ಮೈಸೂರು : ಕೋರ್ಟ್ ತೀರ್ಪು ಬಂದ ನಂತರ ಆಪರೇಷನ್ ಕಮಲದ ಸತ್ಯವನ್ನು ಒಬ್ಬೊಬ್ಬರಾಗಿ ಬಾಯ್ಬಿಡುತ್ತಿದ್ದು, ಇದು ಜನರಿಗೆ ಅರ್ಥವಾಗುತ್ತದೆ, ಇವರೆಲ್ಲ ಅನರ್ಹರೇ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದರು.
ಇಂದು ತಮ್ಮ ಮನೆ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಪರೇಷನ್ ಕಮಲದ ರಹಸ್ಯವನ್ನು ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರು ಸತ್ಯ ಹೇಳುತ್ತಿದ್ದಾರೆ ಇದು ಜನರಿಗೆ ಅರ್ಥವಾಗುತ್ತದೆ. ಇವರೆಲ್ಲಾ ಅನರ್ಹರೇ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಅನರ್ಹತೆಯ ಪಟ್ಟ ಕಟ್ಟಿಕೊಂಡೆ ಜನರ ಬಳಿಗೆ ಹೋಗಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅನರ್ಹರೆಲ್ಲಾ ತ್ಯಾಗಿಗಳಲ್ಲ ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವಾತಂತ್ರ ಹೋರಾಟಗಾರರೇ ಎಂದು ಪ್ರಶ್ನಿಸಿದ ಅವರು, ಅನರ್ಹರೆಲ್ಲರನ್ನು ಗೆದ್ದು ಬಂದ ನಂತರ ಸಚಿವರಾಗಿ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ? ಬಿಜೆಪಿ ಅವರಿಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಇಲ್ಲವೇ? ಅಕ್ರಮದಿಂದ ಚುನಾವಣೆ ಎದುರಿಸಲು ಸರ್ಕಾರ ಸಜ್ಜಾಗಿದೆ. ಮೈಸೂರಿನಲ್ಲಿ ಸಿಕ್ಕಿದ ಯೋಗೇಶ್ವರ್ ಪೋಟೋ ಇರುವ ಸೀರೆಗಳೇ ಇದಕ್ಕೆ ಸಾಕ್ಷಿ ಎಂದರು.
ಬಿಜೆಪಿ ಉಪ ಚುನಾವಣೆಯಲ್ಲಿ 8 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಜೆಡಿಎಸ್ಗೆ ಯಾವುದೇ ಸ್ಟಾಂಡ್ ಇಲ್ಲ ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಚುನಾವಣೆಯ ನಂತರ ಬಿಜೆಪಿ ಸರ್ಕಾರದ ಸಂಕಷ್ಟದ ಬಗ್ಗೆ ಮಾತನಾಡೋಣ ಎಂದರು.
Click this button or press Ctrl+G to toggle between Kannada and English