ಮೈಸೂರು : ಕಳೆದ ನವೆಂಬರ್ ನಲ್ಲಿ ದುಷ್ಕರ್ಮಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್ಸೇಠ್ ಅವರನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ರಾಜಕೀಯ ವೇದಿಕೆಗಳಲ್ಲೂ ಅತ್ಯಂತ ಅಪ್ತರಾಗಿರುತ್ತಿದ್ದ ತನ್ವೀರ್ಸೇಠ್ ಹಾಗೂ ಪ್ರತಾಪ್ ಸಿಂಹ ನಡುವೆ ಒಳ್ಳೆಯ ಒಡನಾಟವಿದೆ. ತನ್ವೀರ್ ಸೇಠ್ ಹಲ್ಲೆಗೊಳಗಾದ ಮರುದಿನವೇ ಪ್ರತಾಪ್ ಸಿಂಹ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಹಲ್ಲೆ ಬಳಿಕ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ವೀರ್ಸೇಠ್, ಆರೋಪಿಗಳ ಗುರುತು ಪತ್ತೆ ಮಾಡಲು ನಿನ್ನೆ ಮೈಸೂರಿಗೆ ಬಂದಿದ್ದಾರೆ. ಸದ್ಯ ಮೈಸೂರಿನಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.
Click this button or press Ctrl+G to toggle between Kannada and English