- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಋಣಮುಕ್ತ ಹೋರಾಟ ಸಮಿತಿಯಿಂದ ಸಂಸದರ ಭೇಟಿ

nalin [1]

ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ವತಿಯಿಂದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶ್ರೀ ನಳಿನ್ ಕುಮಾರ್ ಕಟೀಲುರವರಿಗೆ ಮೈಕ್ರೋಫೈನಾನ್ಸ್ ಸಾಲಮನ್ನಾ ಹಾಗೂ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಸಂಸದರು ಈ ಬಗ್ಗೆ ಸರಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು ಮತ್ತು ಮೈಕ್ರೋ ಫೈನಾನ್ಸ್ ಗಳ ದಬ್ಬಾಳಿಕೆಗಳ ವಿರುದ್ಧ ನಾನೂ ಧ್ವನಿ ಎತ್ತಲಿದ್ದೇನೆ ಮತ್ತು ಉಡುಪಿಯಲ್ಲಿ ನಡೆಯುವ ಬ್ರಹತ್ ಪ್ರತಿಭಟನೆಯಲ್ಲಿ ನಾನೂ ಭಾಗವಹಿಸಲಿದ್ದೇನೆ ಎಂದು ಹೋರಾಟ ಸಮಿತಿ ಮುಖಂಡರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲೆಯ ಋಣಮುಕ್ತ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರೂ, ಖ್ಯಾತ ನ್ಯಾಯವಾದಿಗಳೂ ಆದ ಬಿ.ಎಮ್.ಭಟ್, ಬೆಳ್ತಂಗಡಿಯ ಎಲ್.ಮಂಜುನಾಥ್, ಕಾರ್ಕಳ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್ ಬೈಲೂರು, ಕಾಪು ಹೋರಾಟ ಸಮಿತಿ ಅಧ್ಯಕ್ಷೆ ಮಮತಾ.ಆರ್, ಮಂಗಳೂರು ತಾಲೂಕು ಸಮಿತಿ ಅದ್ಯಕ್ಷೆ ಯೋಗಿತ, ಕಾರ್ಯದರ್ಶಿ ವಿದ್ಯಾ,ಉಡುಪಿ ಹೋರಾಟ ಸಮಿತಿ ಅಧ್ಯಕ್ಷೆ ಜಯಂತಿ ಕರ್ಕೇ ರ ಮತ್ತು ಮಂಗಳೂರಿನ ಉಷಾ, ಕೈರುನ್ನೀಸ ಮೊದಲಾದ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ 15-20 ಮಹಿಳಾ ಸಾಲ ಸಂತ್ರಸ್ತರು ಉಪಸ್ಥಿತರಿದ್ದರು.

ಮೈಕ್ರೋ ಫೈನಾನ್ಸ್ ಕಂಪೆನಿಯವರು ಸರಕಾರದ ಒಳ್ಳೆಯ ಯೋಜನೆಯನ್ನ. ಹಾಳು ಮಾಡಿ ದೇಶಕ್ಕೂ ಜನತೆಗು ಮೋಸ ಮಾಡಿದ್ದಾರೆ ಎಂದು ಈ ಸಂದರ್ಬ ಬಿ.ಎಂ.ಭಟ್ ವಿವರಿಸಿದರು. ಬಡಮಹಿಳೆಯರ ಮೇಲೆ ಮಾನಸಿಕ‌ದೌರ್ಜನ್ಯ ಎಸಗುವ ಇವರ ನಡೆ ಅಪಾಯಕಾರಿಯಾಗಿದೆ. ಬಡ ಮಹಿಳೆಯರ ಸಬಲೀಕರಣ ಮಾಡಬೇಕಾದ ಮೈಕ್ರೋ ಪೈನಾನ್ಸ್ ಗಳು ಆರ್‌ಬಿ.ಐ. ಲೈಸೆನ್ಸ್ ಉಲ್ಲಂಘಿಸಿ ಬಡ ಮಹಿಳೆಯರನ್ನ ಸಾಲ ಶೂಲಕ್ಕೆ ತಳ್ಳಿದ್ದಾರೆ. ಈ ಬಗ್ಗೆ ಡಿಸಿ ಅವರು ಎಲ್ಲದರ ತನಿಖೆ ಮಾಡಲು ಆದೇಶಿಸಿದ್ದರೂ ಕಾಯುವ ತಾಳ್ಮೆ‌ಇಲ್ಲದ ಪೈನಾನ್ಸ್ ಕಂಪೆನಿಯವರು ಪತ್ರಿಕಾ ಗೋಷ್ಟಿ ನಡೆಸಿ ಸಾಲ ಮನ್ನ ಇಲ್ಲ ಎಂದು ಅವರೇ ತೀರ್ಮಾನ ಕೈಗೊಂಡು ಹೇಳಿಕೆ ನೀಡಿರುವುದು ಅವರ ಸರ್ವಾದಿಕಾರಿ ಲೂಟಿಕೋರ ನೀತಿಗೆ ಸಾಕ್ಷಿಯಾಗಿದೆ . ಆದ್ದರಿಂದ ನಾವು ನಮ್ಮ ಸಂಸದರ ಬೇಟಿ ಮಾಡಿ ಮನವಿ ನೀಡಿ ವಸ್ತು ಸ್ತಿತಿಯನ್ನ ವಿವರಿಸಿದ್ದಾಗಿದೆ ಎಂದವರು ಹೇಳಿದರು.