‘ರಡ್ಡ್ ಎಕ್ರೆ’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

1:02 PM, Friday, January 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

radd-yekare

ಮಂಗಳೂರು : ಒನ್‌ಲೈನ್ ಸಿನಿಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ್ ನಿರ್ದೇಶನದಲ್ಲಿ ತಯಾರಾದ ‘ರಡ್ಡ್ ಎಕ್ರೆ’ ತುಳು ಸಿನಿಮಾ ಭಾರತ್ ಮಾಲ್‌ನ್ ಬಿಗ್ ಸಿನಿಮಾಸ್‌ನಲ್ಲಿ ಬಿಡುಗಡೆ ಗೊಂಡಿತು.

ಸಮಾರಂಭವನ್ನು ಶ್ರೀನಿವಾಸ ಯುನಿರ್ವಸಿಟಿಯ ಚಾನ್ಸಿಲರ್ ರಾಘವೇಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ‘ರಡ್ಡ್ ಎಕ್ರೆ’ ಸಿನಿಮಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿ. ಪ್ರಾದೇಶಿಕ ಭಾಷೆಯಲ್ಲಿ ಬರುತ್ತಿರುವ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಅವರು ಮಾತನಾಡಿ ‘ರಡ್ಡ್ ಎಕ್ರೆ’ ಸಿನಿಮಾ ಉತ್ತಮ ಹಾಸ್ಯ ಮತ್ತು ಒಳ್ಳೆಯ ಕತೆಯನ್ನೊಳಗೊಂಡಿದ್ದು ಸಿನಿಮಾವು ಪ್ರೇಕ್ಷಕರ ಇಂದಿನ ಸ್ಥಿತಿ ಗತಿಗೆ ಹತ್ತಿರವಾಗಿದೆ. ಹೀಗಾಗಿ ಸಿನಿಮಾವನ್ನು ಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಾರೆ ಎಂದರು.

radd-yekare

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸತೀಶ್ ಆಚಾರ್ಯ, ನಿರ್ಮಾಪಕರಾದ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್, ನಿರ್ದೇಶಕ ವಿಸ್ಮಯ ವಿನಾಯಕ್, ರಾಕೇಶ್ ಕದ್ರಿ, ಮೈಮ್ ರಾಮದಾಸ್, ಮಂಜು ರೈ, ಸಂಗೀತ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ, ನಿರೀಕ್ಷಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಆರ್.ಜೆ.ಅರ್ಪಿತ್ ಕಾರ್ಯಕ್ರಮ ನಿರ್ವಹಿಸಿದರು.

‘ರಡ್ಡ್ ಎಕ್ರೆ’ ಸಿನಿಮಾ ಉತ್ತಮ ಹಾಸ್ಯ, ಮನರಂಜನೆಯನ್ನೊಳಗೊಂಡಿದ್ದು, ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.

ತಾರಾಗಣದಲ್ಲಿ ಪೃಥ್ವಿ ಅಂಬಾರ್, ನಿರೀಕ್ಷಾ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್ , ಮೈಮ್ ರಾಮ್‌ದಾಸ್ , ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಮಂಜು ರೈ ಮುಳೂರು ಮೊದಲಾದವರು ಅಭಿನಯಿಸಿದ್ದಾರೆ.

ಅಣ್ಣ ತಮ್ಮಂದಿರು ತಂದೆಯಿಂದ ದೊರೆತ ಆಸ್ತಿಯನ್ನು ಡೀಲ್ ಮಾಡುವ ಹಾಸ್ಯ ಕಥೆಯನ್ನಾಧರಿತ ‘ರಡ್ಡ್ ಎಕ್ರೆ ’ ಸಿನಿಮಾ ಎರಡು ಗಂಟೆಗಳ ಕಾಲ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English