ಮಡಿಕೇರಿ : ರಸ್ತೆ ಅವಘಡದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬಾತ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಕೇರಳದ ಕಾಸರಗೋಡು ಸಮೀಪದ ಕುಂಬ್ಳೆ ನಿವಾಸಿ ರವಿ (36) ಎಂಬಾತನೆ ಸಾವನ್ನಪ್ಪಿರುವ ದುರ್ದೈವಿ.
ನಗರದ ಬಂಗಾಳಿ ಬೀದಿಯ ಅಲ್ತಾಫ್ ಎಂಬವರ ಬಳಿ ಕಳೆದ ಕೆಲ ಸಮಯಗಳಿಂದ ಗುಜರಿ ಕೆಲಸ ನಿರ್ವಹಿಸುತ್ತಿದ್ದ ರವಿ, ಮಂಗಳವಾರ ಬೆಳಗ್ಗೆ ಪತ್ನಿಗೆ ಟೀ ತರಲೆಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್ಗೆ ಆಗಮಿಸಿದ ಸಂದರ್ಭ ದುರ್ಘಟನೆ ಸಂಭವಿಸಿದೆ.
ನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ಖಾಸಗಿ ಬಸ್ನ ಹಿಂಬದಿಯ ಚಕ್ರಕ್ಕೆ ಸಿಲುಕಿಕೊಂಡ ರವಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಅಷ್ಟರಲೆ ಆತ ಕೊನೆಯುಸಿರೆಳೆದಿದ್ದ.
ಮೃತನ ಪತ್ನಿ ಚಂದ್ರ ನೀಡಿದ ದೂರಿನ ಮೇರೆ ನಗರ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಜಯಕುಮಾರ್, ವೃತ್ತ ನಿರೀಕ್ಷಕರಾದ ಕ್ಯಾತೆಗೌಡ ಮತ್ತು ನಗರ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಹಾಗು ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.
Click this button or press Ctrl+G to toggle between Kannada and English