- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂಸಾತ್ಮಕ ಘಟನೆ ಕೈ ಮೀರಿದ್ದೇ ಇಬ್ಬರ ಮೃತ್ಯುವಿಗೆ ಕಾರಣ : ಸಿ.ಎಂ

Yediyurappa [1]ಮಂಗಳೂರು : ಗುರುವಾರ ನಡೆದ  ಹಿಂಸಾತ್ಮಕ ಘಟನೆಯ ವೇಳೆ ಗುಂಪೊಂದು ಕಾನೂನು ಕೈಗೆತ್ತಿಕೊಂಡು ನಗರದ ನೆಲ್ಲಿಕಾಯಿ ರಸ್ತೆ, ರಾವ್ ಅಂಡ್ ರಾವ್ ಸರ್ಕಲ್, ಬಂದರು ಉತ್ತರ ಠಾಣೆ,  ಅಝೀಝುದ್ದೀನ್ ರಸ್ತೆ, ಜೆಎಂ ರಸ್ತೆ,
ಬಿಬಿ ಅಲಾಬಿ ರಸ್ತೆ ಮೊದಲಾದೆಡೆ ಸಾರ್ವಜನಿಕ ಆಸ್ತಿಯನ್ನು ಪುಡಿ ಗೈದಿದ್ದು ಅಲ್ಲದೆ ಕರ್ತವ್ಯ ನಿರತ ಪೋಲೀಸರ ಮೇಲೆ ಮಾರಕ ಅಸ್ತ್ರಗಳಿಂದ ಹಲ್ಲೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಘಟನೆಗಳಿಂದ ಇಬ್ಬರು ಬಲಿಯಾಗಿದ್ದಾರೆ ಎಂದು  ಸಿ.ಎಂ ಬಿ.ಎಸ್ ಯುಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಈ ಘಟನೆಯಲ್ಲಿ ಬಲಿಯಾಗಿರುವ  ಇಬ್ಬರ ಕುಟುಂಬಕ್ಕೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು  ಸಿ.ಎಂ ಬಿ.ಎಸ್ ಯುಡಿಯೂರಪ್ಪ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಟಿ ನಡೆಸಿದ ಬಳಿಕ ಸಿಎಂ ಬಿ.ಎಸ್ ಯುಡಿಯೂರಪ್ಪ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಸ್ಥರ ಜತೆಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ  ಅವರಿಗೆ ಸಾಂತ್ವಾನ ಹೇಳಿದ್ದೇನೆ. ಬೆಂಗಳೂರಿನಲ್ಲಿ ನಾನು ಮುಸ್ಲಿಂ ಮುಖಂಡರೊಂದಿಗೆ ನಾನು ಮಾತನಾಡಿ ಮನವರಿಕೆ ಮಾಡುವ ಕೆಲಸ ಮಾಡಿದ್ದೇನೆ. ಆದರೆ ಮಂಗಳೂರಿನಲ್ಲಿ ಕಾನೂನು ಕೈಗೆತ್ತಿಕೊಂಡ ಹಿನ್ನೆಲೆ ಇಂತಹ ಘಟನೆ ನಡೆದಿದೆ”ಎಂದರು.

“ಜಿಲ್ಲೆಯ ಹಿಂದೂ ಮುಸ್ಲಿಂ, ಕ್ರೈಸ್ತ ಮುಖಂಡರು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ಪ್ಯೂ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ಪ್ಯೂ ಸಡಿಲಿಕೆ ಮಾಡಿ ಡಿ.22 ಭಾನುವಾರ ಹಗಲಿನಲ್ಲಿ ಕರ್ಪ್ಯೂ ಹಿಂದಕ್ಕೆ ಪಡೆದು, ಡಿ.22 ರ ರಾತ್ರಿ ಮಾತ್ರ ಜಾರಿಗೊಳಿಸುವಂತೆ ಸೂಚಿಸಿದ್ದೇನೆ. ಡಿ.23 ರಿಂದ ಕ್ರಿಸ್ಮಸ್ ಸಮೇತ ಹಬ್ಬಹರಿದಿನಗಳನ್ನು ಆಚರಿಸಲು ಅನುಮಾಡಿಕೊಡುವ ನಿಟ್ಟಿನಲ್ಲಿ ಕರ್ಪ್ಯೂ ಸಂಪೂರ್ಣ ಹಿಂಪಡೆಯಲಾಗುವುದು, ಆದರೆ ನಿಷೇಧಾಜ್ಞೆ ಮುಂದುವರಿಯಲಿದೆ” ಎಂದು ಹೇಳಿದರು.

ಇನ್ನು ಕೇರಳದ ಪತ್ರಕರ್ತರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ, ’ಕೇರಳದಿಂದ ಬಂದ ಪತ್ರಕರ್ತರ ಬಳಿ ಗುರುತು ಚೀಟಿ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದ್ದೇನೆ ’ ಎಂದು ಹೇಳಿದರು.

ಬಳಿಕ ಪೇಜಾವರ ಶ್ರೀಗಳ ಅರೋಗ್ಯ ವಿಚಾರಿಸಲು ಹೆಲಿಕಾಪ್ಟರ್ ಮೂಲಕ ಮಣಿಪಾಲಕ್ಕೆ ತೆರಳಿದರು.