ ರಂಗದ ಮಾರುಕಟ್ಟೆ ವಿಸ್ತಾರಗೊಂಡಿದೆ. ತುಳು ಸಿನಿಮಾರಂಗದಲ್ಲಿ `ಗಿರಿಗಿಟ್’ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದಿದ್ದು, ಮುಂದಿನ ದಿನಗಳಲ್ಲಿ ತೆರೆಗೆ ಬರುವ ಎಲ್ಲಾ ತುಳು ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅತೀ ಅಗತ್ಯ. ಕುದ್ಕನ ಮದ್ಮೆಗೆ ಎಲ್ಲರ ಆಶೀರ್ವಾದ ಇರಲಿ ಎಂದು ಹೇಳಿದರು.

ಸಮಾರಂಭದಲ್ಲಿ ಕೆ, ಪಿಲಿನಲಿಕೆ ಆಯೋಜಕರಾದ ಮಿಥುನ್ ರೈ, ಡಾ. ಶಿವಚರಣ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ನಿರ್ದೇಶಕ ಎ.ವಿ ಜಯರಾಜ್, ಕ್ಯಾಟ್ಕದ ಅಧ್ಯಕ್ಷ ಮೋಹನ್ ಕೊಪ್ಪಳ, ಪೃಥ್ವಿ ಅಂಬರ್, ಶೀತಲ್, ಮಹಾಬಲೇಶ್ವರ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ, ನಿರ್ಮಾಪಕರಾದ ಗೌರಿ ಆರ್. ಹೊಳ್ಳ ಮತ್ತು ಸುಹಾಸ್ ಹೊಳ್ಳ, ಕೆ.ಕೆ ಪೇಜಾವರ ಉಪಸ್ಥಿತರಿದ್ದರು.

ಜೀವನ್ ಉಳ್ಳಾಲ್ ಸ್ವಾಗತಿಸಿ, ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು.

ತುಳು ನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ `ಅರ್ಕಾಡಿ ಬರ್ಕೆ’ ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ ಪರಸ್ಪರ ವೈ ಮನಸ್ಸು. ಆದರೆ ಹಿರಿಯರ ವಿಲ್ ಪ್ರಕಾರ ಇವರೆಲ್ಲವೂ ಒಂದಾಗದೇ ಇದ್ದರೆ ಈ ಆಸ್ತಿ-ಪಾಸ್ತಿಗಳು ಇವರಿಗೆ ದಕ್ಕದು. ಈ ಆಸ್ತಿಯ ಆಸೆಗಾಗಿ ಇವರ ಮಧ್ಯೆ ಬಂದು ಸೇರುವ ಕೆಲವು ನಕಲಿ ಸಂಬಂಧಿಕರು ಬ್ರೋಕರುಗಳು-ಸಮಯ ಸಾಧಕರು. ಇವರುಗಳೆಲ್ಲಾ ಸೇರಿ ಸೃಷ್ಟಿಸುವ ಅವಾಂತರಗಳು. ಹೀಗೆ ಸಿನೆಮಾ ಸಂಪೂರ್ಣ ಹಾಸ್ಯಮಯವಾಗಿ ಸಾಗುತ್ತದೆ.

ಈ ಮಧ್ಯೆ ‘ಅಪರಿಚಿತನೊಬ್ಬ’ ಈ ಮನೆಗೆ ಸೇರಿಕೊಳ್ಳುತ್ತಾನೆ. ನಾಯಕಿಯ ಅಪಹರಣವಾಗುತ್ತದೆ. ಜ್ಯೋತಿಷಿಯೊಬ್ಬರ ಸಲಹೆಯಂತೆ `ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ’ ಈ ಮನೆಯಲ್ಲಿ ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ ಈ ಮನೆಯಲ್ಲಿ ಒಂದು ಮದುವೆ ನಡೆದರೆ ಸಮಸ್ಯೆ ಬಗೆ ಹರಿಯುವುದೆಂದು ತಿಳಿದು ಮದುವೆಗೆ ಸಿದ್ಧರಾಗುತ್ತಾರೆ. ಇದೇ `ಕುದ್ಕನ ಮದ್ಮೆ’ ಇಲ್ಲಿ ಕುದುಕ ಯಾರು ಎಂಬುದು ಚಿತ್ರದಲ್ಲಿರುವ ಸಸ್ಪೆನ್ಸ್ ಎಂದು ನಿರ್ದೇಶಕ ಎ.ವಿ ಜಯರಾಜ್ ತಿಳಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English