- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಳಿಗಾಲದ ಮಾಗಿ ಉತ್ಸವಕ್ಕೆ ಚಾಲನೆ

Chaligala [1]

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಳಿಗಾಲದ ಮಾಗಿ ಉತ್ಸವಕ್ಕೆ ನಿನ್ನೆ ಚಾಲನೆ ದೊರೆಯಿತು.

ಡಿ.24ರಿಂದ ಜನವರಿ 2ರವರೆಗೆ ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಪ್ರಯುಕ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಮೈಸೂರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಮಾಗಿ ಉತ್ಸವದಲ್ಲಿ ಒಳಹೊಕ್ಕುತ್ತಿದ್ದಂತೆ ಸ್ವಾಗತ ಕಮಾನು ಎಲ್ಲರನ್ನು ಸ್ವಾಗತಿಸುತ್ತದೆ. ಭಾರತೀಯ ನೌಕಾಪಡೆ,ವಾಯುಪಡೆ, ಬೆಂಗಳೂರು ಅರಮನೆ,ಚಂದ್ರಯಾನ 2, ಹಳೆ ಅರಮನೆ,ಆನೆಗಾಡಿ,ಕಾವೇರಿ ಮಾತೆ,ನವಿಲು,ಅರಮನೆಯ ತ್ರೀನೇತ್ರ ಶಿವಲಿಂಗ ನಿಂಬೆಹಣ್ಣಿನ ಅಲಂಕಾರ,ಲಿಂಗದ ಮುಂಭಾಗ ಸೇವಂತಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಬಸವ,ಕಳಸ,ಸಿಂಹಾಸನದ ಮೇಲೆ ಆಸೀನರಾದ ಜಯಚಾಮರಾಜ ಒಡೆಯರ್,ಕ್ರಿಸ್ ಮಸ್ ಟ್ರೀ,ಕೃಷ್ಣರಾಜ ಒಡೆಯರ್ ರಥದಲ್ಲಿ ಸಂಚರಿಸುತ್ತಿರುವುದು, ಬೆಂಕಿಗಾಹುತಿಯಾದ ಮೈಸೂರಿನ ಗಂಧದ ಅರಮನೆ, ಆನೆಗಾಡಿ, ಕುದುರೆ ಸಾರೋಟು ಸೇರಿದಂತೆ ಅಂದಿನ ಆಳರಸರ ಪ್ರತಿಕೃತಿಗಳು, ಇಸ್ರೋ ಸಾಧನೆ ಸಾರುವ ರಾಕೆಟ್ ಗಳು ವಿವಿಧ ಬಗೆಯ ಹೂಗಳಿಂದ ನಿರ್ಮಾಣವಾಗಿದ್ದು, ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಅದಲ್ಲದೇ ಆಕರ್ಷಕ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಎಲ್ಲರನ್ನ ಕೈಬೀಸಿ ಕರೆಯುತ್ತಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ನಾಗೇಂದ್ರ,ಜಿ.ಟಿ.ದೇವೇಗೌಡ,ಮೇಯರ್ ಪುಷ್ಪಲತಾ ಜಗನ್ನಾಥ್,ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಜಿ.ಪಂ.ಸಿಇಓ ಜ್ಯೋತಿ ಸೇರಿದಂತೆ ಇತರರು ಭಾಗಿಯಾಗಿದ್ದರು.