ಸ್ತ್ರೀಯರ ಉಡುಪುಗಳು ಅವಳ ಸಾತ್ತ್ವಿಕತೆ ಮೇಲೆ ಪ್ರಭಾವ ಬೀರುತ್ತದೆ !

2:31 PM, Tuesday, December 10th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Nava-dehali

ನವದೆಹಲಿ : ಸ್ತ್ರೀಯರ ಉಡುಪುಗಳ ಬಗ್ಗೆ ಕಲಾತ್ಮಕ ರಚನೆ ಮಾಡುವ ಕಲಾವಿದರು (ಡ್ರೆಸ್ ಡಿಸೈನರ್ಸ್) ಮತ್ತು ಅವುಗಳ ನಿರ್ಮಿತಿಯನ್ನು ಮಾಡುವವರು (ಫ್ಯಾಶನ್ ಹೌಸಸ್) ಇವರಿಗೆ ಉಡುಪುಗಳ ಸಾತ್ತ್ವಿಕತೆಯನ್ನು ಹೆಚ್ಚಿಸುವ ಆಧ್ಯಾತ್ಮಿಕ ಘಟಕಗಳ ಅರಿವಿದ್ದರೆ ಮತ್ತು ಅದನ್ನು ಗಮನದಲ್ಲಿರಿ ಅದಕ್ಕನುಸಾರ ಉಡುಪುಗಳ ನಿರ್ಮಿತಿಯನ್ನು ಮಾಡಿದರೆ ಸ್ತ್ರೀಯರ ಉಡುಪುಗಳ ಮೇಲೆ ಒಂದು ಮಹತ್ವದ ಸಕಾರಾತ್ಮಕ ಪ್ರಭಾವ ಬೀಳುವುದು. ಇದರಿಂದ ಜಗತ್ತಿನಾದ್ಯಂತ ಸ್ತ್ರೀಯರ ಆಧ್ಯಾತ್ಮಿಕ ಸೌಂದರ್ಯದ ಹಾಗೂ ಉಡುಪಿನಿಂದ ಅವರ ಸಾತ್ತ್ವಿಕತೆ ಮೇಲೆ ಪ್ರಭಾವ ಬೀರುವಲ್ಲಿಯೂ ಸಹಕಾರಿಯಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕು. ಕೃತಿಕಾ ಖತ್ರಿಯವರು ಪ್ರತಿಪಾದಿಸಿದರು.

ಅವರು 5 ಡಿಸೆಂಬರ್ 2019 ರಂದು ವೈದಿಕ ಬುದ್ಧಿವಂತಿಕೆ ಮತ್ತು ಮಹಿಳೆಯರ ಕುರಿತು ಅಲೆಗಳ 23 ನೇ ಭಾರತ ಸಮ್ಮೇಳನ: ಸಮಕಾಲೀನ ದೃಷ್ಟಿಕೋನ ‘ವೈದಿಕ ಬುದ್ಧಿವಂತಿಕೆ ಮತ್ತು ಮಹಿಳೆಯರ ಕುರಿತು ಅಲೆಗಳ 23 ನೇ ಭಾರತ ಸಮ್ಮೇಳನ: ಸಮಕಾಲೀನ ದೃಷ್ಟಿಕೋನ ಈ ರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತು ವೈದರ್ ಅಸೋಸಿಯೇಷನ್ ಫಾರ್ ವೈದಿಕ್ ಸ್ಟಡೀಸ್ (ವೇವ್ಸ್) ಮತ್ತು ನಾರಿ ಸಂವಾಡ್ ಪ್ರಕಾಲ್ಪ್, ಐಜಿಎನ್‌ಸಿಎ, ನವದೆಹಲಿ’ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕು. ಕೃತಿಕಾ ಖತ್ರಿಯವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಬರೆದ ‘ಸೀರೆ ಸ್ತ್ರೀಯರಿಗಾಗಿ ಪರಿಪೂರ್ಣ ಪೋಶಾಕು” ಎಂಬ ಶೋಧಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮೂಲಕ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಿಸಲಾದ 60 ನೇ ಶೋಧಪ್ರಬಂಧವು ಇದಾಗಿತ್ತು. ಈ ಹಿಂದೆ 14ರಾಷ್ಟ್ರೀಯ ಹಾಗೂ 45 ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ವಿವಿಧ ಶೋಧಪ್ರಬಂಧಗಳನ್ನು ಮಂಡಿಸಲಾಗಿತ್ತು. ಅದರಲ್ಲಿ ೪ ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಶೋಧಪ್ರಬಂಧಕ್ಕೆ ಸರ್ವೋಕೃಷ್ಟ ಶೋಧಪ್ರಬಂಧ ಪ್ರಶಸ್ತಿಯು ಲಭಿಸಿದೆ.

ಈ ಶೋಧಪ್ರಬಂಧದಲ್ಲಿ ಕು. ಕೃತಿಕಾ ಖತ್ರಿಯವರು ಈ ವಿಷಯದಲ್ಲಿ ಪ್ರಾಥಮಿಕ ಸಂಶೋಧನೆಯ ಅಂತರ್ಗತ ಮಾಡಿದ ಒಂದು ಪ್ರಯೋಗದ ಮಾಹಿತಿ ನೀಡಿದರು. ಈ ಪ್ರಯೋಗವನ್ನು ಡಾ. ಮನ್ನಮ ಮೂರ್ತಿ (ಮಾಜಿ ಅಣು ವಿಜ್ಞಾನಿ) ಇವರು ಅಭಿವೃದ್ಧಿಪಡಿಸಿದ ‘ಯುನಿವರ್ಸಲ್ ಆರಾ ಸ್ಕ್ಯಾನರ್’ ಎಂಬ ಊರ್ಜಾ ಮಾಪಕ ಯಂತ್ರದ ಸಹಾಯದಿಂದ ಮಾಡಲಾಯಿತು.

ಈ ಯಂತ್ರದ ಮಾಧ್ಯಮದಿಂದ ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಬಹುದು. ಈ ಪ್ರಯೋಗದ ಅಂತರ್ಗತ ಒಂದು ಆಧ್ಯಾತ್ಮಿಕ ಸಂಶೋಧನಾ ಕೇಂದ್ರದಲ್ಲಿ ನೆಲೆಸಿರುವ ಸ್ತ್ರೀಗೆ 7 ವಿವಿಧ ಉಡುಪುಗಳನ್ನು ತಲಾ 30 ನಿಮಿಷ ಧರಿಸುವಂತೆ ಹೇಳಲಾಯಿತು. ಪ್ರತಿಯೊಂದು ಉಡುಪನ್ನು ಧರಿಸುವ ಮೊದಲು ಮತ್ತು ಅದನ್ನು 30ನಿಮಿಷ ಧರಿಸಿದ ನಂತರ ‘ಯುನಿವರ್ಸಲ್ ಆರಾ ಸ್ಕ್ಯಾನರ್’ದಿಂದ ಊರ್ಜೆಯನ್ನು ಅಳೆಯಲಾಯಿತು. ಅವಳು ‘ವೈಟ್ ಇವನಿಂಗ್ ಗೌನ್’, ‘ಬ್ಲಾಕ್ ಟ್ಯೂಬ್ ಟಾಪ್ ಡ್ರೆಸ್’ ಮತ್ತು ‘ಕಪ್ಪು ಪಾಂಟ್ ಮತ್ತು ಟೀ-ಶರ್ಟ್’ ತೊಟ್ಟಾಗ ಅವಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಯಿತು. ಅದರ ತುಲನೆಯಲ್ಲಿ ಅವಳು ‘ಬಿಳಿ ಪ್ಯಾಂಟ್ ಮತ್ತು ಶರ್ಟ್’ ತೊಟ್ಟ ನಂತರ ಅವಳಲ್ಲಿನ ನಕಾರಾತ್ಮಕತೆ ಸ್ವಲ್ಪ ಕಡಿಮೆಯಾಯಿತು. ಅವಳು ಚೂಡಿದಾರ,6ಮೊಳ ಮತ್ತು 9 ಮೊಳದ ಸೀರೆ ತೊಟ್ಟ ನಂತರ ನಕಾರಾತ್ಮಕತೆ ಉತ್ತರೋತ್ತರ ಕಡಿಮೆಯಾಗುತ್ತಾ ಹೋಯಿತು. ತದ್ವಿರುದ್ಧ 6 ಮೊಳ ಮತ್ತು 9ಮೊಳದ ಸೀರೆ ತೊಟ್ಟ ನಂತರ ಅವಳಲ್ಲಿನ ಸಕಾರಾತ್ಮಕ ಊರ್ಜೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಯಿತು. ಈ ಹೆಚ್ಚಳವು ಕೇವಲ 30 ನಿಮಿಷ ಸೀರೆ ತೊಟ್ಟಾಗ ಸಾಧ್ಯವಾಯಿತು ಎಂಬುದು ವಿಶೇಷವಾಗಿತ್ತು.

Nava-dehali

ಖ್ಯಾತ ಮಾನಸೋಪಚಾರತಜ್ಞ ಶ್ರೀ. ಮಾಸ್ಲೋ ಇವರ ಮೂಲಭೂತ ಆವಶ್ಯಕತೆಗಳ ಪಿರಾಮಿಡ್‌ನ ದೃಷ್ಟಿಯಿಂದ ಉಡುಪುಗಳನ್ನು ನೋಡಿದರೆ, ಅತ್ಯಂತ ಮೂಲಭೂತ ಶಾರೀರಿಕ ಆವಶ್ಯಕತೆಯ ಸ್ತರದಲ್ಲಿ ವಸ್ತ್ರವು ನಮ್ಮನ್ನು ಛಳಿ-ಗಾಳಿಗಳಿಂದ ರಕ್ಷಿಸುತ್ತದೆ. ಸುರಕ್ಷಿತತೆಯ ಮಟ್ಟದಲ್ಲಿ ನಮ್ಮ ಅಗತ್ಯತೆಯನ್ನೂ ಪೂರೈಸುತ್ತದೆ; ಆದರೆ ಮಾನಸಿಕ ಮಟ್ಟದಲ್ಲಿ ಆತ್ಮಸಮ್ಮಾನ (ಸೆಲ್ಫ್ ಎಸ್ಟಿಮ್) ಇವುಗಳಂತಹ ಅಗತ್ಯತೆಯನ್ನು ಪೂರೈಸಲು ವಸ್ತ್ರಗಳಿಗೆ ಅತ್ಯಧಿಕ ಹಣ ಖರ್ಚು ಮಾಡಲಾಗುತ್ತದೆ. ಉಡುಪುಗಳ ಖರೀದಿ ಮತ್ತು ಅದನ್ನು ತೊಡುವುದು, ಇವು ‘ಸ್ವ’ನ ಆಚೆಗೆ ಹೋಗಿ (ಸೆಲ್ಫ್ ಟ್ರಾನ್ಸೆಂಡನ್ಸ್) ಮೂಲಭೂತ ಅಗತ್ಯತೆಯನ್ನು ಪೂರೈಸಲು ಮಾಧ್ಯಮವಾಗಿದೆ ಎಂಬ ಸ್ವರೂಪದಲ್ಲಿ ಎಂದೂ ನೋಡುವುದಿಲ್ಲ.

ಯಾವುದಾದದರೂ ದಿವ್ಯತ್ವಕ್ಕೆ ಸಾಗುವ ಪ್ರಯಾಣದಲ್ಲಿ ಉಡುಪುಗಳು ಯಾವ ರೀತಿ ಕೊಡುಗೆ ನೀಡಬಹುದು ? ಇದಕ್ಕಾಗಿ ನಮ್ಮ ಉಡುಪಿನಲ್ಲಿ ವಾತಾವರಣದಲ್ಲಿನ ಸಕಾರಾತ್ಮಕ ಊರ್ಜೆಯನ್ನು ಅಕರ್ಷಿಸಿ ಅದನ್ನು ಪುನಃ ವಾತಾವರಣದಲ್ಲಿ ಪ್ರಕ್ಷೇಪಿಸುವ ಕ್ಷಮತೆ ಇರಬೇಕು. ಆ ಯೋಗದಿಂದ ಈ ಊರ್ಜೆಯಿಂದ ಅದನ್ನು ನೋಡುವವರಿಗೂ ಲಾಭವಾಗಬಹುದು. ವಸ್ತ್ರಗಳಲ್ಲಿ ಅದನ್ನು ತೊಡುವವರ ಸೂಕ್ಷ್ಮದಲ್ಲಿನ ನಕಾರಾತ್ಮಕ ಸ್ಪಂದನಗಳಿಂದ ರಕ್ಷಿಸುವ ಮತ್ತು ಆಧ್ಯಾತ್ಮಿಕ ಉಪಾಯವನ್ನು ಮಾಡುವ ಕ್ಷಮತೆ ಇರಬೇಕು. ಮನುಕುಲದ ಮೇಲೆ ವಸ್ತ್ರಗಳಿಂದ ಬಹಳಷ್ಟು ಪ್ರಭಾವ ಬೀರುತ್ತದೆ. ತಾಮಸಿಕ ವಸ್ತ್ರಗಳಿಂದ ಮನಸ್ಸು ಚಂಚಲ ಮತ್ತು ಆಕ್ರಮಕ ಹಾಗೂ ರಾಜಸಿಕ ವಸ್ತ್ರಗಳಿಂದ ಅಸ್ವಸ್ಥತೆ ನಿರ್ಮಾಣವಾಗುತ್ತದೆ. ಸಾತ್ತ್ವಿಕ ವಸ್ತ್ರಗಳು ಮನಸ್ಸಿನಲ್ಲಿ ಸ್ಥಿರತೆ ಮತ್ತು ಶಾಂತಿ ನಿರ್ಮಿಸುತ್ತವೆ. 9ಮೊಳದ ಸೀರೆ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತವೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆಯಿಂದ ನಿಷ್ಕರ್ಷಕ್ಕೆ ಬಂದಿತು. ದುರ್ದೈವದಿಂದ ಇಂದು ನಗರ ಪ್ರದೇಶಗಳಿಂದ 9 ಮೊಳದ ಸೀರೆಗಳ ನಾಮಾವಶೇಷವಾಗಿವೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English