- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಡಿತರ ಚೀಟಿ ಗೊಂದಲ, ಅನರ್ಹ ಪಡಿತರದಾರರಿಗೆ ದಂಡ ವಸೂಲಾತಿ ಕ್ರಮದ ಬಗ್ಗೆ ಚರ್ಚೆ

UT-Kader [1]

ಬಂಟ್ವಾಳ : ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಪಡಿತರ ಚೀಟಿ ಗೊಂದಲ, ಅನರ್ಹ ಪಡಿತರದಾರರಿಗೆ ದಂಡ ವಸೂಲಾತಿ ಕ್ರಮದ ಬಗ್ಗೆ ಚರ್ಚೆ ನಡೆಯಿತು.

ಶಾಸಕ ಯು.ಟಿ. ಖಾದರ್ ಪ್ರಸ್ತಾಪಿಸಿ, ಪಡಿತರ ಚೀಟಿಯ ಬಗ್ಗೆ ಜನರು ಗೊಂದಲಕ್ಕೀಡಾಗಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆ ನೀಡುವಂತಹ ನಿರ್ಣಯ ಜಾರಿಗೊಳಿಸುವುದು ಸರಿಯಲ್ಲ. ಉಚಿತ ಅನ್ನಕ್ಕೆ ದಂಡ ವಸೂಲಿ ಮಾಡುತ್ತಿರುವ ಪ್ರಕ್ರಿಯೆ ಇದೇ ಮೊದಲು ಎಂದರು.

ಕಳೆದ ಎರಡು ವರ್ಷದ ಹಿಂದೆ ಸೈಬರ್ ಸಮೇತ ಇನ್ನೀತರ ಕಡೆಗಳಲ್ಲಿ ಮನೆನಂಬ್ರ ಇಲ್ಲದವರು ಮನೆಗೆ ಎರಡರಂತೆ ಪಡಿತರ ಚೀಟಿ ಹೊಂದಿದ್ದಾರೆ. ಅದರಂತೆ ಬೊಗಸ್ ಅಡುಗೆ ಅನಿಲ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಚಕ್ರದ ಖಾಸಗಿ ವಾಹನ ಹೊಂದಿರುವ ಬಿಪಿಎಲ್ ಪಡಿತರ ಕಾರ್ಡ್ ಇದೆ. ಮನೆ ನಂಬರ್ ಇಲ್ಲದ ಬಿಪಿಎಲ್ ಕಾರ್ಡ್ ರದ್ದು ಮಾಡುವಂತೆ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದರು.

ತಾಲೂಕು ಪಂಚಾಯತ್ ಸ್ವಾದೀನದಲ್ಲಿರುವ ಸರಕಾರಿ ಜಮೀನನಲ್ಲಿ ಸ್ವಲ್ಪ ಜಾಗವು ಒಬ್ಬರು ಅತಿಕ್ರಮಣ ಮಾಡಿರುತ್ತಾರೆ. ಒಟ್ಟಾರೆಯಾಗಿ ೦.೩೦ ಎಕ್ರೆ ಜಮೀನು ಸರಕಾರಿ ಅಧಿಕಾರಿಗಳ ವಸತಿಗೃಹಗಳ ನಿರ್ಮಾಣ ಕ್ಕೆ ಕಾಯ್ದಿರಿಸಿದನ್ನು ಬಿಟ್ಟರೆ ತಾಲೂಕು ಪಂಚಾಯತ್ ಕಚೇರಿ ಸೇರಿದಂತೆ ಸ್ರೀಶಕ್ತಿ ಭವನ, ಸಾಮಾರ್ಥ್ಯ ಸೌದ, ಆಶ್ರಮ ಶಾಲೆ, ವಾಹನ ಶೆಡ್‌ಗಳೆಗೆ ಜಮೀನು ಮಂಜೂರುಗೊಂಡಿಲ್ಲ ಎಂದರು.

ಇನ್ನುಳಿದ ಅವಧಿಗೆ ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಮಲ್ಲಿಕಾ ಶೆಟ್ಟಿ ಅವರು ಆಯ್ಕೆ ಮಾಡಲಾಯಿತು. ಹಿರಿಯ ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಸೂಚಿಸಿದ್ದು, ಸದಸ್ಯ ಆದಂ ಕುಂಞಿ ಅನುಮೋದಿಸಿದರು.

ಗ್ರಾಮ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಗ್ರಾಪಂ ಕೆಡಿಪಿ ಸಭೆಗೆ ಪಂಚಾಯತ್‌ನಿಂದ ಆಹ್ವಾನಿಸಿದರೂ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಎಂದು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಶಾಸಕರಲ್ಲಿ ದೂರಿಕೊಂಡರು.
ತಾಪಂ ಸದಸ್ಯರಾದ ಹೈದರ್ ಕೈರಂಗಳ, ರಮೇಶ್ ಕುಡ್ಮೇರು, ಚರ್ಚೆಯಲ್ಲಿ ಭಾಗವಹಿಸಿದರು.