ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಥಾಣೆ -ಗೋಡ್ ಬಂದರ್ ನ ಸಂಘದ ಜಾಗದ ಅಭಿವೃದ್ಧಿ ಕಾರ್ಯಗಳ ಪ್ರಯುಕ್ತ ನವಂಬರ್ 3ರಂದು ರವಿವಾರ ಬೆಳಿಗ್ಗೆ 10ಕ್ಕೆ ಸಾಹಿತ್ಯ ಮಂದಿರ ಸಭಾಗೃಹ (ಮರಾಠಿ ಸಾಹಿತ್ಯ ಸಂಸ್ಕೃತಿ ಮತ್ತು ಕಲಾಮಂದಿರ), ಪ್ಲಾಟ್ ನಂಬ್ರ 26, ಸೆಕ್ಟರ್ 6, ವಾಶಿ ರೈಲ್ವೆ ಸ್ಟೇಷನ್ ನ ಹತ್ತಿರ, ವಾಶಿ, ನವಿಮುಂಬಯಿ ಇಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇದರ ಕಲಾವಿದರು ಅಭಿನಯಿಸುವ, ಗಡಿನಾಡು ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ, ಕುಸಲ್ದರಸೆ ನವೀನ್ ಡಿ. ಪಡೀಲ್ ಇವರ ಸಹಕಾರದೊಂದಿಗೆ, ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚಿಸಿರುವ, ರಂಗ್ ದ ರಾಜೆ ಲಯನ್ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ, ಊರಿನಲ್ಲಿ ಹಲವಾರು ಯಶಸ್ವಿ ಪ್ರದರ್ಶನಗಳೊಂದಿಗೆ ಜನಮನರಂಜಿಸಿದ ಈ ವರ್ಷದ ಸೂಪರ್ ಹಿಟ್ ತುಳು ಹಾಸ್ಯಮಯ ನಾಟಕ “ಗಿರ್ ಗಿಟ್ ಗಿರಿಧರೆ” ಪ್ರದರ್ಶನ ನಡೆಯಿತು.
ನಾಟಕದ ಮಧ್ಯಂತರದಲ್ಲಿ ತಂಡದ ಪ್ರಮುಖ ಕಲಾವಿದ ಚಿತ್ರನಟ ಸುಂದರ್ ರೈ ಮಂದಾರ ಇವರನ್ನು ಸನ್ಮಾನಿಸಲಾಗುವುದು.
ಸನ್ಮಾನವನ್ನು ಸ್ವೀಕರಿಸಿದ ಸುಂದರ ಮಂದಾರ ಸನ್ಮಾನಕ್ಕೆ ಉತ್ತರಿಸುತ್ತಾ ನನ್ನ ರಂಗಭೂಮಿಯ ಸಾಧನೆಯನ್ನು ದೇಶದ ಉದ್ದಗಲದಲ್ಲಿ ಗುರುತಿಸಿಕೊಂಡಿದ್ದಾರೆ ಮುಂಬಯಿಯ ಕಲಾಭಿಮಾನಿಗಳು ನನ್ನ ಬದುಕಿನ ಆರಾಧ್ಯ ಕರು ಕಲಾವಿದನಿಗೆ ಸನ್ಮಾನ ಆತನ ಬದುಕಿಗೆ ಪ್ರೋತ್ಸಾಹ ಈ ಸನ್ಮಾನ ತುಳು ರಂಗಭೂಮಿಯಲ್ಲಿ ಹುಟ್ಟಿಕೊಂಡಿರುವ ಕಲಾ ತಂಡಗಳಿಗೆ ಸಮರ್ಪಣೆ ಉಳಿಸುತ್ತೇನೆ ಮುಂಬಯಿ ಕುಲಾಲ ಸಂಘದ ಗೌರವ ನನ್ನ ಬದುಕಿನಲ್ಲಿ ತಿರಸ್ಕಾರ ಉಳಿತದ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಬಾಲಚಂದ್ರ ರಾವ್ ಮಾತನಾಡುತ್ತಾ ಮುಂಬೈಯ ಬಹಳ ಹಿರಿಯ ಸಂಸ್ಥೆ ಕುಲಾಲ ಸಂಘ ಸಮಾಜಕ್ಕಾಗಿ ಹಲವಾರು ಸೇವಾ ಕಾರ್ಯಗಳು ನಡೆಸುತ್ತಾ ಬಂದಿದ್ದು ಮಂಗಳೂರಿನಲ್ಲಿ ಬೃಹತ್ ಕುಲಾಲ ಭವನದ ಯೋಜನೆ ನಿರ್ಮಾಣಗೊಂಡಿದ್ದು ಕುಳಿತಿದ್ದಾರೆ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ ಕಲೆಗೆ ಪ್ರೋತ್ಸಾಹ ನೀಡುತ್ತಾ ಕಲಾವಿದನನ್ನು ಸನ್ಮಾನಿಸಿದ್ದು ರಂಗಭೂಮಿಗೆ ನೀಡಿದ ಗೌರವ ಎಂದು ನುಡಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಮಾತನಾಡುತ್ತಾ ತುಳು ರಂಗಭೂಮಿಯ ಅದ್ಭುತ ಪ್ರತಿಭೆ ಸುಂದರ ಅವರು ಹಲವಾರು ನಾಟಕ ಸಿನಿಮಾದಲ್ಲಿ ಅಭಿನಯದ ಮೂಲಕ ಜನಮನ ರಂಜಿಸಿದ ಅವರು ಅವರನ್ನು ಸನ್ಮಾನಿಸಿ ದಕ್ಕೆ ಕುಲಾಲ ಸಂಘ ಅಭಿಮಾನ ಹೆಮ್ಮೆ ಪಡುತ್ತದೆ ನಿರಂತರವಾಗಿ ನಗರದಲ್ಲಿ ಕಲೆ-ಸಾಹಿತ್ಯ ಧಾರ್ಮಿಕ ಶೈಕ್ಷಣಿಕ ಸೇವಾಕಾರ್ಯಗಳನ್ನು ನಡೆಸುತ್ತಾ ಸಂಘ ಬರುತ್ತಿದೆ ಮಂಗಳೂರಿನಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಯೋಜನೆ ದಾನಿಗಳ ಎಲ್ಲರ ಸಮಾಜ ಬಾಂಧವರ ಸಹಕಾರದಿಂದ ನಡೆಯುತ್ತಿದೆ ಈ ಯೋಜನೆಗೆ ಇನ್ನಷ್ಟು ಆರ್ಥಿಕ ಸಹಕಾರ ಅಗತ್ಯವಿದೆ ಸಮಾಜ ಬಂಧುಗಳು ದಾನಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಎಂದು ನುಡಿದರು ವೇದಿಕೆಯಲ್ಲಿ ಗೌ. ಪ್ರ. ಕಾರ್ಯದರ್ಶಿ ಶ್ರೀ ಕರುಣಾಕರ್ ಬಿ. ಸಾಲ್ಯಾನ್, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ವಾಸು ಎಸ್. ಬಂಗೇರ, ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಲಾ ಎಸ್. ಮೂಲ್ಯ, ನೆರೂಲ್, ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಶ್ರೀ ಬಾಲಚಂದ್ರ ರಾವ್, ಬೈಕಲಾ ಮೇಗ್ಸನ್ ಟೈಲರ್ಸ್ ನ ಮಾಲಕರಾದ ಶ್ರೀ ಸುನಿಲ್ ಸಾಲ್ಯಾನ್, ಜೈದೀಪ್ ಕನ್ಸ್ಟ್ರಕ್ಷನ್ ಅಂಬರ್ ನಾಥ್ ನ ಮಾಲಕರಾದ ಶ್ರೀ ಜಗದೀಶ್ ಆರ್. ಬಂಜನ್, ನವಿಮುಂಬಯಿ ಕನ್ನಡ ಸಂಘ ವಾಶಿ ಇದರ ಅಧ್ಯಕ್ಷರಾದ ಶ್ರೀ ಗೋಪಾಲ್ ವೈ. ಶೆಟ್ಟಿ, ನವಿಮುಂಬಯಿ ಕನ್ನಡ ಸಂಘ ವಾಶಿ ಇದರ ಉಪಾಧ್ಯಕ್ಷರಾದ ಶ್ರೀ ಜಯರಾಮ್ ಶೆಟ್ಟಿ, ನೆರೂಲ್ ನ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಅನಿಲ್ ಹೆಗ್ಡೆ, ನೆರೂಲ್ ನ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನ ಉಪ ಕಾರ್ಯಾಧ್ಯಕ್ಷರಾದ ಶ್ರೀ ಪ್ರಭಾಕರ್ ಹೆಗ್ಡೆ, ರಂಗಭೂಮಿ ಫೈನ್ ಆರ್ಟ್ಸ್ ನವಿಮುಂಬಯಿ ಇದರ ಅಧ್ಯಕ್ಷರಾದ ಶ್ರೀ ತಾರಾನಾಥ್ ಶೆಟ್ಟಿ ಪುತ್ತೂರು, ಹುಮನ್ ರೈಟ್ಸ್ ನವಿ ಮುಂಬೈ ಅಧ್ಯಕ್ಷ ಹರೀಶ್ ಪೂಜಾರಿ, ಪನ್ವೆಲ್ ಕರ್ನಾಟಕ ಸಂಘದ ಯುವ ವಿಭಾಗದ ದ ಯುವ ವಿಭಾಗ ಕಾರ್ಯಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಜಗದೀಶ್ ಶೆಟ್ಟಿ ಕಾರ್ ಗರ್ ಬಂಟರ ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪ ಡಿ ಶೆಟ್ಟಿ ನಿತ್ಯಾನಂದ ಶೆಟ್ಟಿ ಮುಂಡರು ಗುತ್ತು ಉಪಸ್ಥಿತರಿರುವರು. ತಂಡದ ಮುಂಬೈ ಸಂಚಾಲಕ ಪ್ರಕಾಶಂ ಶೆಟ್ಟಿ ಸುರತ್ಕಲ್ ಅವರನ್ನುು ಗೌರವಿಸಲಾಯಿತ ಕಾರ್ಯಕ್ರಮವನ್ನು ವೇದಿಕೆಯ ಗಣ್ಯರಿಗೆ ದೇವದಾಸ್ ಕುಲಾಲ್ ರಘು ಮೂಲ್ಯ ಪಾದೆಬೆಟ್ಟು ಕರುಣಾಕರ ಸಾಲಿಯಾನ್ ಜಯ ಅಂಚನ್. ಪಿ ಶೇಖರ್ ಮೂಲ್ಯ . ವಾಸುು ಬಂಗೇರ ಎಲ್ ಆರ್ ಮೂಲ್ಯ ಸೂರಜ್ ಕುಲಾಲ್ ಪ್ರಸಾದ್ ಮೂಲ್ಯ. ಹ ರಿಶ್ಚಂದ್ರ ಮೂಲ್ಯ ಕಾರ್ಯಕ್ರಮವನ್ನು ಶಶಿ ಕುಮಾರ್ ವಿ ಕುಲಾಲ್ ನಿರೂಪಿಸಿದರು. ಸನ್ಮಾನಿತರನ್ನು ಪತ್ರಕರ್ತ ದಿನೇಶ್ ಕುಲಾಲ ಪರಿಚಯಿಸಿದರು ಕೊನೆಯಲ್ಲಿ ಕೊನೆಯಲ್ಲಿ ಸಂಘದ ಉಪಾಧ್ಯಕ್ಷಷ ರಘು ಮೂಲ್ಯ ಪಾದೆಬೆಟ್ಟು ಅಪಾರ ಮನ್ನಿಸಿದರು.
Click this button or press Ctrl+G to toggle between Kannada and English