- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತೆಳ್ಳಗಾಗಲು ಆರೋಗ್ಯಕರ 10 ಟಿಪ್ಸ್

Weight loses tips [1]

ದೇಹದ ತೂಕವನ್ನು ಸಮತೋಲನದಲ್ಲಿ ಇಡಬೇಕು. ದಪ್ಪವಾದರೆ ದೇಹದ ಸುಂದರ ಆಕಾರ ಹಾಳಾಗುವುದು ಮಾತ್ರವಲ್ಲ ಅನೇಕ ಕಾಯಿಲೆಗಳು ಬರಲಾರಂಭಿಸುತ್ತದೆ. ಕೆಲವರು ಸಣ್ಣಗಾಗಲು ಡಯಟ್ ಮಾಡಿ ತೆಳ್ಳಗಾಗುತ್ತಾರೆ, ಆದರೆ ಆ ಡಯಟ್ ನಿಲ್ಲಿಸಿದ ಸ್ವಲ್ಪ ದಿನದಲ್ಲಿಯೇ ಪುನಃ ದಪ್ಪಗಾಗುತ್ತಾರೆ. ಇನ್ನು ಕಟ್ಟುನಿಟ್ಟಿನಡಯಟ್ ಮಾಡಿದರಂತೂ ಪಥ್ಯದಲ್ಲಿರುವಂತೆ ಅನಿಸುವುದು, ಆದರೆ ಬಾಯಿಗೆ ರುಚಿಕರವಿಲ್ಲದೆ ಡಯಟ್ ಬಗ್ಗೆ ಬೇಸರಿಕೆ ಬಂದು ಬಿಡುತ್ತದೆ. ಆದರೆ ಈ ಕೆಳಗೆ ಸಮತೂಕಕ್ಕಾಗಿ 10 ಟಿಪ್ಸ್ ಹೇಳಲಾಗಿದೆ. ಅದನ್ನು ಪಾಲಿಸಿದರೆ ಪಥ್ಯವನ್ನು ಪಾಲಿಸಬೇಕಾಗಿಲ್ಲ, ಇಲ್ಲಿ ಹೇಳಿರುವ ಟಿಪ್ಸ್ ಗಳನ್ನು ಗಮನದಲ್ಲಿಟ್ಟು ಪಾಲಿಸಿದರೆ ಸಾಕು ಆಕರ್ಷಕ ಮೈಕಟ್ಟು ನಿಮ್ಮದಾಗುವುದು.

1.ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿಯಬೇಕು. ಪ್ರತಿದಿನ 8-10 ಲೋಟ ನೀರು ಕುಡಿಯಬೇಕು.

2.ಸಕ್ಕರೆಯಂಶವಿರುವ ತಿಂಡಿಗಳನ್ನು ಮಿತಿಯಲ್ಲಿ ತಿನ್ನಿ. ಬರೀ ತಿಂಡಿ ಮಾತ್ರವಲ್ಲ ಸಕ್ಕರೆಯಂಶವಿರುವ ಆಹಾರ ಪದಾರ್ಥಗಳನ್ನು ಮಿತಿಯಲ್ಲಿ ತಿನ್ನಿ.

3.ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಸೊಪ್ಪಿನಂಶವನ್ನು ಹೆಚ್ಚಾಗಿ ತಿನ್ನಿ.

4.ಟೀ ಬದಲು ಗ್ರೀನ್ ಟೀ ಕುಡಿಯಿರಿ. ದಿನದಲ್ಲಿ ಒಂದು ಗ್ಲಾಸ್ ಕುಡಿದರೆ ಸಾಕು.

5.ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಿ, ಕ್ಯಾರೆಟ್ ಪ್ರತಿದಿನ ತಿನ್ನಬೇಕು. ಆದರೆ ಮಿತಿಯಲ್ಲಿ ತಿನ್ನಿ. ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳನ್ನು ಸೇವಿಸಿ.

6.ಆಹಾರವನ್ನು ಹೊಟ್ಟೆ ತುಂಬಾ ತಿನ್ನುವ ಬದಲು ಸ್ವಲ್ಪ-ಸ್ವಲ್ಪ ಆಹಾರವನ್ನು ತಿನ್ನಿ. ಕಾರ್ಬೋಹೈಡ್ರೇಟ್ ಆಹಾರವನ್ನು ಮಿತಿಯಲ್ಲಿ ತಿನ್ನಿ, ಪ್ರೊಟೀನ್ ಇರುವ ಆಹಾರವನ್ನು ತಿನ್ನಿ.

7.ಆರೋಗ್ಯಕರ ಕೊಬ್ಬಿನಂಶವಿರುವ ಆಹಾರವನ್ನು ತಿನ್ನಿ. ಮೀನು, ಅಗಸೆದ ಬೀಜ, ಆಲೀವ್ ಎಣ್ಣೆ, ಫಿಶ್ ಆಯಿಲ್ ಇವುಗಳ ಸೇವನೆ ತಂಬಾ ಒಳ್ಳೆಯದು.

8.ಗಂಟೆಗಳ ಮಾತ್ರ ನಿದ್ದೆ ಮಾಡಿ, ಅತೀಯಾದ ನಿದ್ದೆ ದೇಹದ ತೂಕವನ್ನು ಹೆಚ್ಚು ಮಾಡಬಹುದು.

9.ಸಣ್ಣಗಾಗುವ ಡಯಟ್ ಹೆಸರಿನಲ್ಲಿ ತಿನ್ನದೇ ಇರುವುದು ಅಥವಾ ಕ್ರಾಶ್ ಡಯಟ್ ಮಾಡುವುದು ಒಳ್ಳೆಯದಲ್ಲ.

10.ದಿನಕ್ಕೆ ಅರ್ಧಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ. ಇಷ್ಟು ಮಾಡಿದರೆ ದಪ್ಪಗಾಗುತ್ತಿದ್ದೇವೆ ಎಂಬ ಚಿಂತೆಯಿಲ್ಲದೆ ಆಕರ್ಷಕ ಮೈಕಟ್ಟನ್ನು ಪಡೆಯಬಹುದು.