- Mega Media News Kannada - https://kannada.megamedianews.com -

ಮಂಗಳೂರು ಹಿಂಸಾಚಾರದಲ್ಲಿ ಪೊಲೀಸರು ಸುಮ್ಮನಿರುತ್ತಿದ್ದರೆ ಹಲವರ ಸಾವು ಸಂಭವಿಸುತ್ತಿತ್ತು

lati charge [1]ಮಂಗಳೂರು : ಗುರುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸ್ಟೇಟ್ ಬ್ಯಾಂಕ್ ಬಳಿ ಒಂದು ಕೆಎಸ್ ಆರ್ ಪಿ ಬಸ್ ಮಾತ್ರ ಇತ್ತು ಅದರಲ್ಲಿ ಸೀಮಿತ ಸಿಬ್ಬಂದಿಗಳು ಇದ್ದರು ಜತೆಗೆ ಮಂಗಳೂರು ದಕ್ಷಿಣ ಠಾಣೆಯ ಕರ್ತವ್ಯ ನಿರತ ಅಧಿಕಾರಿಗಳು ಇದ್ದರು, ಅಲ್ಲಿ ಕೆಲವು ಮುಸ್ಲಿಂ ಬಾಂಧವರು ಗುಂಪು ಸೇರಿದ್ದರು. ಪೊಲೀಸರು ಅವರಿಗೆ ನಿಷೇದಾಜ್ಞೆಯನ್ನು ಮನವರಿಕೆ ಮಾಡಿದ್ದರು.

ಸ್ವಲ್ಪ ಹೊತ್ತಿನ ನಂತರ ಸುಮಾರು 100 ರಷ್ಟು ಯುವಕರ ಗುಂಪು ಸೇರಿ ಘೋಷಣೆ ಕೂಗ ತೊಡಗಿದರು ಅವರು ನಿಷೇದಾಜ್ಞೆಯ ನಡುವೆಯೂ ಪೊಲೀಸರನ್ನು ಕೆರಳಿಸಲು ಮುಂದಾದರು. ತಕ್ಷಣವೇ ಮಾಹಿತಿ ಮಂಗಳೂರು ದಕ್ಷಿಣ ಠಾಣೆಗೆ ಮತ್ತು ಪೊಲೀಸ್ ಕಮಿಷನರ್ ಅವರಿಗೆ ರವಾನಿಸಲಾಯಿತು. ಅವರು ಹೆಚ್ಚಿನ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು.

ತಕ್ಷಣ ಸ್ಥಳಕ್ಕಾಗಮಿಸಿದ ಮಂಗಳೂರು ಕಮಿಷನರ್ ಪಿ.ಎಸ್ ಹರ್ಷ ಪರಿಸ್ಥಿತಿ ಅವಲೋಕಿಸಿ ಗಲಭೆಕೋರರಿಗೆ ಸ್ಥಳದಿಂದ ಚದುರಲು ವಿನಂತಿಸಿದರು. ನಿಜವಾಗಿಯೂ ಕಾನೂನು ವ್ಯವಸ್ಥೆಗೆ ಗೌರವ ಕೊಡುವವರಾಗಿದ್ದರೆ ಅವರು ಅಲ್ಲಿಂದ ಹೊರಡಬೇಕಿತ್ತು. ನಿಷೇದಾಜ್ಞೆಯ ನಡುವೆಯೂ ಪ್ರತಿಭಟನೆಯ ಹೆಸರಲ್ಲಿ ಗಲಭೆ ಉಂಟುಮಾಡುವುದೇ ಅವರ ಉದೇಶವಾಗಿತ್ತು ಎಂಬುದು ಸ್ಪಷ್ಟವಾಗಿತ್ತು. ಅವರು ಅಲ್ಲಿಯೇ ಸಂಗಹಿಸಿಟ್ಟಿದ್ದ ಕಲ್ಲುಗಳಿಂದ, ಬಾಟಲುಗಳಿಂದ ಪೊಲೀಸರ ಮೇಲೆ ದಾಳಿ ಮಾಡಿಯೇ ಬಿಟ್ಟರು. ಅಲ್ಲಿಯೇ ಇದ್ದ ಪೊಲೀಸರು ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರೂ, ಗಲಭೆಕೋರರು ಪೊಲೀಸರ ನ್ನೇ ಓಡಿಸಲು ಆರಂಭಿಸಿದರು.

lati charge [2]ಇನ್ನೊಂದು ಗುಂಪು ರಾವ್ ಅಂಡ್ ರಾವ್ ಸರ್ಕಲ್ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಲಾರಂಭಿಸಿತು. ಆ ಸಮಯದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಬಸ್ಸು ಸಂಚಾರವು ಇತ್ತು, ಅಲ್ಲಿದ್ದ ಗುಂಪು ಪೊಲೀಸರತ್ತ ಕಲ್ಲು, ಬಾಟಲಿಗಳನ್ನು ಎಸೆಯಲಾರಂಭಿಸಿದರು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಲಾಠಿಚಾರ್ಜ್ ಆರಂಭಿಸಿದರು. ಜೊತೆಗೆ ಹೆಚ್ಚಿನ ಪೊಲೀಸ್, ಅರೆ ಸೇನೆ, ಮೀಸಲು ಪೊಲೀಸರನ್ನು ಕರೆಸಲಾಯಿತು. ಆದರೂ ಗಲಭೆಕೋರರು ದಾಳಿಯನ್ನು ನಿಲ್ಲಿಸಲೇ ಇಲ್ಲ. ಸಾರ್ವಜನಿಕರು ವಿದ್ಯಾರ್ಥಿಗಳು ಭಯ ಬೀತರಾಗಿ ಓಡತೊಡಗಿದರು. ಪೊಲೀಸರಿಗೆ ಸಾರ್ವಜನಿಕರನ್ನು ಗಲಭೆಕೋರರನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟಕರವಾಗಿತ್ತು.

ಪೊಲೀಸರು ಹಲವು ಬಾರಿ ಧ್ವನಿವರ್ಧಕದ ಮೂಲಕ ಗಲಭೆಕೋರರಿಗೆ ಸೂಚನೆಗಳನ್ನು ಕೊಟ್ಟರು ವ್ಯರ್ಥ ವಾಯಿತು. ಕೊನೆಗೆ ಸಾರ್ವಜನಿಕರನ್ನು ಚದುರಿಸಲಾಯಿತು. ಪೊಲೀಸರು ಗಲಭೆಕೋರರ ಮೇಲೆ ಲಾಠಿಪ್ರಹಾರ, ಗ್ಯಾಸ್ ಸೆಲ್ ದಾಳಿಗಳನ್ನು ಮಾಡಿದರು, ಪೊಲೀಸರು ಕೈಗೆ ಸಿಕ್ಕಿದ ಕೆಲವರಿಗೆ ಚೆನ್ನಾಗಿ ಥಳಿಸಿ ಬಂಧಿಸಿದರು. ಆದರೂ ದಾಳಿ ನಿಲ್ಲಲಿಲ್ಲ ಕಟ್ಟಡದ ಮೇಲಿನಿಂದ ಕಲ್ಲುಗಳು ಬೀಳಲಾರಂಭಿಸಿತು, ಪೊಲೀಸರು ಅಲ್ಲಿಗೂ  ಹೋಗಿ ದಾಳಿ ಮಾಡಿದವರನ್ನು ಬಂಧಿಸಿದರು.

ಬಳಿಕ ಹಿಂಸಾಚಾರದಲ್ಲಿ ತೊಡಗಿದವರನ್ನು ಬಂದರು ಉತ್ತರ ಠಾಣೆಯ ವರೆಗೆ ಓಡಿಸಲಾಯಿತು, ಅಝೀಝುದ್ದೀನ್ ರಸ್ತೆ, ಬದ್ರಿಯಾ ಕಾಲೇಜು ರಸ್ತೆ , ಬಾಂಬೆ ಲಕ್ಕಿ ಹೋಟೆಲ್ ರಸ್ತೆಗಳಲ್ಲಿ ದ್ದ ಗಲಭೆ ಕೋರರು ಪೊಲೀಸರತ್ತ ಕಲ್ಲು ಎಸೆಯುತ್ತಾರೆ. ಅಲ್ಲಿಯೂ ಪೊಲೀಸರು ಗಲಭೆ ಕೋರರಿಗೆ ದಾಳಿ ನಿಲ್ಲಿಸುವಂತೆ ವಿನಂತಿಸುತ್ತಾರೆ. ಕೊನೆಗೆ ಕೆಲವು ಮುಸ್ಲಿಂ ನಾಯಕರು ಗಲಭೆ ಮಾಡುವವರತ್ತ ಧಾವಿಸಿ ನಿಲ್ಲಿಸಲು ಸೂಚಿಸುತ್ತಾರೆ. ಅದಕ್ಕೂ ಕ್ಯಾರೇ ಅನ್ನದ ಕಿಡಿಗೇಡಿಗಳು ಮತ್ತೆ ದಾಳಿ ಮುಂದುವರಿಸುತ್ತಾರೆ. ಪೊಲೀಸರು ಅಶ್ರುವಾಯು ದಾಳಿ, ಲಾಠಿ ಚಾರ್ಜ್ ಮಾಡಿದರೂ ಕೇಳದ ಗಲಭೆ ನಿರತ ಗುಂಪಿನತ್ತ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ.

lati charge [3]ಮದ್ಯಾಹ್ನ 2.30 ರಿಂದ ಸಂಜೆ 6 ವರೆಗೆ ಪೊಲೀಸರ ಮೇಲೆ ಕಟ್ಟಡ ದ ಮೇಲಿಂದ ಅಮಾಯಕರತ್ತ ಕಲ್ಲು ಎಸೆಯುತ್ತಿದ್ದರು, ಅವೇಳೆ ನನಗೂ ಮೂರು ಕಲ್ಲುಗಳು ಬಿದ್ದಿದೆ, ತಲೆಯಲ್ಲಿ ಹೆಲ್ಮೆಟ್ ಇದ್ದುದರಿಂದ ಬಚಾವಾದೆ, ಇಬ್ಬರು ದಾಳಿಕೋರರು ಬಂದರು ಉತ್ತರ ಠಾಣೆಯ ಎದುರಿನ ಕಚ್ಚಿ ಮೆಮೊನ್ ಮಸೀದಿ ಮೇಲಿಂದ ನನ್ನ ತಲೆಗೆ ಕಲ್ಲು ಎಸೆದಿದ್ದರು, ಪಕ್ಕದಲ್ಲಿ ಪೊಲೀಸರು ಅದನ್ನು ನೋಡಿದ್ದರು. ಅಷ್ಟರಲ್ಲಿ ಪೊಲೀಸ್ ಕಮಿಶನರ್ ಪಿಎಸ್ ಹರ್ಷ, ಕದ್ರಿ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಬಳಿ ಗಾಳಿಯಲ್ಲಿ ಗುಂಡು ಹರಿಸುವ ಬಗ್ಗೆ ಅಥವಾ ಮೊಣಕಾಲಿಂದ ಕೆಳಗೆ ಗುಂಡು ಹರಿಸುವ ಬಗ್ಗೆ ಸೂಚನೆ ನೀಡಿದ್ದರು.

ನಿಷೇದಾಜ್ಞೆಗೂ ಮುನ್ನ ಎಸ್ಕೆಎಸ್ಎಸ್ಎಫ್  ಸಂಘಟನೆ ಗೆ ಪ್ರತಿಭಟನೆ ಮಾಡಲು ಅನುಮತಿ ನೀಡಲಾಗಿತ್ತು ಎನ್ನಲಾಗಿದೆ. ಅದನ್ನೇ ಬಂಡವಾಳವಾಗಿಸಿ ನಿಷೇದಾಜ್ಞೆ ಇದ್ದರು ಗುಂಪು ಸೇರಿ ಗಲಭೆ ಮಾಡಿದುದರಿಂದ ಹಲವಾರು ಪೊಲೀಸರಿಗೆ ಗಾಯಗಳಾಗಿದೆ. ಸಾರ್ವಜನಿಕರಿಗೆ ನೋವುಂಟಾಗಿದೆ. ಇಬ್ಬರ ಪ್ರಾಣ ಹೋಗಿದೆ. ಮಂಗಳೂರಿಗೆ ರಾಷ್ಟ್ರಾ ವ್ಯಾಪ್ತಿಯಲ್ಲಿ ಕೆಟ್ಟ ಹೆಸರು ಬಂದಿದೆ. ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ಸಿಸಿ ಕ್ಯಾಮರಾಗಳು. ರಾವ್ ಅಂಡ್ ರಾವ್ ಸರ್ಕಲ್ ಬಳಿ ಇರುವ ಸಿಸಿ ಕ್ಯಾಮರಾಗಳು, ಬಂದರು ಉತ್ತರ ಠಾಣೆಯಲ್ಲಿರುವ ಸಿಸಿ ಕ್ಯಾಮರಾಗಳು ಅಲ್ಲದೆ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಹಲವು ವಾಣಿಜ್ಯ ಮಳಿಗೆಗಳಲ್ಲಿದ್ದ ಸಿಸಿ ಕ್ಯಾಮರಾಗಳು ಗಲಭೆ ಕೋರರನ್ನು ಗುರುತಿಸಿದೆ. ಪೊಲೀಸರು ಅವುಗಳನ್ನು ಗಮನಿಸಿದರೆ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆ ನೀಡಲು ಸಹಕಾರಿಯಾಗಬಹುದು.

ಕಾಶ್ಮೀರದಲ್ಲಿ ತನ್ನ ಅಸ್ತಿತ್ವ ತೋರಿಸಲು ಕಿಡಿಗೇಡಿಗಳು ಸೇನೆ ಮೇಲೆ, ಅಲ್ಲಿನ ಪೊಲೀಸರ ಮೇಲೆ ದಾಳಿಮಾಡಿದಂತ  ಸನ್ನಿವೇಶ ಮಂಗಳೂರಲ್ಲು ನಡೆದಿದೆ.

lati charge [4]

lati charge [5]

lati charge [6]