- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್​ ಶಿಪ್​ : ಎರಡನೇ ಸ್ಥಾನದಲ್ಲಿ ಕೊನೆರು ಹಂಪಿ

hampi [1]

ಮಾಸ್ಕೋ : ಭಾರತದ ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ ಗೆಲುವಿನ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಭಾನುವಾರ ಆರಂಭಗೊಂಡ ಮಹಿಳೆಯರ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಷಿಪ್ನ ಮೊದಲ ದಿನ ಆಂಧ್ರ ಆಟಗಾರ್ತಿ ಕೊನೆರು ಹಂಪಿ 2ನೇ ಸ್ಥಾನ ಅಲಂಕರಿಸಿದ್ದಾರೆ.

ರ್ಯಾಪಿಡ್ ಚೆಸ್ಗಿಂತ ವೇಗದ ಆಟವಾದ ಬ್ಲಿಟ್ಜ್ ಚೆಸ್ ಸ್ಪರ್ಧೆಯ ಎರಡು ದಿನಗಳ ಕೂಟದಲ್ಲಿ 32 ವರ್ಷದ ಹಂಪಿ ಮೊದಲ 5 ಸುತ್ತಿನ ಪಂದ್ಯಗಳ ಬಳಿಕ ಅಗ್ರಸ್ಥಾನದಲ್ಲಿದ್ದರು. ಬಳಿಕ ನಂತರದ 2 ಪಂದ್ಯಗಳಲ್ಲಿ ಡ್ರಾಕ್ಕೆ ತೃಪ್ತಿಪಟ್ಟರು. 8ನೇ ಪಂದ್ಯದಲ್ಲಿ ಪೋಲೆಂಡ್ನ ಮೊನಿಕಾ ಸ್ಯಾಕೊ ವಿರುದ್ಧ ಗೆಲುವು ದಾಖಲಿಸಿದರು. ಆದರೆ ದಿನದ ಕೊನೇ ಮತ್ತು 9ನೇ ಪಂದ್ಯದಲ್ಲಿ ರಷ್ಯಾದ ಕ್ಯಾಟರಿನಾ ಲ್ಯಾಗ್ನೊ ವಿರುದ್ಧ ಸೋಲು ಕಂಡರು. 2018ರ ಚಾಂಪಿಯನ್ ಲ್ಯಾಗ್ನೊ ಪ್ರಶಸ್ತಿ ಉಳಿಸಿಕೊಳ್ಳುವತ್ತ ಕಣ್ಣಿಟ್ಟಿದ್ದು, ದಿನದಂತ್ಯಕ್ಕೆ 8 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ನೆಲೆಸಿದ್ದಾರೆ. ಹಂಪಿ ಜತೆಗೆ ರಷ್ಯಾದ ಅನುಭವಿ ಆಟಗಾರ್ತಿಯರಾದ ಅಲೆಕ್ಸಾಂಡ್ರ ಕೊಸ್ಟೆನಿಯುಕ್, ಡೇರಿಯಾ ಚರೊಚ್ಕಿನಾ ಮತ್ತು ಅಲಿನಾ ಕಶ್ಲಿನ್ಸ್ಕಯಾ ತಲಾ 7 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.