- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲಕ್ಷದೀಪೋತ್ಸವದಲ್ಲಿ ಲಲಿತಮ್ಮನ ಅಂಗಡಿಯಲ್ಲಿ ಗಮನಸೆಳೆದ ನೆಲ್ಲಿಕಾಯಿ, ಮಾವಿನ ಮಿಡಿ, ಪೇರಳೆ

lalitamma [1]ಧರ್ಮಸ್ಥಳ  : ಲಕ್ಷದೀಪೋತ್ಸವ ಸಂದರ್ಭದಲ್ಲಿಅರುವತ್ತು ವರ್ಷದ ಮಹಿಳೆಯೊಬ್ಬರು ಸುಲಲಿತ ವ್ಯವಹಾರ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಜೀವನೋಪಾಯಕ್ಕಾಗಿ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂದರ್ಭ ವ್ಯಾಪಾರದ ಪುಟ್ಟ ಅಂಗಡಿಯನ್ನು ತೆರೆದವರು ಲಲಿತಮ್ಮ. ನೆಲ್ಲಿಕಾಯಿ, ಮಾವಿನ ಮಿಡಿ, ಪೇರಳೆ ಮೊದಲಾದ ಸತ್ವಪೂರ್ಣ ಗ್ರಾಮೀಣ ಪೌಷ್ಠಿಕ ಆಹಾರಗಳು ಇವರಲ್ಲಿ ಮಿತದರದಲ್ಲಿ ಸಿಗುತ್ತವೆ. 25  ವರ್ಷಗಳ ಹಿಂದೆ ಇವರ ಗಂಡ ನಿಧನರಾದ ಬಳಿಕ ಕಾಯಕವೇ ಕೈಲಾಸ ಎಂದು ನಂಬಿ ಪುಟ್ಟಅಂಗಡಿ ಪ್ರಾರಂಭಿಸಿದ ಇವರು ಪ್ರಾಮಾಣಿಕ ವ್ಯವಹಾರ ನಡೆಸುತ್ತಾರೆ. ಅತಿಯಾದ ಲಾಭಗಳಿಸುವ ಹಂಬಲ ಈಕೆಗಿಲ್ಲ.

ಎಲ್ಲಾಖರ್ಚು, ವೆಚ್ಚ ಕಳೆದು ದಿನಕ್ಕೆ ಇನ್ನೂರುರೂ.ನಿವ್ವಳ ಲಾಭಗಳಿಸುತ್ತೇನೆ. ಇದರಲ್ಲೆ ತನಗೆ ತೃಪ್ತಿ, ಸಂತೋಷವಿದೆ ಎಂದು ಲಲಿತಮ್ಮ ಮಂದಹಾಸ ಬೀರುತ್ತಾರೆ.

ವ್ಯವಹಾರದಲ್ಲಿಎದುರಾಗುವ ಸಣ್ಣಪುಟ್ಟ ಸವಾಲುಗಳನ್ನು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಲಲಿತಮ್ಮ.

ಸಾಮಾನ್ಯವಾಗಿ 60 ರ ನಂತರ ಅರಳು ಮರಳು ಎನ್ನುತ್ತಾರೆ. ಆದರೆ ಲಲಿತಮ್ಮನ ಜೀವನದಲ್ಲಿ 60 ರ ಹರೆಯ ಮರಳಿ ಅರಳುವ ಪ್ರಾಯ. ಏಕೆಂದರೆ ಅವರಲ್ಲಿ ಜೀವನ ಪ್ರೀತಿ ಹಾಗೂ ಲವಲವಿಕೆ ನಿತ್ಯ ನೂತನವಾಗಿದೆ.

lalitamma [2]