- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅನರ್ಹರ ಆರೋಗ್ಯ ಸರಿಯಿಲ್ಲ, ವೈದ್ಯರ ಬಳಿ ತೋರಿಸೋದು ಒಳ್ಳೆದು : ಅನರ್ಹರಿಗೆ ಟಾಂಗ್ ಕೊಟ್ಟ ರಮೇಶ್ ಕುಮಾರ್

Ramesh-Kumar [1]

ಬೆಳಗಾವಿ : ಅನರ್ಹರ ಆರೋಗ್ಯ ಸರಿಯಿಲ್ಲ, ಅವರನ್ನು ತಲೆಗೆ ಸಂಬಂಧಿಸಿದ ವೈದ್ಯರ ಬಳಿ ತೋರಿಸೋದು ಒಳ್ಳೆದು ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹರಿಗೆ ಟಾಂಗ್ ಕೊಟ್ಟಿದ್ದಾರೆ.

ಅಥಣಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹಗೊಂಡ ನಂತರವೂ ಶಾಸಕರು ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟಿನಲ್ಲೂ ಅನರ್ಹಗೊಂಡ ನಂತರ ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆಯ ತಲೆ ಸಂಬಂಧಿಸಿದ ವೈದ್ಯರಿಗೆ ತೋರಿಸಿ ಎಂದು ಕಾಲೆಳೆದಿದ್ದಾರೆ.

ನಾನು ಯಾರನ್ನೂ ವ್ಯಕ್ತಿಗತವಾಗಿ ಅನರ್ಹಗೊಳಿಸಿಲ್ಲ. ಸಂವಿಧಾನಾತ್ಮಕವಾಗಿ ಅವರನ್ನು ಅನರ್ಹರು ಅಂತ ಘೋಷಣೆ ಮಾಡಿದ್ದೆ. ಸುಪ್ರೀಂ ಕೋರ್ಟ್ ಸಹ ನನ್ನ ಆದೇಶ ಎತ್ತಿ ಹಿಡಿದಿದೆ. ನಾನು ಕೊಟ್ಟ ತೀರ್ಪು ಸರಿಯೇ ಎಂದು ಪರಿಶೀಲಿಸಿದ್ದೇನೆ. ಜನರು ಕೂಡ ನೀವು ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ. ಆದರೆ ಕೋರ್ಟ್ ಅನರ್ಹರಿಗೆ ಉಪಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಕೋರ್ಟಿನ ತೀರ್ಪನ್ನು ನಾನು ಗೌರವಿಸುತ್ತೇನೆ. ಉಪಚುನಾವಣೆಯಲ್ಲಿ ಜನರು ಅನರ್ಹರಿಗೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.

ನಾನು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಪಕ್ಷದಲ್ಲಿ ನೀನು ಕಸ ಗುಡಿಸಬೇಕು ಎಂದರೆ ನಾನು ಗುಡಿಸಬೇಕು, ಅದು ಪಕ್ಷದ ಶಿಸ್ತು. ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಯಾರೂ ಹೆಚ್ಚು ಉತ್ಸಾಹ ತೋರಲಿಲ್ಲ. ಪಕ್ಷದ ನಾಯಕ ವೇಣುಗೋಪಾಲ್ ಅವರು ನೀವು ಸ್ಪೀಕರ್ ಆಗಬೇಕು ಎಂದು ಹೇಳಿದಾಗ, ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಜನರ ಮನಸ್ಸಲ್ಲಿ ಗೌರವಾನ್ವಿತ ಸ್ಥಾನ ಸಿಕ್ಕಾಗ ಅದಕ್ಕೆ ಮಿಗಿಲಾದದ್ದು ಯಾವ ಸ್ಥಾನವೂ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.