ಮಂಗಳೂರು : ಶಾಲೆ ಒಂದು ಶೈಕ್ಷಣಿಕ ಪರಿವಾರ. ಈ ಪರಿವಾರದಲ್ಲಿ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಪೋಷಕರು ಪ್ರತಿಯೊಂದು ವಿದ್ಯಾರ್ಥಿಯ ಮೇಲೆ ಸಮ ಪ್ರಮಾಣದ ಜವಾಬ್ದಾರಿ, ಹಕ್ಕನ್ನು ಹೊಂದಿರುತ್ತಾರೆ. ಶಿಕ್ಷಕರು ಹಾಗೂ ಪೋಷಕರ ನಡುವಿನ ಒಳ್ಳೆಯ ಬಾಂಧವ್ಯ, ನಂಬಿಕೆ, ಮಾತುಗಾರಿಕೆ ವಿದ್ಯಾರ್ಥಿಗಳ ಬದುಕಿನ ಔನತ್ಯಕ್ಕೆ ಸಹಕಾರಿ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಹಕಾರವನ್ನು ನೀಡುವಲ್ಲಿ ಗಮನ ಹರಿಸಬೇಕು. ಮಾತ್ರವಲ್ಲದೆ ಶಿಕ್ಷಕರು ಶಾಲೆಯಲ್ಲಿ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿನಲ್ಲಿಔನತ್ಯಕ್ಕೆ ಪ್ರೇರಕ ಶಕ್ತಿಯಾಗುವಲ್ಲಿ ಪ್ರಯತ್ನಿಸಬೇಕು ಎಂದು ಮುಖ್ಯ ಅತಿಥಿಯಾದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.
ಈ ವಿದ್ಯಾ ಸಂಸ್ಥೆಯು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದೆ. ಈ ಪ್ರೋತ್ಸಾಹವು ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಈ ಸಂಸ್ಥೆ ಶಿಕ್ಷಕರಿಗೆ ತಮ್ಮ ಶಾಲಾ ದಿನಗಳನ್ನು ಮರುಕಳಿಸಲು, ಮಕ್ಕಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶಕೊಡುತ್ತಿದೆಎಂದರು.
ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ವಚ್ಛತೆಯನ್ನು ಅಳವಡಿಸಬೇಕು.ಅದು ಪರಿಸರ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆಯುಆಗಿರಬೇಕು. ಈ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳ ಬದುಕಿಗೆಉತ್ತಮ ವೇದಿಕೆಯಾಗಿದೆ. ಇಲ್ಲಿ ಸಿಗುವ ಎಲ್ಲಾ ಅವಕಾಶಗಳ ವಿದ್ಯಾರ್ಥಿಗಳು ಬಳಸುವುದರ ಮೂಲಕ ತಮ್ಮ ಭವಿಷ್ಯನ್ನು ರೂಪಿಸಿಕೊಳ್ಳಬೇಕು ಮತ್ತು ಪೋಷಕರುಇದರ ಸಂಪೂರ್ಣ ಲಾಭವನ್ನು ಪಡೆಯಬೇಕುಎಂದುಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್ ಹೇಳಿದರು.
ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಮಾಜ ಹಾಗೂ ದೇಶಕ್ಕೆಕೊಡುಗೆಯನ್ನು ನೀಡುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ನಾಯಕರು. ಅವರು ವಿದ್ಯಾರ್ಥಿಗಳ ತಪ್ಪನ್ನುತಿದ್ದಿ, ಪ್ರೋತ್ಸಾಹಿಸಿ ಸರಿದಾರಿಯತ್ತಕೊಂಡೊಯ್ಯುವರು.ಇಂತಹ ನಾಯಕರನ್ನುಗೌರವಿಸುವುದುವಿದ್ಯಾರ್ಥಿಗಳ ಆದ್ಯಕರ್ತವ್ಯವೂ ಹೌದು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿಛಲ, ಆತ್ಮವಿಶ್ವಾಸ ಹಾಗೂ ಸಮಯ ಪರಿಪಾಲನೆಗೆ ಮಹತ್ವವನ್ನು ನೀಡಬೇಕು. ಗೆಲುವನ್ನು ಸ್ವಗತವೆಂಬಂತೆ ಪರಿಗಣಿಸಿ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿಏನನ್ನಾದರು ಸಾಧಿಸುವಗುರಿಯನ್ನು ವಿದ್ಯಾರ್ಥಿದೆಸೆಯಿಂದಲೇ ಹೊಂದಿರಬೇಕು, ಇದರಿಂದ ಬದುಕುಉತ್ತಮ ಹಾಗೂ ಸರಳ ಸುಂದರವಾಗುತ್ತದೆಎಂದುಕ್ರೆಡೈ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಿ.ಬಿ ಮೆಹ್ತ ಅವರು ಹೇಳಿದರು.
ಶಾಲೆಯ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರಜೊತೆಗೆಜೀವನದಲ್ಲಿ ಸವಾಲುಗಳನ್ನು ಎದುರಿಸುವ ಮಾರ್ಗವನ್ನು ಕಲಿಸಬೇಕು.ಯಾವ ವಿದ್ಯಾರ್ಥಿತಾನುಕಲಿತ ಶಾಲೆ ಹಾಗೂ ಕಲಿಸಿದ ಗುರುಗಳನ್ನು ಗೌರವಿಸಿ ಜೀವನದುದ್ದಕ್ಕೂ ಸ್ಮರಿಸುತ್ತಾನೊಅವರ ಬದುಕುಉಜ್ವಲವಾಗುತ್ತದೆಎಂದು ಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಸದಸ್ಯ ವಿ.ಕೆ ತಾಳಿತ್ತಾಯ ಹೇಳಿದರು. ಮುಂದುವರೆದು ಹೆತ್ತವರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮತಮ್ಮಅವಕಾಶವನ್ನುಆರಿಸುವ ಸ್ವಾತಂತ್ರ್ಯವನ್ನು ನೀಡಬೇಕು,ಆಗಮಾತ್ರ ವಿದ್ಯಾರ್ಥಿಗಳ ಜೀವನ ಸಾಕಾರವಾಗುತ್ತದೆಎಂದರು.
ಕಾರ್ಯಕ್ರಮದಲ್ಲಿ ಭಾರತೀಯಜನತಾ ಪಕ್ಷದರಾಜ್ಯಾದ್ಯಕ್ಷರು ಶ್ರೀ ನಳೀನ್ ಕುಮಾರ್‌ಕಟೀಲ್, ಮಂಗಳೂರು ಶಾಸಕ ವೇದವ್ಯಾಸಕಾಮತ್ ಮಂಗಳೂರು ಉತ್ತರ ವಲಯದ ಶಾಸಕ, ಡಾ. ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿಉಪ ಮೇಯರ್ ಶಕೀಲಾ ಕಾವ, ಶಕ್ತಿನಗರ ವಾರ್ಡಿನಕಾರ್ಪೊರೇಟರ್‌ವನಿತಾ ಪ್ರಸಾದ್, ಕಾರ್ಪೊರೇಟರ್‌ಕಿಶೋರ್ ಉಪಸ್ಥಿತರಿದ್ದರು.
ಶಕ್ತಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಂಜೀತ್ ನಾಕ್ ವೇದಿಕೆಯಲ್ಲಿರುವವರನ್ನು ಸ್ವಾಗತಿಸಿದರು. ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ, ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿಜನಾರ್ದನಆಚಾರ್‌ಅವರು ವಂದಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮ ನೆರವೇರಿತು.
Click this button or press Ctrl+G to toggle between Kannada and English