ಅದ್ದೂರಿಯಾಗಿ ನಡೆದ ಎಂಪಿ ಎಂಎಲ್ಎ ನ್ಯೂಸ್ 11ನೇ ಸೌಹಾರ್ದ ಸಂಗಮ

9:36 PM, Wednesday, January 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

mpmla newsಮಂಗಳೂರು : ನಾವೆಲ್ಲರೂ ಜಾತ್ಯಾತೀತವಾಗಿ ಬದುಕಬೇಕು ಸೌಹಾರ್ದತೆ ಎನ್ನುವುದು ನಮ್ಮ ಉಸಿರಾಗಿ ಇಡೀ ಭಾರತ ದೇಶ ಹಸಿರಾಗಿ ಪ್ರಜ್ವಲಿಸಬೇಕು, ಶಾಂತಿ, ಸರ್ವ ಧರ್ಮಗಳ ತವರೂರಾಗಿ ನಲಿದಾಡ ಬೇಕು. ನಾಡು ನುಡಿ ಸಂಸ್ಕೃತಿಗೆ ಒತ್ತು ನೀಡಿದ ಸಾಧಕರನ್ನು ಗುರುತಿಸಿ, ಸೌಹಾರ್ದವಾಗಿ ಸಾಗುವ ಸೌಹಾರ್ದ ಸಂಗಮವು ಎಲ್ಲರಿಗೂ ಮಾದರಿಯಾಗಿ ಸಹಬಾಳ್ವೆಯ ಸಂದೇಶ ಸಾರಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಅವರು ಮಂಗಳೂರು ಪುರಭವನದಲ್ಲಿ ಮಂಗಳವಾರ ಸಂಜೆ ನಡೆದ ಎಂಪಿ ಎಂಎಲ್ಎ ನ್ಯೂಸ್ 11ನೇ ಸೌಹಾರ್ದ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
mpmla news
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು (ಸೌಹಾರ್ದ ಪ್ರಶಸ್ತಿ) , ಡಾ| ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಮತ್ತು ಗೌತಮ್ ಶೆಟ್ಟಿ (ಸಮಾಜರತ್ನ), ಸುಧೀರ್ ಶೆಟ್ಟಿ ಕಣ್ಣೂರು (ಉತ್ತಮ ಜನ ಪ್ರತಿನಿಧಿ), ಡಾ. ಡಿ. ಶಿವಾನಂದ ಪೈ ಮತ್ತು ಡಾ. ಸದಾನಂದ ಪೂಜಾರಿ (ಬೆಸ್ಟ್ ಡಾಕ್ಟರ‍್ಸ್ ಅವಾರ್ಡ್), ಪಿ. ಜಯರಾಮ ರೈ (ಬೆಸ್ಟ್ ಲಾಯರ‍್ಸ್ ಅವಾರ್ಡ್), ಜಗನ್ನಾಥ್ ಶೆಟ್ಟಿ ಬಾಳ (ಮೀಡಿಯಾ ಅವಾರ್ಡ್) , ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ (ಕ್ರೀಡಾ ವರದಿಗಾರ ರಾಜ್ಯ ಪ್ರಶಸ್ತಿ) ಎನ್. ಕೃಷ್ಣಾನಂದ ಮತ್ತು ವಿಜಯಕುಮಾರ್ ಎನ್. (ಉತ್ತಮ ಅಧಿಕಾರಿ ಪ್ರಶಸ್ತಿ), ಡಾ. ಹರೀಶ್ಚಂದ್ರ ಪಿ. ಸಾಲ್ಯಾನ್, ಡಾ. ರಾಜೇಶ್ ಕದ್ರಿ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ (ಸಾಧನಶ್ರೀ ಪ್ರಶಸ್ತಿ), ದಿನೇಶ್ ಅತ್ತಾವರ (ರಂಗಭೂಮಿ ಅವಾರ್ಡ್), ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ (ಯುವರತ್ನ), ಜೇಸಿ ಕೆ.ಎಸ್. ಸುಧೀರ್‌ಕೃಷ್ಣ ಪಾಲ್ತಾಡಿ ಮತ್ತು, ಯು.ಆರ್. ಶೆಟ್ಟಿ (ಯುವ ಪುರಸ್ಕಾರ), ಶಿವಾನಂದ ಕರ್ಕೇರ, ನರಸಿಂಹ ಹೆಗ್ಡೆ, ಪದ್ಮನಾಭ ನರಿಂಗಾನ, ವಿದ್ಯಾಧರ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಇಂದುಶೇಖರ್ ಎಸ್, ಶ್ರೀಮತಿ ಅಶ್ವಿನಿ ಅರಳ ಮತ್ತು ಕೇಶವ ಶಾಂತಿ (ಸಾರ್ವಜನಿಕ ಸನ್ಮಾನ) , ಅಬ್ದುಲ್ ರವೂಫ್, ಅನಿಲ್ ಕುಮಾರ್, ಅಬ್ದುಲ್ ರಹಿಮಾನ್, ಪಕೀರಪ್ಪ ಮರೋಡಿ, ಶಿವಪ್ರಕಾಶ್ ಪೂಂಜ ಹರೇಕಳ, ಇಸ್ಮಾಯಿಲ್ ಮೂಡುಶೆಡ್ಡೆ, ಬಿ. ಶೇಷಪ್ಪ ಬಂಬಿಲ, ಹೊನ್ನಯ್ಯ ಕಾಟಿಪಳ್ಳ, ಶರತ್ ಶೆಟ್ಟಿ ಕಿನ್ನಿಗೋಳಿ, ರಂಜಿತ್ ಶೆಟ್ಟಿ ಕಾವೂರು, ಸೂರಜ್ ಸಾಗರ್ ಕುಂಪಲ, ರಾಜೇಶ್ ಅಮೀನ್, ಶ್ರೀಮತಿ ಜ್ಯೋತಿ ಜೈನ್, ಹರೀಶ್, ಮಂಜುನಾಥ್, ಉದಯ ಮಂಜನಾಡಿ (ಸೌಹಾರ್ದ ಪುರಸ್ಕಾರ) ಸೇರಿದಂತೆ 40 ಮಂದಿ ಸಾಧಕರನ್ನು ಗೌರವಿಸಲಾಯಿತು.

mpmla newsನಮ್ಮ ಸಮಾಜದಲ್ಲಿ ಸಾಧಕರಿಗೆ ವೇದಿಕೆ ನೀಡುವ ಸೌಹಾರ್ದ ಸಂಗಮ ಮಾದರಿ ಕಾರ್ಯಕ್ರಮವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೆನ್ ಲಾಕ್ ಆಸ್ಪತ್ರೆಯ ಆರ್ ಎಂ ಓ ಡಾ. ಜೂಲಿಯನ್ ಸಲ್ದಾನ ಹೇಳಿದರು.
ಸಾಧನೆ ಎಂಬುದು ಸನ್ಮಾನ ಪುರಸ್ಕಾರಗಳ ಮೂಲಕ ಏರು ಎತ್ತರಕ್ಕೆ ಸಾಗಿ, ಇಂತಹ ಅಪೂರ್ವ ಸೌಹಾರ್ದ ಸಂಗಮದ ಮೂಲಕ ಬೆಳೆಯಬೇಕು ಎಂದು ಮಂಗಳೂರಿನ ಹೃದಯ ತಜ್ಞ ಡಾ. ಡಿ. ನರಸಿಂಹ ಪೈ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ, ಸೌಹಾರ್ದತೆ ಎನ್ನುವುದು ಹೇಗಿರುತ್ತದೆ, ಎಲ್ಲಿ ಹುಟ್ಟುತ್ತದೆ ಎಂಬುದನ್ನು ತಿಳಿಯಬೇಕಾದರೆ , ನಾವು ಮೊದಲು ಮನುಷ್ಯರಾಗಿ ಮಾನವೀಯ ಮೌಲ್ಯಗಳಿಗೆ ಜೀವ ತುಂಬಿ ಸರ್ವ ಧರ್ಮೀಯರು ಅಣ್ಣ ತಮ್ಮಂದಿರಂತೆ ಬದುಕಬೇಕು ಮತ್ತು ಇಂತಹ ಸೌಹಾರ್ದ ಸಂಗಮ ಅದಕ್ಕೆ ಪೂರಕವಾಗಬೇಕು ಎಂದು ಕರೆ ನೀಡಿದರು.

mpmla newsಕಾರ್ಯಕ್ರಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ.ಎನ್ ರವರು ಪ್ರಸ್ತಾವಿಸಿದರು, ಶ್ರೀಮತಿ ಮಲ್ಲಿಕಾ ಶೆಟ್ಟಿ ಮತ್ತು ನರೇಶ್ ಸಸಿಹಿತ್ಲು ಅವರು ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ರಸಮಂಜರಿ, ದಿನೇಶ್ ಅತ್ತಾವರ ಅವರಿಂದ ಮಲ್ಟಿ ಸಾರಿ ಡಾನ್ಸ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಲಯನ್ ಕಿಶೋರ್ ಡಿ ಶೆಟ್ಟಿ ಯವರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ‘ಗುಟ್ಟು ಗೊತ್ತಾಂಡ್’ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಂಡಿತು.

mpmla news

mpmla news

mpmla news

mpmla news

mpmla news

mpmla news

mpmla news

mpmla (2)

mpmla (41)

mpmla (39)

mpmla (36)

mpmla (37)

mpmla (42)

mpmla (3)

mpmla (4)

mpmla (5)

mpmla (6)

mpmla (8)

mpmla (7)

mpmla (8)

mpmla (12)

mpmla (14)

mpmla (15)

mpmla (18)

mpmla (19)

mpmla (23)

mpmla (22)

mpmla (21)

mpmla (20)

mpmla (19)

mpmla (24)

mpmla (27)

mpmla (28)

mpmla (26)

mpmla (25)

mpmla (29)

mpmla (30)

mpmla (33)

mpmla (32)

 

mpmla (34)

mpmla (35)

mpmla (38)

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English