- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಾಮರಾಜನಗರದಲ್ಲಿ ಸೆರೆಯಾದ ಪುಂಡಾನೆಯನ್ನು ತಮಿಳುನಾಡಿಗೆ ಬಿಟ್ಟ ಅಧಿಕಾರಿಗಳು

Pundane [1]ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು  ಬನ್ನಿತಾಳಪುರ ಸಮೀಪ  ಕಳೆದ ಮೂರು ದಿನಗಳಿಂದ ರೈತರಲ್ಲಿ ಆತಂಕ ಹುಟ್ಟಿಸಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನಲ್ಲಿ ಈ ಆನೆ 8  ಜನರನ್ನು  ಕೊಂದಿತ್ತು.  ಇಬ್ಬರು ರೈತರಿಗೆ ಗಾಯ ಮಾಡಿತ್ತು,  3 ಹಸುಗಳನ್ನು ತುಳಿದು ಸಾಯಿಸಿ ತ್ತು .

ತಮಿಳುನಾಡಿನ ಮಧುಮಲೈ ಅರಣ್ಯದಿಂದ ಬಂದಿದ್ದ ಆನೆ ಬನ್ನಿತಾಳಪುರ ದಲ್ಲಿ ರೈತರ ಹೊಲದಲ್ಲಿ ರಂಪಾಟ ನಡೆಸಿತ್ತು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರವಳಿಕೆ ನೀಡಿ ಆನೆ ನೆ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ.  ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, ಗಣೇಶ ಆನೆಗಳೊಂದಿಗೆ  ಈ  ಕಾರ್ಯಾಚರಣೆ ನಡೆದಿದೆ.

ಪುಂಡಾನೆಯನ್ನು ರೇಡಿಯೋ ಕಾಲರ್ ಹಾಕಿ ತಮಿಳುನಾಡು ಮಧುಮಲೈ ಅರಣ್ಯಕ್ಕೆ ತಂದು  ಬಿಡಲಾಯಿತು.

ಜೋಡುಪಾಲದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು : ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಅಸಮಾಧಾನ

Madikeri-jodupalla [2]ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಮಡಿಕೇರಿಯ ಜೋಡುಪಾಲ ಗ್ರಾಮದಲ್ಲಿಯು  ಕಳೆದ ಹತ್ತು ದಿನಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಸುಮಾರು ನಾಲ್ಕರಿಂದ ಐದು ಕಾಡಾನೆಗಳ ಹಿಂಡು ಗ್ರಾಮದ ಬಹುತೇಕ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಅ.೧೭ ರಂದೇ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಿದ ಗ್ರಾಮಸ್ಥರು ಆನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದರು. ಆದರೆ ಅ.20 ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ ಡಿಆರ್‌ಎಫ್‌ಒ ಹಾಗೂ ಸಿಬ್ಬಂದಿ ವರ್ಗ ಕಾಡಾನೆ ವಿರುದ್ಧ ಕಾರ್ಯಾಚರಣೆ ನಡೆಸದೆ ಮಳೆ ಬಂತು ಎನ್ನುವ ನೆಪವೊಡ್ಡಿ ಮರಳಿದ್ದಾರೆ. ಸ್ಥಳೀಯರು ಜೀವ ಭಯದಲ್ಲಿದ್ದರೂ ಕನಿಷ್ಠ ಪಟಾಕಿಯನ್ನು ಕೂಡ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಂದು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಾಡಾನೆಗಳು ಬಹುತೇಕ ಎಲ್ಲಾ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಿವೆ. ಕಾಫಿ ಹಾಗೂ ಬಾಳೆ ಕೃಷಿ ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಲಕ್ಷಾಂತರ ರೂ.ನಷ್ಟವಾಗಿದೆ ಎಂದು ತಿಳಿಸಿರುವ ಸ್ಥಳೀಯರು, ಅರಣ್ಯ ಇಲಾಖೆ ಜೀವಹಾನಿ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮನವಿ ನೀಡುವ ಸಂದರ್ಭ ಗ್ರಾಮದ ಪ್ರಮುಖರಾದ ಜಿ.ಎ.ಶರ್ಮಿಳ, ಪ್ರಮೀಳ, ಸುನೀಲ್, ಸುಂದರ ನಾಯಕ ಮತ್ತಿತರರು ಹಾಜರಿದ್ದರು.