5 ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ರಾಣಿ ಹುಲಿ, ಉದ್ಯಾನವನದಲ್ಲಿ18ಕ್ಕೆ ಏರಿದ ಹುಲಿಗಳ ಸಂಖ್ಯೆ‌

2:17 PM, Friday, November 22nd, 2019
Share
1 Star2 Stars3 Stars4 Stars5 Stars
(No Ratings Yet)
Loading...

pilikulaಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಿಲಿಕುಳ ಜೈವಿಕ‌ ಉದ್ಯಾನವನದಲ್ಲಿ  ವಿಶ್ವದಲ್ಲೇ ಅಪರೂಪ ಎಂಬಂತೆ ಪಿಲಿಕುಳದ ಹುಲಿ ರಾಣಿ 5 ಮರಿಗಳಿಗೆ ಜನ್ಮ ನೀಡಿದೆ.

ಹುಲಿ ಸಂತತಿಯಲ್ಲೇ  5 ಮರಿಗಳಿಗೆ ಜನ್ಮ ನೀಡಿರುವುದು ಅಪರೂಪವೂ ಆಗಿದೆ. ಪಿಲಿಕುಳದಲ್ಲಿ ಒಟ್ಟು 13 ಹುಲಿಗಳಿದ್ದು, ರಾಣಿಯ 5 ಮುದ್ದಾದ ಮರಿಗಳ ಆಗಮನದಿಂದ ಹುಲಿಗಳ ಸಂಖ್ಯೆ‌ 18ಕ್ಕೆ ಏರಿದೆ.

ರಾಣಿ ಹುಲಿ 4 ಗಂಡು ಹಾಗೂ 1 ಹೆಣ್ಣು ಮರಿಗೆ ಜನ್ಮ ನೀಡಿದ್ದು, ಪಿಲುಕುಳದಲ್ಲಿ ಸಂಭ್ರಮವೋ ಸಂಭ್ರಮ… ಇನ್ನು ಪಿಲಿಕುಳ ಜೈವಿಕ ಉದ್ಯಾನವನ ಹುಲಿ, ಸಿಂಹ, ಕಾಡುಕೋಣ, ನೀರಾನೆ ಸೇರಿದಂತೆ ವಿವಿಧ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳ ನೆಲೆವೀಡಾಗಿದೆ. ಪ್ರಾಣಿ ವಿನಿಮಯ ಕಾಯ್ದೆಯಡಿಯಲ್ಲಿ ಹಲವು ಪ್ರಾಣಿಗಳು ಪಿಲಿಕುಳಕ್ಕೆ ಬಂದು, ಹಲವು ಪ್ರಾಣಿಗಳು ಇಲ್ಲಿಂದ ರಾಷ್ಟ್ರದ ವಿವಿಧ ಝೂಗಳಿಗೆ ವಿನಿಮಯವಾಗಿದೆ.

ಪಿಲಿಕುಳದ ಝೂನಲ್ಲಿ ಹುಲಿಗಳು ಅತ್ಯಾಕರ್ಷಕ ವಾಗಿದ್ದು, ಬೆಂಗಾಲ್ ಟೈಗರ್ಸ್ ಇಲ್ಲಿನ ಆಕರ್ಷಣೆಯಾಗಿದೆ. ಇದೀಗ 5 ಹುಲಿಮರಿಗಳು ಪಿಲಿಕುಳದಲ್ಲಿ ಜನ್ಮತಾಳಿದ್ದು,ಉದ್ಯಾನವನದಲ್ಲಿ ಸಂಭ್ರಮ ಇಮ್ಮಡಿಯಾಗಿದೆ.

pilikula ಹುಲಿಮರಿಗಳು ತಾಯಿಯ ಬೆಚ್ಚಗಿನ ಆರೈಕೆಯಲ್ಲಿದ್ದು, ಕೆಲ ತಿಂಗಳುಗಳ ಬಳಿಕ ಸಾರ್ವಜನಿಕ ದರ್ಶನಕ್ಕೆ ಲಭ್ಯವಾಗಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English