ಒತ್ತಡದಿಂದ ಆರೋಗ್ಯ ಸಮಸ್ಯೆ : ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ

10:16 AM, Wednesday, January 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ayush

ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ 2019-20ನೇ ಸಾಲಿನ ಐಇಸಿ ಯೋಜನೆಯಡಿ ಜಿಲ್ಲಾ ಮಟ್ಟದ ಆಯುಷ್ ವಿಚಾರ ಸಂಕಿರಣ(ಎಸ್.ಸಿ.ಪಿ) ಕಾರ್ಯಕ್ರಮವು ಮಂಗಳವಾರ ನಗರದ ಜಿಲ್ಲಾ ಆಯುಷ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ವಾತಾವರಣ ಹಾಗೂ ಆಹಾರ ಪದ್ಧತಿಗಳಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತಿವೆ. ದೈನಂದಿನ ಜೀವನದ ಒತ್ತಡದಲ್ಲಿ ಮನುಷ್ಯನ ಹೃದಯ ಬಡಿತದಿಂದ ಹಿಡಿದು ಎಲ್ಲಾ ಚಟುವಟಿಕೆಗಳಲ್ಲಿ ಏರುಪೇರು ಉಂಟಾಗುತ್ತದೆ ಎಂದು ತಿಳಿಸಿದರು.

ಆಯುಷ್ ಪದ್ಧತಿಗಳ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವುದು, ಆಯುಷ್ ಶಿಕ್ಷಣದ ಮೂಲಕ ಜನರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಬೆಳಗ್ಗೆ ಬ್ರಾಹ್ಮಿ ಮೂಹರ್ತದಲ್ಲಿ ಎದ್ದು, ಸೂರ್ಯ ನಮಸ್ಕಾರ ಮಾಡುವ ಮೂಲಕ ಶರೀರದ ಬಲವನ್ನು ಹೊಂದಬಹುದಾಗಿದೆ ಎಂದು ಅವರು ಹೇಳಿದರು.

ayush

ಶರೀರದ ಜೀರ್ಣಶಕ್ತಿಗೆ ತಕ್ಕಂತೆ ಆಹಾರಗಳನ್ನು ಸೇವಿಸಬೇಕು. ಸಾಮಾನ್ಯ ಖಾಯಿಲೆಗಳು ಬರದಂತೆ ಆಹಾರವನ್ನು ಯಾವ ರೀತಿ ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ವಿಷಯವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.

ಸಾಮಾನ್ಯವಾಗಿ ರಕ್ತ ಹೀನತೆಯಿಂದ ಅನೇಕ ಖಾಯಿಲೆಗಳು ಬರುತ್ತವೆ. ಗರ್ಭಿಣಿ, ಬಾಣಂತಿಯರು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುವಂತಹ ಖರ್ಜೂರವನ್ನು ಸೇವಿಸುವುದರಿಂದ ರಕ್ತ ಹೀನತೆಯನ್ನು ಕಡಿಮೆಗೊಳಿಸಬಹುದು. ಹಾಗೆಯೇ ಕಬ್ಬಿಣದ ಅಂಶವು ಶರೀರದಲ್ಲಿ ಸೇರುವ ಹಾಗೆ ಮೂಸಂಬಿ ರಸವನ್ನು ಜೊತೆಯಲ್ಲಿ ಸೇವಿಸುವುದರಿಂದ ಕಬ್ಬಿಣ ಅಂಶವು ಹೆಚ್ಚುತ್ತದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಸ್ತ್ರೀಯರು ರಕ್ತ ಹೀನತೆಯಿಂದ ಹಾಗೂ ಪೋಷಕಾಂಶಗಳ ಕೊರತೆಯಿಂದ, ಬಿಳಿ ಮುಟ್ಟು ತೊಂದೆರೆ ಉಂಟಾಗುತ್ತದೆ. ಅಂತವರು ಬೆಳಗ್ಗೆ ಸಂಜೆ ಖಾಲಿ ಹೊಟ್ಟೆಗೆ ಎಳೆ ಬೆಂಡೆಕಾಯಿಯನ್ನು ಸೇವಿಸುವುದರಿಂದ ಒಂದು ವಾರದಲ್ಲಿ ಖಾಯಿಲೆಯಿಂದ ಗುಣಮುಕ್ತರಾಗಬಹುದು. ಮೂಲಂಗಿ ಸೊಪ್ಪು, ನುಗ್ಗೆ ಸೊಪ್ಪು, ಗಣಿಕೆ ಸೊಪ್ಪು ಇವುಗಳ ಸೇವನೆಯಿಂದ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಅವರು ಹೇಳಿದರು.

ಬೆಳಗ್ಗಿನ ಜಾವದಲ್ಲಿ ಉತ್ತಮವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಪಡೆಯಬಹುದಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಲಘು ಭೋಜನವನ್ನು ಮಾಡಬೇಕು. ತಾಂಬೂಲ ಸೇವನೆಯು ಶರೀರದ ಆಹಾರ ಜೀರ್ಣ ಕ್ರೀಯೆಗೆ ಹಾಗೂ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುವಲ್ಲಿ ಮೂಳೆ, ಸಂದುಗಳು ಸವಿಯದಂತೆ ಸಹಾಯ ಮಾಡುತ್ತದೆ.

ಆಹಾರದಲ್ಲಿ ಮಧುರಸವುಳ್ಳ ತರಕಾರಿಗಳು, ಹುಳಿಯ ರಸವುಳ್ಳ ತರಕಾರಿಗಳು, ಖಾರ ತರಕಾರಿ, ಕಹಿರಸವುಳ್ಳ ತರಕಾರಿಗಳು, ಒಗರು ರಸವುಳ್ಳ ತರಕಾರಿಗಳನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಶರೀರದ ಸಮತೋಲನ ಬೆಳವಣಿಗೆಯನ್ನು ಕಾಣಬಹುದು ಎಂದು ಅವರು ಹೇಳಿದರು.
ಬೆಟ್ಟದ ನೆಲ್ಲಿಕಾಯಿಯನ್ನು ದಿನಕ್ಕೆ ಒಂದನ್ನು ಸೇವಿಸುವುದು ಉತ್ತಮವಾಗಿರುತ್ತದೆ. ಹಸಿಶುಂಠಿ, ಕರಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಶೀತ, ನೆಗಡಿ, ಸಂದುಗಳ ನೋವುಗಳನ್ನು ಹೋಗಲಾಡಿಸುತ್ತದೆ. ಆಗಾಗ ಬರುವ ತಲೆನೋವನ್ನು ಕೂಡ ಹೋಗಲಾಡಿಸುತ್ತದೆ.

ಹಾಲಿಗೆ ಕಾಲು ಚಮಚ ಅರಸಿನ ಪುಡಿ ಬೆರೆಸಿ ಕುಡಿಯುವುದರಿಂದ ರಕ್ತನಾಳಗಳ ಬಲ, ಕೆಮ್ಮು, ಮೆದುಳಿನ ನರಗಳ ಶಕ್ತಿಗೆ ಅನುಕೂಲವಾಗಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಡಾಲ್ಡಾ ಇತರೆ ಜಿಡ್ಡು ಪದಾರ್ಥಗಳಿಂದ, ಆಲ್ಕೋಹಾಲ್ ಸೇವನೆಯಿಂದ ಯಕೃತ್‌ನ ಶ್ರಮತೆ ಕಡಿಮೆಯಾಗುತ್ತದೆ. ಇದರಿಂದ ಬೊಜ್ಜು, ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತದೆ.

ಜಿಲ್ಲಾ ಮಟ್ಟದ ಆಯುಷ್ ಸೆಮಿನಾರ್ ಎಸ್‌ಸಿಪಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದೈನಂದಿನ ಚಟುವಟಿಕೆಗಳು ಹೇಗಿರಬೇಕು. ಆಯುಷ್ ಪದ್ಧತಿಯಲ್ಲಿ ಇರುವ ಚಿಕಿತ್ಸಾ ವಿಧಾನಗಳು ಹಾಗೆಯೇ ರೋಗಗಳು ಬರದಂತೆ ಹೇಗೆ ಆರೋಗ್ಯವನ್ನು ಕಾಪಾಡಬೇಕು ಎಂಬುವುದರ ಬಗ್ಗೆ ಡಾ.ಶುಭ, ಡಾ.ಈಶ್ವರಿ, ಡಾ.ಪಲ್ಲವಿ ನಾಯಕ್, ಡಾ.ಸೌಪರ್ಣಿಕ, ಡಾ.ಶ್ರೀನಿವಾಸ್, ಡಾ. ರವಿ ಕುಮಾರ ಅವರು ವಿಶೇಷವಾಗಿ ಉಪನ್ಯಾಸ ನೀಡಿ ವಿದ್ಯಾರ್ಥಿಗಳು, ಸಾರ್ವಜನಿಕ ಜೀವನದಲ್ಲಿ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಿದರು. ಡಾ.ಸ್ಮಿತಾ ಅವರು ಪ್ರಾರ್ಥಿಸಿದರು, ಡಾ.ಶ್ರೀನಿವಾಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English