- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳಾದೇವಿಯಲ್ಲಿ ವೈಭವದ ರಥೋತ್ಸವದೊಂದಿಗೆ ದಸರಾ ಉತ್ಸವದ ಸಮಾಪನೆ

Mangaladevi Temple [1]ಮಂಗಳೂರು: ಮಂಗಳೂರಿನ ಪ್ರಸಿದ್ಧ ದೇವಾಲಯವಾದ ಬೋಳಾರದ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ ವಿಶಿಷ್ಟವಾಗಿ ನಡೆಯುತ್ತಿದ್ದು ಅಸಂಖ್ಯಾತ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ದೇವಾಲಯದಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ನವದುರ್ಗೆಗೆ ಮಧ್ಯಾಹ್ನ ಕಲ್ಪೋಕ್ತ ಪೂಜೆಗಳು ನಡೆಯುತ್ತವೆ. ಮಂಗಳಾದೇವಿಯಲ್ಲಿ ದೇವಿಯನ್ನು ಒಂಭತ್ತು ದಿನಗಳಲ್ಲಿ ಒಂಭತ್ತು ರೀತಿಗಳಲ್ಲಿ ಅಲಂಕರಿಸುವ ಸಂಪ್ರದಾಯವಿದ್ದು, ಪ್ರತಿದಿನ ದಿನಕ್ಕೊಂದರಂತೆ ದೇವಿಯರ ಪೂಜೆ ನಡೆಯುತ್ತದೆ. ದುರ್ಗಾದೇವಿ, ಆರ್ಯದೇವಿ, ಭಗವತಿ, ಕೌಮಾರಿ, ಅಂಬಿಕೆ, ಮಹಿಷಮರ್ಧಿ ನಿ, ಚಂಡಿಕೆ, ಸರಸ್ವತಿ, ನಾಗೇಶ್ವರಿ ಹೀಗೆ ವಿವಿಧ ಅಲಂಕಾರಗಳೊಂದಿಗೆ ದೇವಿಯ ಆರಾಧನೆ ನಡೆಯುತ್ತದೆ. ಇದು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಪೂಜೆಯ ವೈಶಿಷ್ಟ್ಯವಾಗಿದೆ.

Mangaladevi Temple [2]ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಬಲಿ ಹೊರಟು ಮಹಾ ರಥೋತ್ಸವ ಜರಗಿತು. ಸಂಜೆಯ ವೇಳೆ ನಾನಾ ರೀತಿಯ ದಸರಾ ವೇಷಗಳ ಮೆರವಣಿಗೆಯ ಮೂಲಕ ದೇವಿಯ ರಥವನ್ನು ಮಹಾನವಮಿ ಕಟ್ಟೆವರೆಗೆ ಸಾವಿರಾರು ಭಕ್ತರು ಎಳೆದು ಮಂಗಳಾದೇವಿಯನ್ನು ಕಣ್ತುಂಬಿಕೊಳ್ಳುವರು.

ವಿಜಯದಶಮಿಯ ಮರುದಿನ ಉತ್ಸವ ಮೂರ್ತಿ ಯನ್ನು ಸಂಜೆ ಸಣ್ಣ ರಥದಲ್ಲಿರಿಸಿ ಉಪ್ಪಿನಕೋಟೆಯ ನೇತ್ರಾವತಿ ಪಲ್ಗಣಿ ನದಿಗಳ ಸಂಗಮ ಸ್ಥಳಕ್ಕೆ ತೆರಳಿ ಅವಭೃತ ಸ್ನಾನವಾಗಿ ಹಿಂದಿರುಗಿ ಬಂದ ನಂತರ ಮಹಾಪೂಜೆ ನಡೆಯುವುದು.

Mangaladevi Temple [3]

Mangaladevi Temple [4]

Mangaladevi Temple [5]

Mangaladevi Temple [6]