ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ : ಕನಕಪುರ ತಹಶೀಲ್ದಾರ್ ದಿಢೀರ್ ವರ್ಗಾವಣೆ

11:16 AM, Tuesday, December 31st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

yesu-pratime

ರಾಮನಗರ : ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕನಕಪುರದ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಲು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರು ಶಂಕು ಸ್ಥಾಪನೆ ಮಾಡಿದ ನಂತರದ ಬೆಳವಣಿಗೆ ಕುತೂಹಲಕ್ಕೆ ಎಡೆಮಾಡಿದೆ.

ಆನಂದಯ್ಯ ಅವರ ಬದಲಿಗೆ ಕನಕಪುರ ತಹಶೀಲ್ದಾರ್ ಆಗಿ ವರ್ಷಾ ಅವರನ್ನು ಆಯ್ಕೆ ಮಾಡಲಾಗಿದೆ. ವರ್ಷಾ ಅವರು ಈ ಮೊದಲು ಯಳಂದೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ಈ ಆದೇಶ ಹೊರಡಿಸಿದ್ದಾರೆ. ಎತ್ತಂಗಡಿಯಾದ ಆನಂದಯ್ಯ ಅವರಿಗೆ ಬೇರೆ ಯಾವುದೇ ಜಾಗ ತೊರಿಸಲಾಗಿಲ್ಲ.

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆಗೆ ಡಿ ಕೆ ಶಿವಕುಮಾರ್ ಅವರು ಶಂಕು ಸ್ಥಾಪನೆ ಮಾಡಿದ ನಂತರ ಅದು ವಿವಾದಕ್ಕೆ ಕಾರಣವಾಗಿತ್ತು. ಕಪಾಲಿ ಬೆಟ್ಟ ಅಭಿವೃದ್ದಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗವನ್ನು ಯೇಸು ಪ್ರತಿಮೆಗೆ ಬಳಸಲಾಗಿದೆ ಎಂದು ವಿವಾದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ತನಿಖೆ ನಡೆಸುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಲಾಗಿತ್ತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English