ವಿಟ್ಲ : ಕಾಶಿಮಠದಲ್ಲಿ ಯುವ ಸಮ್ಮಿಲನ ಸಾಂಸ್ಕೃತಿಕ ಹಬ್ಬ

10:08 AM, Tuesday, October 22nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

yuva-sanmelanaವಿಟ್ಲ : ಕಾಶಿಮಠದಲ್ಲಿ ಯುವ ಸಮ್ಮಿಲನ ಸಾಂಸ್ಕೃತಿಕ ಹಬ್ಬವು ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ವಿಟ್ಲ ಕಾಶೀಮಠ ಶ್ರೀ ಕಾಶೀ ಮಹಿಳಾ ಮಂಡಲ ಹಾಗೂ ಶ್ರೀ ಕಾಶೀ ಯುವಕ ಮಂಡಲ ವತಿಯಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಇತ್ತೀಚೆಗೆ ನಡೆಯಿತು.

ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಹಳ್ಳಿಯ ಮಹಿಳೆಯರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿವುದು ಶ್ಲಾಘನೀಯ. ಮಹಿಳೆಯರು ಬರೆಯುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ತರಂಗ ವಾರಪತ್ರಿಕೆ ಮಾಜಿ ಸಂಪಾದಕಿ ಅನಿತಾ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿ, ಮಾಧ್ಯಮ ಮತ್ತು ಮಹಿಳೆಯ ಪ್ರತಿಸ್ಪಂದನ ಬಗ್ಗೆ ಉಪನ್ಯಾಸ ನೀಡಿದರು.

ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥೆ ಸರಸ್ವತಿ ಕುಮಾರಿ ಪ್ರಬಂಧ ಮಂಡಿಸಿದರು. ಕಾಶೀ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ.ವಿ, ಕಾಶೀ ಮಹಿಳಾ ಮಂಡಲದ ಅಧ್ಯಕ್ಷೆ ಮೀರಾ ಭಟ್, ಉಪಸ್ಥಿತರಿದ್ದರು.

ಬಳಿಕ ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಸದಸ್ಯರಿಂದ ನೃತ್ಯ, ಹಾಡು, ನೃತ್ಯ ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ರಮ್ಯ ಪ್ರಾರ್ಥಿಸಿ, ಪಿ.ಎಂ ರೋಹಿನಿ ಪ್ರಸ್ತಾವಿಸಿದರು. ಕಾಶೀ ಯುವಕ ಮಂಡಲದ ಅಧ್ಯಕ್ಷ ಕೇಶವ ವಿ.ಕೆ. ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ಅರುಣ ನಾಗರಾಜ್ ವಂದಿಸಿ, ಯುವಕ ಮಂಡಲದ ಜೊತೆ ಕಾರ್ಯದರ್ಶಿ ನವೀನ್ ಕುಮಾರ್ ನಿರೂಪಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English