ಮಂಗಳೂರು: ಗರ್ಭಿಣಿ ಪೊಲೀಸ್ ಸಿಬ್ಬಂದಿಯೋರ್ವರಿಗೆ ಪೊಲೀಸರು ಸೀಮಂತ ಮಾಡಿರುವ ಅಪರೂಪದ ಘಟನೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ನಡೆದಿದೆ.
ನಗರದ ಬೆಂದೂರ್ನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ಪೊಲೀಸ್ ನಿರೀಕ್ಷಕ ಶಾಂತಾರಾಮ್ ಮತ್ತು ಠಾಣಾ ಸಿಬ್ಬಂದಿಯಿಂದ ಕದ್ರಿ ಠಾಣಾ ಸಿಬ್ಬಂದಿ ಗೌರಮ್ಮ ಅವರಿಗೆ ಸಾಂಪ್ರದಾಯಿಕವಾಗಿ ಸೀಮಂತ ನಡೆಸಿಕೊಟ್ಟರು.
ಪೊಲೀಸ್ ಸಿಬ್ಬಂದಿಕಾರ್ಯಕ್ರಮದಲ್ಲಿ ಗೌರಮ್ಮ ಅವರ ಪತಿ ಶಿವಾನಂದ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.
ಪೊಲೀಸರು ತಮ್ಮ ಕೆಲಸದ ಒತ್ತಡದಲ್ಲಿಯೂ ಈ ರೀತಿಯ ಕಾರ್ಯದಲ್ಲಿ ತೊಡಗಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ಅವರು ಇಲಾಖೆ ಸಿಬ್ಬಂದಿಗಳು ತೋರಿಸಿದಈ ಕೆಲಸವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
Click this button or press Ctrl+G to toggle between Kannada and English