ಉಜಿರೆ : ಇಂಗ್ಲಿಷ್ ವ್ಯಾಮೋಹದಿಂದಕ ನ್ನಡವನ್ನುಕಡೆಗಣಿಸಬಾರದು. ನಮ್ಮಕನ್ನಡ ನಾಡು, ನುಡಿ, ಸಂಸ್ಕೃತಿಯಲ್ಲಿ ನಮ್ಮತನವನ್ನು ಉಳಿಸಿಕೊಳ್ಳಬೇಕು.ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೂರು ವರ್ಷಗಳೊಳಗೆ ಕನ್ನಡವನ್ನುಆದರ್ಶ ಹಾಗೂ ಉತೃಷ್ಟ ಭಾಷೆಯಾಗಿ ಅಭಿವೃದ್ಧಿ ಪಡೆಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಡಾ.ಅಶ್ವತ್ಥನಾರಾಯಣ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿಅಮೃತವರ್ಷಿಣಿ ಸಭಾ ಭವನದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 87ನೆ ಅಧಿವೇಶನವನ್ನುಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಭಾಷೆಯನ್ನು ಬಳಸಿದಷ್ಟು ಅದು ಹೆಚ್ಚು ಬೆಳೆಯುತ್ತದೆ.ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು ಹಾಗೂ ಬೆಳೆಸಬೇಕು ಎಂದುಅವರು ಸಲಹೆ ನೀಡಿದರು.
ಮುಂದಿನ ವರ್ಷಅಂದರೆ 2020 ರಲ್ಲಿ ಶಿವಮೊಗ್ಗಾದಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದುಎಂದುಅವರು ಪ್ರಕಟಿಸಿದರು.
ನಾಡಿ ಪವಿತ್ರಕ್ಷೇತ್ರ ಧರ್ಮಸ್ಥಳವು ಲಕ್ಷಾಂತರ ಮಂದಿ ಭಕ್ತರ ನಂಬಿಕೆ, ಭಕ್ತಿ ಮತ್ತು ವಿಶ್ವಾಸದ ಕೇಂದ್ರವಾಗಿದ್ದು ಎಲ್ಲಾ ಸೇವಾ ಕಾರ್ಯಗಳಲ್ಲಿ ಉತೃಷ್ಟ್ರತೆ ಸಾಧಿಸಿ ವಿಶ್ವ ಮಾನ್ಯತೆ ಪಡೆದಿದೆಎಂದು ಹೇಳಿ ಅಭಿನಂದಿಸಿದರು.
ಕೃಷಿ ಮತ್ತು ಗ್ರಾಮಾಭಿವೃದ್ಧಿ ಯೋಜನೆ, ಐತಿಹಾಸಿಕ ಸ್ಮಾರಕಗಳು ಮತ್ತು ದೇಗುಲಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ, ಸ್ವ-ಉದ್ಯೋಗತರಬೇತಿ ಕೇಂದ್ರಗಳು ಮೊದಲಾದ ಸೇವಾ ಕಾರ್ಯಗಳು ಸರ್ಕಾರಕ್ಕೂ, ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಹಾಗೂ ಪ್ರೇರಕವಾಗಿವೆ. ಧರ್ಮಸ್ಥಳದ ಆಡಳಿತ ವ್ಯವಸ್ಥೆ ಮತ್ತು ಸುಧಾರಣೆಗಳು ವಿಶ್ವಮಾನ್ಯವಾಗಿವೆ. ಹಾಗಾಗಿ ಯಾವುದೇದೇವಸ್ಥಾನದ ಆಡಳಿತದಲ್ಲಿ ಸಮಸ್ಯೆಉಂಟಾದಾಗ ನ್ಯಾಯಾಲಯಕೂಡಾ ಧರ್ಮಸ್ಥಳಕ್ಕೆ ಹೋಗಿ ಅಧ್ಯಯನ ಮಾಡಿ ಮಾರ್ಗದರ್ಶನ ಪಡೆಯಿರಿಎಂದು ಸಲಹೆ ನೀಡುತ್ತಾರೆಎಂದು ಹೇಳಿದರು
ಅಧ್ಯಕ್ಷತೆ ವಹಿಸಿದ ಖ್ಯಾತಜನಪದ ವಿದ್ವಾಂಸಡಾ.ಬಿ.ಎ. ವಿವೇಕ್‌ರೈ ಮಾತನಾಡಿ,ಸಾಹಿತಿ ಮತ್ತು ಸಾಹಿತ್ಯಎಂದೂಔಟ್‌ಡೇಟೆಡ್ ಆಗುವುದಿಲ್ಲ. ಎಲ್ಲಾ ಕಾಲಕ್ಕೂ ಸಾಹಿತಿಗಳು ಮತ್ತು ಸಾಹಿತ್ಯ ಪ್ರಸ್ತುತವಾಗುತ್ತಾರೆ.ಕಾರಂತ, ಬೇಂದ್ರೆ, ಕುವೆಂಪು, ಗಾಂಧೀಜಿ, ರನ್ನ, ಪೊನ್ನ, ಬಸವಣ್ಣ ಮೊದಲಾದ ಸಾಹಿತಿಗಳು ಹಾಗೂ ಅವರ ಸಾಹಿತ್ಯ ಇಂದಿಗೂ ಪ್ರಸ್ತುತ ಹಾಗೂ ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದು ಹೇಳಿದರು.
ಸಾಹಿತ್ಯ ಸಮಾಜದ ಪ್ರತಿಬಿಂವಾಗಿದ್ದು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕು.ಸಾಹಿತ್ಯದಲ್ಲಿ ಸರಳತೆ ಮತ್ತು ಸಹಜತೆ ಪ್ರತಿಬಿಂಬಿಸಬೇಕು. ನಮ್ಮ ಪುರಾಣಗಳು ಹಾಗೂ ಸಾಹಿತ್ಯಗಳು ಸದಾ ನಮ್ಮೊಂದಿಗೆ ಸಂವಾದಮಾಡುತ್ತವೆ. ಧರ್ಮಸ್ಥಳದ ಸಾಹಿತ್ಯ ಸಮ್ಮೇಳನ ತನ್ನ ಮೇಲೆ ಗಾಢ ಪ್ರಭಾವ ಬೀರಿದೆಎಂದು ಹೇಳಿದ ಅವರುತಾನು 1957 ರಲ್ಲಿತಾಯಿ ಮತ್ತುತಂದೆಜೊತೆಗೆ ಬಂದು ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುವುದನ್ನು ಧನ್ಯತೆಯಿಂದ ಸ್ಮರಿಸಿದರು.
ಸಾಹಿತ್ಯದಿಂದ ಭಾವ ಸಿಂಚನವಾಗಿ ಮಾನಸಿಕ, ದೈಹಿಕ ಹಾಗೂ ಸಾಮಾಜಿಕಆರೋಗ್ಯ ಸುಧಾರಣೆಯಾಗುತ್ತದೆಎಂದುಅವರುಅಭಿಪ್ರಾಯಪಟ್ಟರು.
ಕಲುಷಿತಆಹಾರ ಸೇವನೆ ಮತ್ತು ಪರಿಸರ ಮಾಲಿನ್ಯದಿಂದಾಗಿಇಂದು ಅನೇಕ ರೋಗಗಳು ನಮ್ಮನ್ನು ಬಾಧಿಸುತ್ತವೆ. ಪ್ರಾಕೃತಿಕಆಹಾರಆರೋಗ್ಯ ಹಾಗೂ ಕೃಷಿಯ ಮಹತ್ವ ಸಾದರಪಡಿಸುವ ಸಾಹಿತ್ಯರಚನೆಯಾಗಬೇಕುಎಂದುಅವರುಆಶಯ ವ್ಯಕ್ತಪಡಿಸಿದರು.
ತಂತ್ರಜ್ಞಾನದ ಗೀಳು ಸಲ್ಲದುಎಂದು ಹೇಳಿದ ಡಾ. ವಿವೇಕ್‌ರೈಕನ್ನಡದ ಕೃತಿಗಳನ್ನು ಡಿಜಿಟಲೈಸ್ ಮಾಡಬೇಕುಎಂದುಉಪಮುಖ್ಯಮಂತ್ರಿ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದರು.ಸಾಹಿತ್ಯ ಕೇವಲ ಕಥೆ, ಕವನ ಅಥವಾ ನಾಟಕ ಮಾತ್ರಅಲ್ಲ. ಅದು ನಮ್ಮ ಬದುಕನ್ನು ಉದ್ದೀಪನಗೊಳಿಸಬೇಕು. ಇಂದಿನ ಯುವಜನತೆಯ ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುವ, ಆಪ್ತ ಸಲಹೆ ಹಾಗೂ ಸೂಚನೆ ಕೊಡುವ ಸಾಹಿತ್ಯ ಕೃತಿಗಳ ರಚನೆಯಾಗಬೇಕುಎಂದುಅವರು ಸಲಹೆ ನೀಡಿದರು.
ಸಾಹಿತ್ಯವು ಮೌಲ್ಯಗಳನ್ನು ಪ್ರತಿಪಾದಿಸುವದೃಢ ನಿಲುವನ್ನು ಹೊಂದಿರಬೇಕು : ಇಂದಿನ ಸಾಹಿತ್ಯಕ್ಕೆ ನೈತಿಕತೆಯ ಸ್ಪರ್ಶ ಬೇಕಾಗಿದೆ.ನಮ್ಮ ನಡೆ-ನುಡಿಯಲ್ಲಿ ನೈತಿಕತೆಯೇಧರ್ಮವಾಗಬೇಕು.ಸಾಹಿತ್ಯವು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ದೃಢ ನಿಲುವನ್ನು ಹೊಂದಿರಬೇಕುಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದಅವರು, ಧರ್ಮ, ಆಡಳಿತ, ಶಿಕ್ಷಣ, ರಾಜಕಾರಣ ಹಾಗೂ ಸಾರ್ವಜನಿಕ ಸೇವಾ ವಲಯಗಳಲ್ಲಿ ಆಳವಾದ ನೈತಿಕತೆಯನ್ನು ರೂಢಿಸಿಕೊಳ್ಳಬೇಕು ಎಂದುಅವರು ಸಲಹೆ ನೀಡಿದರು.
ನೈತಿಕತೆಇಲ್ಲದ ಬದುಕುಆತ್ಮವಿಲ್ಲದದೇಹದಂತೆಆಗುತ್ತದೆ.ನೈತಿಕ ನೆಲೆಗಟ್ಟಿನ ಮೇಲೆ ನಮ್ಮಜೀವನ ಮುನ್ನಡೆಯಬೇಕು.ಬರಹ ಮತ್ತು ಬರಹಗಾರರು ನೈತಿಕ ಶುದ್ಧತೆಯನ್ನು ಹೊಂದಿದಾಗ, ಸಮಾಜವನ್ನು ಸಾಂಸ್ಕೃತಿಕವಾಗಿ ವಿಕಾಸಗೊಳಿಸಲು ಸಾಧ್ಯವಾಗುತ್ತದೆ.ಮಾಧ್ಯಮಗಳು ಮತ್ತು ಪ್ರಕಾಶನ ಸಂಸ್ಥೆಗಳ ಮೂಲಕ ಇಂತಹ ಪ್ರಯತ್ನಗಳು ಇಂದಿನ ತಲೆಮಾರಿನ ಸಾಹಿತ್ಯರಚನೆಯಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಸಾಹಿತ್ಯ ಪ್ರಕಾಶನ ಹೆಚ್ಚಾಗುತ್ತಿದೆ.ಓದುಗರೂ ಹೆಚ್ಚಾಗುತ್ತಿದ್ದಾರೆ.ಸಮಕಾಲೀನ ಕಥಾ ನಿರೂಪಣೆಯೊಂದಿಗೆ ಸಾಹಿತಿಗಳು ಓದುಗರನ್ನುಆಕರ್ಷಿಸುವ ಕ್ರಮಗಳ ಮೂಲಕ ಸಾಹಿತ್ಯದ ಪ್ರಭಾವವನ್ನುಚಾಲ್ತಿಯಲ್ಲಿರಿಸಬೇಕಾಗುತ್ತದೆಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಧರ್ಮ, ಸಾಹಿತ್ಯಮತ್ತು ವಿಜ್ಞಾನದ ನಡುವೆ ಹಲವು ಸಾಮ್ಯತೆಗಳನ್ನು ಗುರುತಿಸಬಹುದು.ಎಲ್ಲಾ ವಿಜ್ಞಾನಿಗಳೂ ಧರ್ಮವನ್ನುಗೌರವಿಸುತ್ತಾರೆ.ಸಂಪ್ರದಾಯಗಳಿಗೆ ಮನ್ನಣೆ ನೀಡುತ್ತಾರೆ.ಧರ್ಮವನ್ನು ಹೊರಗಿಟ್ಟುಅವರು ಸಂಶೋಧನೆಗೆಆದ್ಯತೆ ನೀಡುವುದಿಲ್ಲ. ಸಾಹಿತ್ಯ ಸಮ್ಮೇಳಗಳು ಧರ್ಮ, ವಿಜ್ಞಾನ ಮತ್ತು ಸಾಹಿತ್ಯದ ಸದಾಶಯಗಳ ಸ್ವರೂಪತಿಳಿದುಕೊಳ್ಳಲು ಪೂರಕವಾಗುತ್ತವೆಎಂದು ಹೆಗ್ಗಡೆಯವರುಅಭಿಪ್ರಾಪಟ್ಟರು.
ಕುಮಟಾದ ಶ್ರೀಧರ ಬಳಗಾರ ಮಾತನಾಡಿ, ವಿಲೀನ ಮತ್ತು ವಿಸ್ತರಣೆ ಮೂಲಕ ನಾವು ಹೆಚ್ಚು ಬೆಳೆಯಲು ಸಾಧ್ಯವಾಗುತ್ತದೆ.ಭೀತಿಯ ಬದಲು ಪ್ರೀತಿ-ವಿಶ್ವಾಸ ಬೆಳೆಸಿಕೊಳ್ಳಬೇಕು.ನಾವು ಜಾತಿ-ಮತ, ಧರ್ಮಕ್ಕೆ ಅಂಟಿಕೊಳ್ಳದೆ ವಿಶ್ವಮಾನವರಾಗಬೇಕುಎಂದುಅವರು ಹೇಳಿದರು.
ಉಡುಪಿಯ ಡಾ.ವೀಣಾ ಬನ್ನಂಜೆ ಮಾತನಾಡಿ, ಪ್ರಪಂಚದಲ್ಲಿಅತ್ಯಂತ ಒಳ್ಳೆಯ ಕೆಲಸ ದನಕಾಯುವುದು.ಶಾಲೆಗಿಂತ ಗೋ – ಶಾಲೆ ಒಳ್ಳೆದು.ದನದಜೊತೆಇರುವಾಗ ನಾವು ಗಿಡ-ಮರ, ಪ್ರಾಣಿ-ಪಕ್ಷಿ ಹಾಗೂ ಪರಿಸರದ ಸಂಪರ್ಕದಲ್ಲಿರುತ್ತೇವೆ. ಆಗ ನಮಗೆ ಅಂತರಂಗ ಪರಿವರ್ತನೆಯಾಗುತ್ತದೆ. ಇಂದಿನ ಶಿಕ್ಷಣ ಪದ್ಧತಿಗೆ ಧಿಕ್ಕಾರ ಹೇಳಿದ ಅವರು, ಮಕ್ಕಳಿಗೆ ನಾಲ್ಕು ಭಾಷೆಗಳನ್ನು ಕಲಿಸಿ, ಕೆಲವು ಮೂಲಭೂತ ಅಂಶಗಳನ್ನು ತಿಳಿಸಬೇಕು.ನಾವು ಶಾಲೆಯಲ್ಲಿಓದಿದ್ದನ್ನೆಲ್ಲ ಮರೆಯಬೇಕುಎಂದುಅವರು ಸಲಹೆ ನೀಡಿದರು.
ಅವಿದ್ಯೆ ಮೃತವಾದರೆ, ವಿದ್ಯೆಅಮೃತವಾಗುತ್ತದೆ. ಸತ್ಯವನ್ನು ಮರೆಯುವುದು ನಮ್ಮ ಸ್ವಭಾವ, ಪ್ರಕೃತಿಯಜೊತೆ ನಮ್ಮ ಸಂಪರ್ಕವಾಗರೆಅದು ನಿಜವಾದ ವಿದ್ಯೆಆಗುತ್ತದೆ. ಓದಿದವರಿಗೆ ಮಾತ್ರ ಸತ್ಯದರ್ಶನವಾಗುತ್ತದೆ. ವಿದ್ಯೆಕಲಿತವರುಇಂದು ಸಂಕುಚಿತ ಮನೋಭಾವ ಹೊಂದಿರುತ್ತಾರೆ. ಸಾಹಿತಿಗಳು iತ್ತು ವಿಶ್ವವಿದ್ಯಾಲಯಗಳು ಸಮಾಜವನ್ನುಒಡೆಯುವ ಕೆಲಸ ಮಾಡುತ್ತಾರೆಎಂದುಅವರು ಆರೋಪಿಸಿದರು.
ರಂಗಭೂಮಿ ಮತು ಹಾಸ್ಯದ ಬಗ್ಗೆ ಬೆಂಗಳೂರಿನ ಖ್ಯಾತ ವಾಗ್ಮಿರಿಚರ್ಡ್ ಲೂಯಿಸ್ ಮಾತನಾಡಿ, ನಾವು ಎರಡೂ ಕಣ್ಣುಗಳನ್ನು ಮುಚ್ಚಿದರೆ ನಮಗೆ ಯಾವದೇವರೂಕಾಣುವುದಿಲ್ಲ. ಕಲ್ಪನೆ ಮಾತ್ರಇರುತ್ತದೆ.
ಧರ್ಮಸ್ಥಳದಲ್ಲಿ ಅನ್ನದಾನ ವಿಶ್ವವಿಖ್ಯಾತವಾಗಿದೆ.ಅನ್ನಪೂರ್ಣಛತ್ರದ ಸಾರು, ಸಾರೇಜಹಾಂಸೆ ಅಚ್ಚಾ ಎಂದುಅವರು ಶ್ಲಾಘಿಸಿದರು.
ಧರ್ಮಸ್ಥಳದಿಂದ ಎಲ್ಲಾ ಊರುಗಳಿಗೆ ಬಸ್ ಸಂಪರ್ಕವಿದೆ ಹಾಗೂ ಎಲ್ಲಾ ಊರುಗಳಿಂದ ಧರ್ಮಸ್ಥಳಕ್ಕೆ ಬಸ್ ಸಂಪರ್ಕವಿದೆ.ಆದುದರಿಂದ ಧರ್ಮಸ್ಥಳಕ್ಕೆ ಬಂದವರೆಲ್ಲ ಸುಖ-ಶಾಂತಿ-ನೆಮ್ಮದಿ ಪಡೆಯುತ್ತಾರೆ.ಎಲ್ಲಾ ಧರ್ಮಗಳ ಗುರಿಕೂಡಾಉಲ್ಲಾಸ, ಆನಂದ ಮತ್ತು ಶಾಂತಿ ಹೊಂದುವುದೇಆಗಿದೆ.ಧರ್ಮಸ್ಥಳ ಮಾನಸಿಕ ಶಾಂತಿ ನೀಡುವ ವಿಶ್ವ ವಿದ್ಯಾಲಯವಾಗಿದೆಎಂದುಅವರುಅಭಿಪ್ರಾಯಪಟ್ಟರು.
ಉಜಿರೆರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ವಿನಯ್‌ಕುಮಾರ್‌ಧನ್ಯವಾದವಿತ್ತರು.
ಉಜಿರೆಯಎಸ್.ಡಿ.ಎಂ. ಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥಡಾ. ಬಿ.ಪಿ. ಸಂಪತ್‌ಕುಮಾರ್‌ಕಾರ್ಯಕ್ರಮ ನಿರ್ವಹಿಸಿದರು.
ರಾತ್ರಿ ನಡೆದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವವನ್ನು (ಗೌರಿಮಾರುಕಟ್ಟೆಉತ್ಸವ) ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ವೀಕ್ಷಿಸಿ ಪುಣ್ಯಭಾಗಿಗಳಾದರು. ಧನ್ಯತೆಯನ್ನು ಹೊಂದಿದರು.
ಭಕ್ತಾದಿಗಳಿಂದ ವಿಶಿಷ್ಟ ಸೇವೆ : ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಮಂಗಳವಾರ ರಾತ್ರಿ 382 ತಂಡಗಳ 1300 ಕಲಾವಿದರು ವಾಲಗ, ಡೋಲಕ್, ನಾಗಸ್ವರ ವಾದನ ಸೇವೆ ಮಾಡಿದರೆ, 76 ತಂಡಗಳ 326 ಮಂದಿ ಬ್ಯಾಂಡ್‌ಸೆಟ್ ಸೇವೆ, 215 ಮಂದಿ ಶಂಖ ಸೇವೆ, 500 ಮಂದಿ ಡೊಳ್ಳು ಕುಣಿತ, 30 ತಂಡಗಳ 140ಕಲಾವಿದರುಕರಡಿ ಮೇಳ, ಚಿಕ್ಕಮೇಳ ಸೇವೆ ಮತ್ತು 57 ತಂಡಗಳ 320 ಕಲಾವಿದರು ವೀರಗಾಸೆ ಸೇವೆ ನೀಡಿದರು.
ಆಹ್ವಾನವಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆಇಲ್ಲದೆಎಲ್ಲಾಕಲಾವಿದರು ಶ್ರೀ ಸ್ವಾಮಿಗೆರಾತ್ರಿಇಡೀ ಕಲಾಸೇವೆ ಅರ್ಪಿಸಿದ್ದಾರೆ ಎಂದು ಹೆಗ್ಗಡೆಯವರು ಮಾಹಿತಿ ನೀಡಿದರು.
Click this button or press Ctrl+G to toggle between Kannada and English
November 27th, 2019 at 16:32:03
ಧರ್ಮಸ್ಥಳ ಎನ್ನುವುದು ಭಾರತದ ಒಂದು ಭಕ್ತಿಯ ನಗರ