- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗೋಣ : ಭಾಗವತ ಪಟ್ಲ ಸತೀಶ್ ಶೆಟ್ಟಿ

Patla [1]

ಮಂಗಳೂರು : ಅನೇಕ ಯಕ್ಷಗಾನ ಕಲಾವಿದರ ಬದುಕು ಇಂದು ಕರುಣಾಜನಕ ಸ್ಥಿತಿಯಲ್ಲಿದ್ದು, ಅಂತಹವರ ಕುಟುಂಬಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದಯುವ ಮದ್ದಳೆಗಾರ ಕಡಬ ವಿನಯ ಆಚಾರ್ಯರ ಸಂಸ್ಮರಣಾಕಾರ್ಯಕ್ರಮದಲ್ಲಿಅವರುನುಡಿನಮನ ಸಲ್ಲಿಸಿದರು. ತನ್ನತಂದೆ ದಿವಂಗತ ಕಡಬ ನಾರಾಯಣ ಆಚಾರ್ಯರಿಂದ ಬಳುವಳಿಯಾಗಿ ಬಂದಿರುವ ಚೆಂಡೆ-ಮದ್ದಳೆ ವಾದನದಲ್ಲಿ ವಿನಯನೂಕೂಡಾ ಸಾಧನೆ ಗೈದು ಉತ್ತಮ ಕಲಾವಿದನಾಗಿ ರೂಪುಗೊಂಡಿದ್ದ. ದಿನೇಶ ಅಮ್ಮಣ್ಣಾಯರಂತಹ ಹಿರಿಯ ಭಾಗವತರ ಸಹಿತ ಬಹುತೇಕ ಅನೇಕ ಹೆಸರಾಂತ ಭಾಗವತರೊಂದಿಗೆ ಮದ್ದಳೆಗೆ ಜತೆಗಾರನಾಗಿಎಲ್ಲರೊಂದಿಗೆ ಸ್ನೇಹಮಯಿಯಾಗಿದ್ದುದನ್ನು ಸ್ಮರಿಸಿದರು.

ನಗರದ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಹೊರಾಂಗಣದಲ್ಲಿ ಕಡಬ ಸಂಸ್ಮರಣಾ ಸಮಿತಿಯು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯಯಕ್ಷಗಾನ ಭಾಗವತ ದಿನೇಶ ಅಮ್ಮಣ್ಣಾಯ, ಕಲಾವಿದ ಎಂ. ಕೆ. ರಮೇಶಆಚಾರ್ಯ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ೨ನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ ಮೊದಲಾದವರು ದಿವಂಗತ ಕಡಬ ವಿನಯ ಆಚಾರ್ಯನ ಸ್ಮರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ಪ್ರಸ್ತಾವನೆ ಗೈದರು. ಡಿ. ಭಾಸ್ಕರಆಚಾರ್ಯ, ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅದೇ ವೇದಿಕೆಯಲ್ಲಿ ಗಿರೀಶ್‌ಕಾವೂರು ಅವರ ಸಂಯೋಜನೆಯಲ್ಲಿ ’ಯಕ್ಷಗಾನಾರಾಧನೆ’ ಜರಗಿತು.

ಭಾಗವತರಾದ ದಿನೇಶ್‌ಅಮ್ಮಣ್ಣಾಯ, ಪಟ್ಲ ಸತೀಶ್ ಶೆಟ್ಟಿ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ರವಿಚಂದ್ರ ಕನ್ನಡಿಕಟ್ಟೆಯವರ ಹಾಡಿಗಾರಿಕೆಗೆ ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ, ಕೃಷ್ಣ ಪ್ರಸಾದ್ ಉಳಿತ್ತಾಯ, ಲವಕುಮಾರ ಐಲ, ಚೇತನ್ ಸಚ್ಚರಿಪೇಟೆ ಹಾಗೂ ರಾಜೇಂದ್ರ ಸಹಕರಿಸಿದರು.