ಅನಿರೀಕ್ಷಿತ ಮಳೆಗೆ ಜಿಲ್ಲೆಯಲ್ಲಿ ಮನೆಕುಸಿತ, ವಿದ್ಯುತ್ ವತ್ಯಯ

2:40 PM, Saturday, September 25th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಅತ್ತಾವರದಲ್ಲಿ ಮಳೆಗೆ ಕುಸಿದ ಮನೆಮಂಗಳೂರು : ಮುಂಗಾರು ಮಳೆ ಕಡಿಮೆಯಾಗಿ ಜನರು ಸ್ವಲ್ಪ ಮಟ್ಟಿಗೆ ಓಡಾಟ ಅರಂಭಿಸುತ್ತಿರುವಾಗಲೇ ಮತ್ತೆ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಪಾರ ನಷ್ಟ, ಹಾನಿ ಸಂಭವಿಸಿದೆ. ಮಂಗಳೂರಿನ ಪಾಂಡೇಶ್ವರದಲ್ಲಿ ರುಕ್ಮಯ ಎಂಬವರ ಮನೆ, ಪಂಪ್ವೆಲ್ ಸಮೀಪ ಒಂದು ಮನೆ ಅರ್ಧದಷ್ಟು ಕುಸಿದಿದೆ, ಬೆಂದೂರುವೆಲ್ ಸಮೀಪ ಆವರಣಗೋಡೆಯೊಂದು ಕುಸಿದು ಬಿದ್ದಿದೆ.  ಅತ್ತಾವರ ಕೆಎಂಸಿ ಆಸ್ಪತ್ರೆ ಎದುರಿನಲ್ಲಿ ಹಳೆಯ ಹಂಚಿನ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಸುರತ್ಕಲ್  ಪರಿಸರದಲ್ಲಿ ಹಾನಿಯಾದ ಪ್ರದೇಶಗಳಿಗೆ ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರು ಬೇಟಿ ನೀಡಿ ಪರಿಶೀಲಿಸಿದರು. ಬೆಳ್ತಂಗಡಿಯಲ್ಲಿಯೂ ಮಳೆ ಅಧೀಕವಾಗಿದ್ದು ಬೆಳೆಹಾನಿ, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದೆ.
ಕಿನ್ನಿಗೋಳಿ ಕೆಂಚನಕೆರೆಯಲ್ಲಿ ಕೋಳಿ ಪಾರಮ್ ಗೆ ನೀರು ನುಗ್ಗಿ 1500 ಕೋಳಿಗಳು ಸತ್ತು, ಸುಮಾರು 2 ಲಕ್ಷ ರೂ ನಷ್ಟ ಸಂಭವಿಸಿದೆ. ಸುರತ್ಕಲ್ ನಲ್ಲಿ ಸುಮಾರು 300 ಮನೆಗೆ ನೀರು ನುಗ್ಗಿದೆ. .
ಬೆಂದೂರ್ ವೆಲ್ನಲ್ಲಿ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್, ಕಂಕನಾಡಿ ಪ್ರದೇಶದ ಮುಗಿಲ ಗುಡ್ಡೆ ಮರಿಯ ಬೇಕರಿ ಲೇನ್, ಕನ್ನೇರಿ ಗುಡ್ಡದ ಅಂಗನವಾಡಿ, ನಾಗುರಿ ಪಂಪ್ ಹೌಸ್ ಬಳಿಯಿರುವ ಕೆಲವು ಅಂಗಡಿ  ಹಾಗೂ ಮನೆಗಳಿಗೆ ಹಾನಿಯಾಗಿದೆ.  ಕೊಡಿಯಾಲ್ ಬೈಲ್, ಅಳಕೆ, ನ್ಯೂಚಿತ್ರಾ ಜಂಕ್ಷನ್, ಅತ್ತಾವರ, ಮಂಕಿಸ್ಡ್ಯಾಂಡ್, ಸುಭಾಸ್ ನಗರ, ಪಾಂಡೇಶ್ವರ, ಅಮೃತ ಟಾಕೀಸ್ ಬಳಿ ಶಿವನಗರ ಮುಂತಾದ ಕಡೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಗಿತ್ತು. ಬಜಪೆಯ ಕೊಳಂಬೆ ಗ್ರಾಮದ ವಿಟ್ಲ ಬೆಟ್ಟುವಿನಲ್ಲಿರುವ ಮನೆ ಮತ್ತು ದೇವಸ್ಥಾನ, ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ಹಲವು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English